Family Politics: ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ರಾಜಕೀಯಕ್ಕೆ ಬರಲ್ಲ, ನೂರಕ್ಕೆ ನೂರರಷ್ಟು ಸತ್ಯ; Murugesh Nirani

ಪ್ರಧಾನಮಂತ್ರಿಗಳು ಹೇಳಿದ್ದನ್ನ ನಾನು ಪಾಲಿಸುತ್ತೇನೆ. ಮೊದಲಿನಿಂದಲೂ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದಾರೆ ನಾವು ಮುಂದುವರೆಯುತ್ತೇವೆ. ನೂರಕ್ಕೆ ನೂರರಷ್ಟು ಮೂರನೆಯವರು ರಾಜಕೀಯ ಕ್ಕೆ ಬರುವುದಿಲ್ಲ. ಇದರಲ್ಲಿ ಯಾವುದೇ ಸಂಶಯವೇ ಬೇಡ ಎಂದು ಸ್ಪಷ್ಟಪಡಿಸಿದರು.

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

  • Share this:
ಕುಟುಂಬ ರಾಜಕಾರಣದ (Family Politics) ಬಗ್ಗೆ ಮೋದಿ ಹೇಳಿಕೆ ವಿಚಾರದ ಕುರಿತು ಸಚಿವ ಮುರುಗೇಶ್ ನಿರಾಣಿ (Minister Murugesh Nirani) ಬೆಳಗಾವಿಯಲ್ಲಿ (Belagavi) ಪ್ರತಿಕ್ರಿಯಿಸಿದ್ದಾರೆ. ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಸ್ಪರ್ಧಿಸಿದ್ರೆ, ಆವತ್ತೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರ್ತಿನಿ ಎಂದು ಹೇಳಿದ್ದಾರೆ. ಯಾರು ಮೊದಲಿಂದಲೂ ಇಬ್ಬರು ಜನರು ಇದ್ದಾರೆ ಕುಟುಂಬದಲ್ಲಿ. ನಿರಾಣಿ ಕುಟುಂಬದ (Nirani Family) ಮೂರನೇಯರು ರಾಜಕೀಯಕ್ಕೆ ಬರುತ್ತಿಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯ. ಮೂರನೇ ವ್ಯಕ್ತಿ ಸ್ಪರ್ಧೆ ಅದು ಮಾಧ್ಯಮಗಳ ಸೃಷ್ಟಿ. ಸಂಗಮೇಶ್ ನಿರಾಣಿ (Sangamesh Nirani) ಕಳೆದ ನಾಲ್ಕು ವರ್ಷದಿಂದ ಜಮಖಂಡಿಯಲ್ಲಿ (Jamakhandi) ಸಭೆ ಸಮಾರಂಭ ಮಾಡಿಲ್ಲ. ನನಗಗೂ ಈ ರೀತಿಯ ಅಪವಾದ ಬರಬಾರದು ಅಂತಾ ಜಮಖಂಡಿ ಮಾಜಿ ಶಾಸಕರ (Jamakhandi Ex MLA) ಅನುಮತಿ ಪಡೆದು ಹೋಗುತ್ತಿರುವೆ ಎಂದು ಹೇಳಿದರು.

ನಾನು ನನ್ನ ಸಹೋದರ ಹನುಮಂತ ನಿರಾಣಿ ಹೊರತು ಪಡಿಸಿ ನಮ್ಮ ಮನೆಯಲ್ಲಿ ಯಾರು ಚುನಾವಣೆ ಗೆ ಸ್ಪರ್ಧೆ ಮಾಡುವುದಿಲ್ಲ. ಯಾರಾದರೂ ನನ್ನ ಮಾತುಕೇಳದೇ ನಮ್ಮ ಕುಟುಂಬದವರು ರಾಜಕೀಯ ಬಂದ್ರೆ . ಅವತ್ತೇ ನಾನು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರ್ತಿನಿ ಎಂದು ಕಡ್ಡಿ ತುಂಡು ಮಾಡದಂತೆ ಹೇಳಿದರು.

ಇದು ನೂರಕ್ಕೆ ನೂರರಷ್ಟು ಸತ್ಯ

ಪ್ರಧಾನಮಂತ್ರಿಗಳು ಹೇಳಿದ್ದನ್ನ ನಾನು ಪಾಲಿಸುತ್ತೇನೆ. ಮೊದಲಿನಿಂದಲೂ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದಾರೆ ನಾವು ಮುಂದುವರೆಯುತ್ತೇವೆ. ನೂರಕ್ಕೆ ನೂರರಷ್ಟು ಮೂರನೆಯವರು ರಾಜಕೀಯ ಕ್ಕೆ ಬರುವುದಿಲ್ಲ. ಇದರಲ್ಲಿ ಯಾವುದೇ ಸಂಶಯವೇ ಬೇಡ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  Saffron Flag: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ: KS Eshwarappa ವಿರುದ್ಧ ದೆಹಲಿಯಲ್ಲಿ FIR ದಾಖಲು

ನಾವು ಸ್ಪರ್ಧೆ ಮಾಡುವುದಿಲ್ಲ ಅಂದಮೇಲೆ ಮತ್ತೊಬ್ಬರ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಜಮಖಂಡಿ ಆಗಲೀ, ರಾಮದುರ್ಗ ಆಗಲೀ ಅಲ್ಲಿ ಕಾಲಿಟ್ಟಿಲ್ಲ ಎಂದ ಸಚಿವ ಮುರಗೇಶ ನಿರಾಣಿ ತಿಳಿಸಿದರು.

ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೆ ನೀಡಿದ್ದ ನಿರಾಣಿ

ಹಿಂದಿ ರಾಷ್ಟ್ರಭಾಷೆ ಎನ್ನುವ ಕುರಿತು ನಟ ಅಜಯ್​ ದೇವಗನ್ (Ajay Devagan)​ ಮತ್ತು ಸುದೀಪ್​ (Sudeep) ನಡುವೆ ನಡೆಯುತ್ತಿರುವ ಟ್ವಿಟರ್​ ವಾರ್​ ಭಾರೀ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಬೃಹತ್​ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ (Minister Murugesh Nirani) ನೀಡಿರೋ ಹೇಳಿಕೆ ಬೆಂಕಿಗೆ ತುಪ್ಪ ಸುರಿದಿದ್ದರು.

ಕನ್ನಡ (Kannada) ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಎಂದು ಬೃಮುರುಗೇಶ್‌ ನಿರಾಣಿ ಹೇಳಿದ್ದಾರೆ. ಮೈಸೂರಿನಲ್ಲಿ (Mysore) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆಯೂ ನಮಗೆ ಬೇಕು, ಬೇರೆ ಭಾಷೆಯನ್ನು ಕಲಿಯೋದು ತಪ್ಪೇನಿಲ್ಲ. ಹೆಚ್ಚು ಭಾಷೆ ಕಲಿಯುವುದರಿಂದ ನಾವು ಶ್ರೀಮಂತರಾಗುತ್ತೇವೆ ಎಂದಿದ್ದರು.

Hubli-Dharwad ಅವಳಿ ನಗರದಲ್ಲಿ FMCG ಕ್ಲಸ್ಟರ್ ಸ್ಥಾಪನೆ

ಹುಬ್ಬಳ್ಳಿ-ಧಾರವಾಡ (Hubli Dharwad) ಅವಳಿ ನಗರದಲ್ಲಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (FMCG) ಕ್ಲಸ್ಟರ್ ಸ್ಥಾಪನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ (Murugesh Nirani) ತಿಳಿಸಿದ್ದಾರೆ.

ಟೈ ಹುಬ್ಬಳ್ಳಿ ಆಯೋಜಿಸಿದ್ದ ಟೈಕಾನ್ 2022ನಲ್ಲಿ ಮಾತನಾಡಿದ ಮುರುಗೇಶ ನಿರಾಣಿ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಯಾಗುತ್ತಿರುವುದರಿಂದ ಇಲ್ಲಿ ಭಾರೀ ಮೊತ್ತದ ಬಂಡವಾಳ (Investment) ಹೂಡಿಕೆಯಾಗಲಿದ್ದು, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ಇದನ್ನೂ ಓದಿ:  Chitradurga: ಮಹಾತ್ಮ ಗಾಂಧಿ ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು? ಸಿದ್ದು ಟ್ವೀಟ್​ಗೆ ನಾರಾಯಣಸ್ವಾಮಿ ತಿರುಗೇಟು

ಶೀಘ್ರದಲ್ಲಿಯೇ ಭೂಸ್ವಾಧಿನ ಪ್ರಕ್ರಿಯೆ

ಹೊಸದಾಗಿ ಸ್ಥಾಪನೆಯಾಗುತ್ತಿರುವ FMCG ಕ್ಲಸ್ಟರ್​ಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳ ಜೊತೆಗೆ ರಾಜ್ಯ ಸರ್ಕಾರ ಸಾಕಷ್ಟು ರಿಯಾಯಿತಿಯನ್ನು ನೀಡಿದೆ ಎಂದರು. ಹುಬ್ಬಳ್ಳಿ ಬೆಳಗಾವಿ ಮಾರ್ಗ ಮಧ್ಯೆ ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಚರ್ಚೆಯ ಹಂತದಲ್ಲಿದೆ. ಖಾನಾಪುರ ರೈಲ್ವೆ ನಿಲ್ದಾಣದ ಬಳಿ ಕೈಗಾರಿಕೆಗಳ ಸ್ಥಾಪನೆಗೆ ಸಾವಿರ ಎಕರೆ ಭೂಸ್ವಾಧಿನ ಪ್ರಕ್ರಿಯೆ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ನಿರಾಣಿ ತಿಳಿಸಿದರು.
Published by:Mahmadrafik K
First published: