• Home
  • »
  • News
  • »
  • state
  • »
  • Otters in Tungabhadra: ತುಂಗಭದ್ರೆಯ ಒಡಲಲ್ಲಿ ನೀರುನಾಯಿಗಳ ಸಂಸಾರ, ಅಪರೂಪದ ಜೀವ ಸಂಕುಲಕ್ಕೆ ಜನರಿಂದ ಸಂಚಕಾರ!

Otters in Tungabhadra: ತುಂಗಭದ್ರೆಯ ಒಡಲಲ್ಲಿ ನೀರುನಾಯಿಗಳ ಸಂಸಾರ, ಅಪರೂಪದ ಜೀವ ಸಂಕುಲಕ್ಕೆ ಜನರಿಂದ ಸಂಚಕಾರ!

ನೀರುನಾಯಿ

ನೀರುನಾಯಿ

ರಾಜ್ಯದಲ್ಲಿ ನೀರು ನಾಯಿಗಳು ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಈಗ ತುಂಗಭದ್ರಾ ನದಿಯಲ್ಲಿ ಪ್ರವಾಹ ಅಧಿಕವಾಗಿರುವ ಕಾರಣ ನದಿಯ ದಡದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ.

  • Share this:

ಕೊಪ್ಪಳ: ನೀರು ನಾಯಿಗಳು (Otters ) ನದಿ ದಡದ (Bank of River) ಪೊಟರೆಯಲ್ಲಿ ವಾಸವಾಗುವ ವಿಶಿಷ್ಠ ಪ್ರಾಣಿ (Animal). ಸಸ್ತನಿಯಾಗಿರುವ ನೀರು ನಾಯಿಗಳು ಕೊಪ್ಪಳ (Koppal), ವಿಜಯನಗರ (Vijayanagar) ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ (Tungabhadra) ಜಲಾಶಯದಲ್ಲಿ (Dam), ನದಿಯಲ್ಲಿ (River) ಕಾಣಸಿಗುತ್ತವೆ. ನದಿಯಲ್ಲಿ ಮೀನು, ಏಡಿ, ಕಪ್ಪೆ, ಬಾತುಕೋಳಿ ಹಾಗೂ ಭೂಮಿಯಲ್ಲಿ ಹುಲ್ಲುಗಳನ್ನು ತಿನ್ನುವ ನೀರು ನಾಯಿಗಳು ಜಲಚರ ಹಾಗೂ ಸಸ್ಯಹಾರವನ್ನು ಸೇವಿಸುತ್ತವೆ. ಹಿಂದಿನಿಂದಲೂ ಇಲ್ಲಿ ನೀರು ನಾಯಿಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನೀರು ನಾಯಿಗಳ ಸಂತತಿ ಮೇಲೆ ಮಾನವರ ಅಕ್ರಮಣ ನಡೆಯುತ್ತಿದೆ.


ತುಂಗಭದ್ರಾ ನದಿಯಲ್ಲಿ ನೀರು ನಾಯಿಗಳ ಸಂಸಾರ


ರಾಜ್ಯದಲ್ಲಿ ನೀರು ನಾಯಿಗಳು ಕೊಪ್ಪಳ ಹಾಗು ವಿಜಯನಗರ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಈಗ ತುಂಗಭದ್ರಾ ನದಿಯಲ್ಲಿ ಪ್ರವಾಹ ಅಧಿಕವಾಗಿರುವ ಕಾರಣ ನದಿಯ ದಡದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ.


ತುಂಗಭದ್ರೆ ಒಡಲಲ್ಲಿ ನೀರು ನಾಯಿಗಳು


 ಘೋಷಣೆಗಷ್ಟೇ ನೀರು ನಾಯಿ ಸಂರಕ್ಷಿತ ಪ್ರದೇಶ


ನೀರು ನಾಯಿ ಸಂರಕ್ಷಣೆಗಾಗಿ ರಾಜ್ಯ ಸರಕಾರ ಇದನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ ಇದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ದೇಶದ ಕಾಶ್ಮೀರ, ಆಸ್ಸಾಂ ಹಾಗು ದಕ್ಷಿಣ ಭಾರತದಲ್ಲಿ ಕಾಣುವ ‌ನೀರು ನಾಯಿಗಳು ನೀಳ ದೇಹ, ದೇಹದಲ್ಲಿ ತುಪ್ಪಳ, ಸೂಕ್ಷ್ಮ ಮೀಸೆಗಳು. ತೋಯ್ದು ತೊಪ್ಪಡಿಯಾಗಿರುವ ನೀರು ನಾಯಿಗಳ ವಿಶಿಷ್ಠ ಆಕಾರದಿಂದ ಗಮನ ಸೆಳೆಯುತ್ತಿವೆ.


ಇದನ್ನೂ ಓದಿ: Cat Death: ನಾಯಿ ದಾಳಿಗೆ ಪ್ರಾಣ ತೆತ್ತ ಬೆಕ್ಕು, 'ಅಮ್ಮು' ಕಳೆದುಕೊಂಡು ಊಟ-ತಿಂಡಿ ಬಿಟ್ಟು ಮನೆಯವರ ಕಣ್ಣೀರು!


 ಮೂಕ ಪ್ರಾಣಿಗಳ ಮೇಲೆ ಮಾನವನ ಆಕ್ರಮಣ


ನೀರು ನಾಯಿಗಳ ಸಂತತಿಯ ಮೇಲೆ ಮಾನವನ ಅಕ್ರಮಣ ಮುಂದುವರಿದಿದೆ. ತುಂಗಭದ್ರಾ ನದಿಯಲ್ಲಿ ಅವೈಜ್ಞಾನಿಕವಾಗಿ ಎಲ್ಲಿ ಬೇಕೆಂದರೆ‌ ಅಲ್ಲಿ ಮರಳು ಗಣಿಗಾರಿಕೆ ಮಾಡುತ್ತಿರುವುದರಿಂದ ನೀರು ನಾಯಿಗಳು ಅತ್ತ ಸುಳಿಯುತ್ತಿಲ್ಲ. ಇನ್ನೂ ತುಂಗಭದ್ರಾ ನದಿಯ ಗುಂಟ ಮೀನುಗಾರಿಕೆ ಮಾಡುವವರು ಮೀನು ಹಿಡಿಯುವವರು ವಾಟರ ಬಾಂಬ್ ಬಳಸುತ್ತಿದ್ದಾರೆ. ಮೀನುಗಳಿಗೆ ಹಾಕುವ ಗಾಳಕ್ಕೆ ಸಿಡಿಮದ್ದು ಹಾಕಿ ಸಿಡಿಸುತ್ತಿರುವದರಿಂದ ನೀರು ನಾಯಿಗಳ ಸಂತತಿ ಕಡಿಮೆಯಾಗುತ್ತಿದೆ.


ತುಂಗಭದ್ರೆ ಒಡಲಲ್ಲಿ ನೀರು ನಾಯಿಗಳು


ನೀರು ನಾಯಿ ಸಂರಕ್ಷಣೆಗೆ ಮನವಿ


ತುಂಗಭದ್ರಾ ನದಿಯಲ್ಲಿ ಹೇರಳವಾಗಿ ನೀರು ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಅವುಗಳ ಮೇಲೆ ಅಕ್ರಮಣ ನಡೆಯುತ್ತಿರುವ ಕುರಿತು ಈ ಭಾಗದ ಪರಿಸರ ಹಾಗು ವನ್ಯಜೀವಿ ಪ್ರೇಮಿಗಳು ಇಲ್ಲಿಯ ನೀರು ನಾಯಿಗಳನ್ನು ಸಂರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ 2015 ರಲ್ಲಿ ಮುದ್ಲಾಪುರದಿಂದ ಕಂಪ್ಲಿಯವರೆಗೂ 35 ಕಿಮೀ ವರೆಗೂ ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. ಕೊಪ್ಪಳ ಹಾಗು ವಿಜಯನಗರ ಜಿಲ್ಲೆಯ ಎರಡು ದಡದಲ್ಲಿಯೂ ಕಾಣಸಿಗುವ ನೀರು ನಾಯಿಗಳನ್ನು ಸಂರಕ್ಷಿಸಬೇಕು. ಅವುಗಳ ಮೇಲೆ ಆಗುವ ಅಕ್ರಮಣಗಳ ತಡೆಯುವ ವಿಶೇಷ ಪ್ರದೇಶವೆಂದು ಘೋಷಿಸಲಾಗಿದೆ.


 ಇನ್ನೂ ಸಿದ್ಧವಾಗದ ಕ್ರಿಯಾ ಯೋಜನೆ


ನೀರು ನಾಯಿ ಸಂರಕ್ಷಣೆಗಾಗಿ ಕಾವಲುಗಾರರನ್ನು ನೇಮಿಸಬೇಕು. ಅಲ್ಲಿ ಗೋಪುರಗಳನ್ನು ನಿರ್ಮಿಸಿ ನೀರು ನಾಯಿಗಳ ರಕ್ಷಿಸಲು ವಿಶೇಷ ತಂಡ ರೂಪಿಸಬೇಕು ಆದರೆ ಇಲ್ಲಿಯವರೆಗೂ ಈ ಕೆಲಸವಾಗಿಲ್ಲ. ರಾಜ್ಯ ಸರಕಾರ ಘೋಷಣೆ ಮಾಡಿ 7 ವರ್ಷವಾದರೂ ನೀರು ನಾಯಿ ರಕ್ಷಣೆಗಾಗಿ ಯಾವುದೇ ಕ್ರಿಯಾ ಯೋಜನೆ ಸಿದ್ದಪಡಿಸಿಲ್ಲ. ಅರಣ್ಯ ಇಲಾಖೆಯು ಕೇವಲ ಕ್ರಿಯಾ ಯೋಜನೆ ತಯಾರಿಸುತ್ತೇವೆ ಎಂದು ಹೇಳುತ್ತಲೇ ಕಾಲದೂಡುತ್ತಿದೆ.


ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್


ಈ ಮಧ್ಯೆ ಈ ಪ್ರದೇಶ ನೀರು ನಾಯಿಗಳ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ ನಂತರ ಎರಡೂ ಜಿಲ್ಲೆಯಲ್ಲಿ ಕುಡಿವ ನೀರಿನ ಯೋಜನೆಗಳ ಅನುಷ್ಠಾನಗೊಳಿಸಲು ಅಡ್ಡಿಯಾಗಿದೆ. ಕೇವಲ ಘೋಷಣೆಗೆ ಸೀಮಿತವಾದ ನೀರು ನಾಯಿ ಸಂರಕ್ಷಣೆ ಮಾಡಬೇಕು ಅದರೊಂದಿಗೆ ಜನರಿಗೆ ಅವಶ್ಯವಾಗಿರುವ ಕುಡಿವ ನೀರಿನ ಯೋಜನೆಗಳಿಗೆ ಈಗಿರುವ ನಿಯಮಗಳನ್ನು ಬದಲಾಯಿಸಬೇಕು. ಪರಿಸರ ಸಚಿವರೂ ಆಗಿರುವ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಆನಂದಸಿಂಗ್ ವಿಜಯನಗರ ಕ್ಷೇತ್ರದ ಶಾಸಕರು ಆಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

Published by:Annappa Achari
First published: