• Home
 • »
 • News
 • »
 • state
 • »
 • ಏರ್ ಶೋ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ದೇಶದ ಇತರ ಯಾವ ನಗರಕ್ಕೂ ಇಲ್ಲ; ರಕ್ಷಣಾ ಸಚಿವ ರಾಜನಾಥ ಸಿಂಗ್

ಏರ್ ಶೋ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ದೇಶದ ಇತರ ಯಾವ ನಗರಕ್ಕೂ ಇಲ್ಲ; ರಕ್ಷಣಾ ಸಚಿವ ರಾಜನಾಥ ಸಿಂಗ್

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಕಳೆದ ಬಾರಿಯ ಏರ್​ ಶೋ ನಲ್ಲಿ ಕಾರ್​ ಪಾರ್ಕಿಂಗ್​ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಿಂದ ನೂರಾರು ವಾಹನಗಳು ಬೆಂಕಿಗಾವುತಿಯಾಗಿದ್ದವು. ಇದೀಗ ಮತ್ತೆ ಬೆಂಗಳೂರಿನಲ್ಲಿಯೇ ಏರ್ ಶೋ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಮುನ್ನೆಚ್ಚರಿಕೆ ಕ್ರಮ ಪರಿಶೀಲನೆ ಮಾಡಲು ಸ್ವತಃ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದು ಸಭೆ ನಡೆಸಿದ್ದಾರೆ. 

ಮುಂದೆ ಓದಿ ...
 • Share this:

  ಬೆಂಗಳೂರು; ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಏರ್ ಶೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವಪರಿಶೀಲನೆಗಾಗಿ ಇಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಬಳಿಕ ಏರೋ ಇಂಡಿಯಾದ ಬಗ್ಗೆ ಮರುಪರಿಶೀಲನಾ ಸಭೆಯಲ್ಲಿ ಭಾಗಿಯಾದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ ಸಿಂಗ್ ಅವರು, ಏರೋ ಇಂಡಿಯಾ ಬಗ್ಗೆ ಇವತ್ತು ರಿವ್ಯೂ ಮೀಟಿಂಗ್ ಮಾಡಿದೆವು. ಎಲ್ಲಾ ಸಿದ್ದತೆಗಳು ತೃಪ್ತಿ ತಂದಿವೆ ಎಂದು ಹೇಳಿದರು.


  ಬೆಂಗಳೂರಿಗೆ ಏರೋ ಇಂಡಿಯಾ ನಡೆಸಿ ಸಾಕಷ್ಟು ಅನುಭವ ಇದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ರಕ್ಷಣಾ ಸಚಿವಾಲಯ ತೆಗೆದುಕೊಂಡಿದೆ. ಕೋವಿಡ್ ಕುರಿತಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಬಾರಿಯ ದುರ್ಘಟನೆಗಳು ಈ ಬಾರಿ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಏರ್ ಶೋ ಯಶಸ್ವಿಯಾಗಿ ನಡೆಸಲು ಸಿದ್ದತೆ ಕ್ರಮ ಮಾಡಲಾಗಿದೆ. ಏರ್ ಶೋ ಅದ್ದೂರಿ ಹಾಗೂ ಯಶಸ್ವಿಯಾಗಿ ನಡೆಯುತ್ತದೆ. ಏರ್ ಶೋ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ಇತರ ಯಾವ ನಗರಕ್ಕೂ ಇಲ್ಲ. ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಪಾತ್ರ ಮಹತ್ತರ ಎಂದು ಕರ್ನಾಟಕದ ಏರ್ ಶೋ ಬಗ್ಗೆ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.


  ಇದನ್ನು ಓದಿ: ನಾಳೆಯಿಂದ ರಾಜ್ಯಾದ್ಯಂತ ಕೊರೋನಾಗೆ ಲಸಿಕೆ ವಿತರಣೆ. ಒಟ್ಟು 7.17 ಲಕ್ಷ ಮಂದಿ ನೋಂದಣಿ; ಸಚಿವ ಕೆ.ಸುಧಾಕರ್


  ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ಏರೋ ಇಂಡಿಯಾ ನಡೆಸಿಕೊಂಡು ಬರಲಾಗುತ್ತಿದೆ. 2019ರಲ್ಲಿ ಮಾತ್ರ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲಾಬಿ ಮಾಡು ಏರೋ ಇಂಡಿಯಾ ಶೋ ಅನ್ನು ಗೋವಾದಲ್ಲಿ ನಡೆಸಲು ಮುಂದಾಗಿದ್ದರು. ಕೊನೆಗೂ ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಿತು. ಆದರೆ, ಕಳೆದ ಬಾರಿಯ ಏರ್​ ಶೋ ನಲ್ಲಿ ಕಾರ್​ ಪಾರ್ಕಿಂಗ್​ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಿಂದ ನೂರಾರು ವಾಹನಗಳು ಬೆಂಕಿಗಾವುತಿಯಾಗಿದ್ದವು. ಇದೀಗ ಮತ್ತೆ ಬೆಂಗಳೂರಿನಲ್ಲಿಯೇ ಏರ್ ಶೋ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಮುನ್ನೆಚ್ಚರಿಕೆ ಕ್ರಮ ಪರಿಶೀಲನೆ ಮಾಡಲು ಸ್ವತಃ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದು ಸಭೆ ನಡೆಸಿದ್ದಾರೆ.

  Published by:HR Ramesh
  First published: