ಕೋಲಾರದ ಮಾಲೂರಿನ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟ ಒಸಾಟ್ ಸಂಸ್ಥೆ

ರಾಜ್ಯದಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಈಗಾಗಲೇ ಒಸಾಟ್ ಸಂಸ್ಥೆ, ಸರ್ಕಾರಿ ಶಾಲೆಯನ್ನ ಪುನರ್ ನಿರ್ಮಿಸಿದೆ. ಈಗ ಕೋಲಾರ ಜಿಲ್ಲೆಯನ್ನ ಎರಡನೆಯದಾಗಿ ಆಯ್ಕೆ ಮಾಡಿದ್ದು, ಕಳೆದ ಎರಡು ವರ್ಷದಿಂದ ಮಾಲೂರಿನಲ್ಲಿ ಬಾಲಕಿಯರ ಶಾಲೆಯನ್ನ ಅಭಿವೃದ್ಧಿಪಡಿಸಿದ್ದಾರೆ.

ಸರ್ಕಾರಿ ಶಾಲೆ

ಸರ್ಕಾರಿ ಶಾಲೆ

  • Share this:
ಕೋಲಾರ(ಮಾ.24): ನಮ್ಮ ಸರ್ಕಾರಿ ಶಾಲೆಗಳು ಯಾವ ಖಾಸಗಿ ಸ್ಕೂಲಿಗೂ ಕಮ್ಮಿಯಿಲ್ಲ ಎನ್ನುವಂತಿದೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ. ಹೌದು, ಒಸಾಟ್ ದಾನದತ್ತಿ ಸಂಸ್ಥೆ 2018 ರಲ್ಲಿ ಬೀಳುವ ಹಂತದಲ್ಲಿದ್ದ ಇಲ್ಲಿನ ಶಾಲೆಯನ್ನ ಪುನರ್ ನಿರ್ಮಾಣ ಹಾಗೂ ನವೀಕರಣ ಜವಾಬ್ದಾರಿಯನ್ನ ಹೊತ್ತುಕೊಂಡಿತ್ತು.  ಇದೀಗ ಕಾಮಗಾರಿ ಮುಗಿದಿದ್ದು,  ಶಾಲೆಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಲೋಕಾರ್ಪಣೆ ಮಾಡಿದ್ದಾರೆ.  "ಒನ್ ಸ್ಕೂಲ್ ಅಟ್ ಎ ಟೈಮ್"  ಎನ್ನುವ ವಾಕ್ಯದೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವ ಉತ್ತಮ ಕಾರ್ಯವನ್ನು ಒಸಾಟ್ ಸಂಸ್ಥೆ ಮಾಡುತ್ತಿದೆ. ಮಾಲೂರು ಪಟ್ಟಣದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

ಸಂಸ್ಥೆ 95 ಲಕ್ಷ ವೆಚ್ಚದಲ್ಲಿ  ಕಟ್ಟಡವನ್ನ ನಿರ್ಮಿಸಿದ್ದು ಇಲ್ಲಿ ಪಾಠದ ಕೊಠಡಿ, ಶೌಚಾಲಯ ಸೇರಿ ಒಟ್ಟು  5  ಕೊಠಡಿಗಳನ್ನ ನಿರ್ಮಿಸಿದೆ. ಪ್ರಮುಖವಾಗಿ  ನಲಿ-ಕಲಿ ವಿಭಾಗ, ಕಂಪ್ಯೂಟರ್ ತರಬೇತಿ, ಆನ್‍ಲೈನ್ ಕ್ಲಾಸ್ ರೂಂಗಳನ್ನ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಇನ್ನು ಶಾಲೆಯಲ್ಲಿ 160 ಜನ  ವಿದ್ಯಾರ್ಥಿಗಳಿದ್ದು, ಟ್ಯಾಬ್ ಮೂಲಕವು ಶಿಕ್ಷಣವನ್ನು ನೀಡುವ ಉದ್ದೇಶದಿಂದ 14 ಟ್ಯಾಬ್ ಗಳನ್ನ ಉಚಿತವಾಗಿ ನೀಡಿದ್ದು,  ಶಾಲೆಯ ಶಿಕ್ಷಿಕಿಯರಿಗು ಟ್ಯಾಬ್ ಬಳಸುವ ಪರಿಣಿತಿ ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೈಟೆಕ್ ಶಾಲೆಗೆ ಬಂದು ಶ್ರದ್ಧೆಯಿಂದ ಪಾಠವನ್ನ ಕಲಿಯುತ್ತಿದ್ದು ಮಕ್ಕಳ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದು ಕೋಣೆಗೆ ಹೋಗಿ ಇಲ್ಲಿಗೆ ಯಾಕೆ ಬಂದೆ ಎಂಬುದನ್ನು ಮರೆತಿದ್ದೀರಾ? ಇದರ ಹಿಂದಿನ ವೈಜ್ಞಾನಿಕ ವಿವರಣೆ ಇಲ್ಲಿದೆ ನೋಡಿ..!

ಈ ಬಗ್ಗೆ ಮಾತನಾಡಿರುವ ಸಂಸ್ಥೆ ಅಧಿಕಾರಿ ವಾದಿರಾಜ್ ಅವರು, ನಮಗೆ ದೇಶಕ್ಕೆ ಏನಾದರೂ ಸೇವೆ ಮಾಡಬೇಕೆಂಬ ಯೋಚನೆ ಬಂದಾಗ, ನಮ್ಮ ಸಂಸ್ಥೆಯ ಎಲ್ಲ ಸದಸ್ಯರು ಸೇರಿ ಶಾಲೆ ಅಭಿವೃದ್ದಿಗೆ ಮುಂದಾದೆವು, ಈಗ  ಈ ಸೇವೆ ನೆಮ್ಮದಿ ತಂದಿದೆ ಎಂದಿದ್ದಾರೆ.

ಒಸಾಟ್ ಸಂಸ್ಥೆಯ ಕಾರ್ಯವೈಖರಿಗೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ

ರಾಜ್ಯದಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಈಗಾಗಲೇ ಒಸಾಟ್ ಸಂಸ್ಥೆ, ಸರ್ಕಾರಿ ಶಾಲೆಯನ್ನ ಪುನರ್ ನಿರ್ಮಿಸಿದೆ. ಈಗ ಕೋಲಾರ ಜಿಲ್ಲೆಯನ್ನ ಎರಡನೆಯದಾಗಿ ಆಯ್ಕೆ ಮಾಡಿದ್ದು, ಕಳೆದ ಎರಡು ವರ್ಷದಿಂದ ಮಾಲೂರಿನಲ್ಲಿ ಬಾಲಕಿಯರ ಶಾಲೆಯನ್ನ ಅಭಿವೃದ್ಧಿಪಡಿಸಿದ್ದಾರೆ. ಸಂಸ್ಥೆಯು ಮೊದಲು ಯಾವುದಾರೊಂದು ಶಾಲೆಯನ್ನ ಆಯ್ಕೆ ಮಾಡಿಕೊಂಡು, ಭಾರತ ಹಾಗೂ ಹೊರ ದೇಶದ ದಾನಿಗಳಿಗೆ ತಗುಲುವ ವೆಚ್ಚದ ಬಗ್ಗೆ ಮಾಹಿತಿಯನ್ನ ನೀಡುವರು. ಹೀಗೆಯೇ ಕೋಲಾರದ ಮಾಲೂರಿನ ಶಾಲೆಗೆ ಬೆಂಗಳೂರು ಹಾಗೂ ಅಮೇರಿಕಾ ದೇಶದ ದಾನಿಗಳು ಸಹಾಯ ಮಾಡಿದ್ದಾರೆಂದು ಒಸಾಟ್ ಸಂಸ್ಥೆ ತಿಳಿಸಿದೆ.

ಒಟಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯದ ಬಗ್ಗೆ,  ಸಚಿವ ಸುರೇಶ್ ಕುಮಾರ್ ಅವರು ಮೆಚ್ಚಗೆ ವ್ಯಕ್ತಪಡಿಸಿದ್ದು, ಸಂಸ್ಥೆಯ ಕಾಳಜಿಯಿಂದ ಇಂದು ಮಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ನೋಟವೇ ಬದಲಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಕಲಿಯಲು ಆಗಮಿಸುತ್ತಿದ್ದು, ಮುಂದೆ ರಾಜ್ಯದಲ್ಲಿ ಹಲವೆಡೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಂಸ್ಥೆಯು ಮುಂದಾಗಲಿ ಎಂದು ಶಾಲೆ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಹಾರೈಸಿದ್ದಾರೆ.
Published by:Latha CG
First published: