Karnataka Weather: ರಾಜ್ಯದಲ್ಲಿ ಮತ್ತೆ ಮಳೆ ಆರಂಭ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೂಡ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಮತ್ತೆ ಮುಂಗಾರು ಆರ್ಭಟ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಜನರಲ್ಲಿ ಮಳೆ (Karnataka Rain) ಆತಂಕ ಎದುರಾಗಿದೆ. ಮತ್ತೆ ಭಾರೀ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ನೀಡಿದೆ. ರಾಜ್ಯದಲ್ಲಿ ಬುಧವಾರ ಹಲವೆಡೆ ಉತ್ತಮ ಮಳೆಯಾಗಿದ್ದು, ಶುಕ್ರವಾರ ಸಂಜೆ ವೇಳೆಗೆ ಮಳೆ (Rainfall) ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ.  ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಜಿಲ್ಲಾವರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 29-21, ಮೈಸೂರು 31-21, ಚಾಮರಾಜನಗರ 31-21, ರಾಮನಗರ 31-21, ಮಂಡ್ಯ 32-21, ಬೆಂಗಳೂರು ಗ್ರಾಮಾಂತರ 29-21, ಚಿಕ್ಕಬಳ್ಳಾಪುರ 31-20, ಕೋಲಾರ 31-21, ಹಾಸನ 29-19, ಚಿತ್ರದುರ್ಗ 32-21, ಚಿಕ್ಕಮಗಳೂರು 28-19, ದಾವಣಗೆರೆ 32-22, ಶಿವಮೊಗ್ಗ 31-22, ಕೊಡಗು 27-18, ತುಮಕೂರು 30-21, ಉಡುಪಿ 31-25, ಮಂಗಳೂರು 30-2, 4, ಉತ್ತರ ಕನ್ನಡ 32-22

ಇದನ್ನೂ ಓದಿ:  Murder: ಮಂಗಳೂರಲ್ಲಿ ಮತ್ತೊಂದು ಮರ್ಡರ್​; ವ್ಯಕ್ತಿಯ ಬರ್ಬರ ಹತ್ಯೆ

ಧಾರವಾಡ 31-22, ಹಾವೇರಿ 32-22, ಹುಬ್ಬಳ್ಳಿ 31-22, ಬೆಳಗಾವಿ 29-21, ಗದಗ 32-22, ಕೊಪ್ಪಳ 32-21, ವಿಜಯಪುರ 31-23, ಬಾಗಲಕೋಟ 33-23 , ಕಲಬುರಗಿ 32-23, ಬೀದರ್ 29-22, ಯಾದಗಿರಿ 33-24, ರಾಯಚೂರ 33-23 ಮತ್ತು ಬಳ್ಳಾರಿ 34-23

ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೂಡ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದಿದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ್, ಹಾವೇರಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಸೂಚನೆ ನೀಡಲಾಗಿದೆ. ಉಳಿದಂತೆ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ, ಬೆಳೆಗೆ ಹಳದಿ ರೋಗ

ಮುಂಗಾರು ಬಿತ್ತನೆ ಮಾಡಿ, ಭರಪೂರ ಬೆಳೆ (Crop) ನಿರಿಕ್ಷೆಯಲ್ಲಿದ್ದ ಆ ರೈತರು (Farmers) ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಹಳದಿ ರೋಗಕ್ಕೆ ತುತ್ತಾಗಿ ಹಾಕಿದ್ದ ದುಡ್ಡು ಬಾರದ ಸ್ಥಿತಿಗೆ ಬಂದಿದ್ದಾರೆ ರೈತರು(Farmers). ಸಾಲ ಶೂಲ ಮಾಡಿದ್ದ ರೈತರ ಗೋಳು ಕೇಳೋರ್ಯಾರು ಅನ್ನೊ ಹಾಗಿದೆ. ಕಾಯಿ ಇದ್ದರೂ ಕಾಳು ಇಲ್ಲದೇ, ಹೂ ಉದುರಿ ಹಳದಿ ರೋಗಕ್ಕೆ ತುತ್ತಾದ ಹೆಸರು ಬೆಳೆ. ಸೂಕ್ತ ಬೆಳೆ ಬಾರದೇ ಹೆಸರು ಬೆಳೆ ಕೀಳ್ಳುತ್ತಿರೊ ರೈತರು. ಮೋಡ ಮುಸುಕಿದ ವಾತಾವರಣದಿಂದ ಕಂಗಾಲಾದ ಕೃಷಿಕರು.

ಇದನ್ನೂ ಓದಿ:  D K Shivakumar: ತಾಯಿ ಚಾಮುಂಡೇಶ್ವರಿ ನನ್ನ ಶತ್ರುಗಳನ್ನು ನಾಶ ಮಾಡು

ಬಾಗಲಕೋಟೆ ಜಿಲ್ಲೆಯಲ್ಲಿ ಹೌದು ಕಳೆದ 20 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಜೊತೆಗೆ ಜಿಟಿ ಜಿಟಿ ಮಳೆಯ ಸಿಂಚನ. 20 ದಿನಗಳಿಂದ ಸೂರ್ಯ ಕಿರಣವಿಲ್ಲದೇ ಬೆಳೆಗಳು ಸಮರ್ಪಕ ರೀತಿಯಲ್ಲಿ ಬೆಳವಣಿಗೆ ಕಂಡಿಲ್ಲ.

ಉತ್ತರ ಭಾರತದಲ್ಲಿ ಮುಂದಿನ ಮೂರು ದಿನ ಮಳೆ ಅಬ್ಬರ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಉಪ ಹಿಮಾಲಯ ಪ್ರದೇಶ ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಮಣಿಪುರ, ಮಿಜೋರಾಂ ಭಾಗಗಳಲ್ಲಿ ಜುಲೈ 30ರವರೆಗೆ ಜೋರು ಮಳೆಯಾಗುವ ಸಾಧ್ಯತೆಗಳಿವೆ.

ರಾಜ್ಯದ ಜಲಾಶಯಗಳು ಭರ್ತಿ

ರಾಜ್ಯದೆಲ್ಲೆಡೆ ಮಳೆ (Heavy Rain) ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ (Falls) ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ ಬಾಗೀನ ಸಹ ಅರ್ಪಿಸಲಾಗುತ್ತಿದೆ. ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ.
Published by:Mahmadrafik K
First published: