ಕರ್ನಾಟಕ ರಾಜಕೀಯ ಸರ್ಕಸ್​; ಬಿಜೆಪಿ ಮುಂದಿರುವ ಮಾರ್ಗಗಳು ಯಾವುದು?

seema R | news18
Updated:May 16, 2018, 12:06 PM IST
ಕರ್ನಾಟಕ ರಾಜಕೀಯ ಸರ್ಕಸ್​; ಬಿಜೆಪಿ ಮುಂದಿರುವ ಮಾರ್ಗಗಳು ಯಾವುದು?
seema R | news18
Updated: May 16, 2018, 12:06 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಮೇ.16): ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತಿದ್ದಂತೆ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಮೂರು ಪಕ್ಷಗಳು ಭಾರೀ ಕಸರತ್ತು ನಡೆಸಿದೆ. ಕಾಂಗ್ರೆಸ್​ ಪಕ್ಷ ಈಗಾಗಲೇ  ಜೆಡಿಎಸ್​ ಜೊತೆ ಮೈತ್ರಿಗೆ ಸಿದ್ಧ ಎಂದು ಹೇಳುತ್ತಿದ್ದಂತೆ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಕೂಡ ಬೇರೆ ದಾರಿ ಮೂಲಕ ಹೇಗಾದರೂ ಅಧಿಕಾರ ಚುಕ್ಕಾಣಿ ಹಿಡಿಯುವ ಕೆಲಸಕ್ಕೆ ಮುಂದಾಗಿದೆ

ಬಿಜೆಪಿಯಿಂದ ಅಪರೇಷನ್​ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್​ ಜೆಡಿಎಸ್​ ನಾಯಕರುಗಳು ಕೂಡ ತಮ್ಮ ಶಾಸಕರನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳದಂತೆ ಮುನ್ನೆಚ್ಚರಿಕೆಯನ್ನು ಕೂಡವಹಿಸಿದ್ದಾರೆ. ಇದೆಲ್ಲಾದರ ಮಧ್ಯೆ ಇನ್ನೊಂದು ವಾರದಲ್ಲಿ ಬಹುಮತ ಸಾಬೀತು ಮಾಡುತ್ತೇನೆ ಎಂದಿರುವ ಬಿಜೆಪಿ ಯಾವೆಲ್ಲಾ ತಂತ್ರಗಳಿಗೆ ಮೊರೆ ಹೋಗಬಹುದು ಎಂಬ ಚರ್ಚೆ ಕೂಡ ನಡೆದಿದೆ.

ಸದನದಲ್ಲಿ ಯಾವ ಪಕ್ಷ ಬಹುಮತ ಸಾಬೀತುಪಡಿಸಬಹುದು ಆ ಪಕ್ಷ ಸರ್ಕಾರ ರಚಿಸಲು ಸಾಧ್ಯ. ರಾಜ್ಯಪಾಲರು ಕರೆಯಲ್ಪಟ್ಟ ಪಕ್ಷ ಅಥವಾ ಮೈತ್ರಿ ಪಕ್ಷ ಬಹುಮತ ಸಾಬೀತು ಪಡಿಸಿದ್ದಲಿ ಆ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅದಕ್ಕಿ ಬಿಜೆಪಿ ಈ ತಂತ್ರವನ್ನು ನಡೆಸಬಹುದು.

ವಿವೇಚನೆಯ ಪ್ರಕಾರ:

ಚುನಾವಣೆಯಲ್ಲಿ ಪಕ್ಷವೂ ಸ್ಪಷ್ಟ ಬಹುಮತ ಪಡೆಯದಿದ್ದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಸರ್ಕಾರ ರಚಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಅದರ ಪ್ರಕಾರದಲ್ಲಿ ಸದನದಲ್ಲಿ ಏಕೈಕ  ಪಕ್ಷ ಅಧಿಕಾರವನ್ನು ಪಡೆಯಬಹುದು ಎಂದು ರಾಜ್ಯಪಾಲರು ನಿರ್ಧರಿಸುತ್ತಾರೆ.

ಈ ಪ್ರಕಾರ ಸದನದಲ್ಲಿ ಎಷ್ಟು ಸದಸ್ಯರು ಇರುತ್ತಾರೋ ಅವರ ಸಂಖ್ಯಾ ಬಲದ ಮೇಲೆ ಮ್ಯಾಜಿಕ್​ ನಂಬರ್​ ಬೇಕು  ಈ ಆಧಾರದ ಮೇಲೆ ಕಾಂಗ್ರೆಸ್​, ಜೆಡಿಎಸ್​ ಶಾಸಕರನ್ನು ಗೈರಾಗಿಸು ಪ್ರಯತ್ನಕ್ಕೆ ಬಿಜೆಪಿ ಮುಂದಾಗುವ ಸಾಧ್ಯತೆ ಇದೆ.
Loading...

15 ಜನರ ಸಂಖ್ಯಾ ಬಲ ಕುಗ್ಗಿಸುವ ಯತ್ನ:

ಬಿಜೆಪಿ ಈಗಾಗಲೇ 104ಜನ ಸಂಖ್ಯಾ ಬಲವನ್ನು ಹೊಂದಿದೆ. ಇನ್ನು ಜೆಡಿಎಸ್​ ಕಾಂಗ್ರೆಸ್​ ಸೇರಿದರೆ 116 ಸಂಖ್ಯಾಬಲ ಹೊಂದಲಿದೆ. ರಾಜ್ಯಪಾಲರು ಸದನ ಕರೆದಾಗ ಕಾಂಗ್ರೆಸ್​ ಜೆಡಿಎಸ್​ನ 15 ಜನ ಸಂಖ್ಯಾ ಬಲ ಕುಗ್ಗಿದರೆ, ಒಟ್ಟು ಸದಸ್ಯರ ಸಂಖ್ಯೆ 207ಕ್ಕೆ ಇಳಿಯಲಿದೆ.  ಆಗ ಮ್ಯಾಜಿಕ್​ ನಂಬರ್​ಗೆ  104 ಸದಸ್ಯರನ್ನು ಹೊಂದಿರುವ ಬಿಜೆಪಿ  ಏಕೈಕ ದೊಡ್ಡ ಪಕ್ಷವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು ರಾಜ್ಯಪಾಲರು ಅವಕಾಶ ನೀಡಬಹುದು.

ಬಹುಮತ ಸಾಬೀತು

ಬಿಜೆಪಿ ಬಹುಮತ ಸಾಬೀತು ಮಾಡುತ್ತೇನೆ ಎಂದರೆ ರಾಜ್ಯಪಾಲರು ಈ ಬಗ್ಗೆ ಮೊದಲು ರಾಜ್ಯ ಪಾಲರಿಗೆ ಮನವರಿಕೆ ಮಾಡಿಕೊಡುವುದು ಅವಶ್ಯಕ. ಬಹುಮತ ಸಾಬೀತು ಪಡಿಸಿದರೆ ಎಲ್ಲಿಂದ ಸಾಬೀತು ಮಾಡಲಾಗುತ್ತದೆ. ನ್ಯಾಯಸಮ್ಮತವಾಗಿ ಸಾಂಸ್ಥಿಕವಾಗಿ ಸಾಬೀತು ಮಾಡುತ್ತೇವೆ ಎಂದು ರಾಜ್ಯಪಾಲರುಗೆ ವಿವರಿಸಬೇಕು. ಇನ್ನು ಜೆಡಿಎಸ್​ ಕಾಂಗ್ರೆಸ್​ ನಾಯಕರನ್ನು ಸೆಳಯುವುದಾದರೆ ಸಂವಿಧಾನದ ವಿರುದ್ಧವಾಗುತ್ತದೆ.

ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡುವ ಸಂದರ್ಭ ಆ ಪಕ್ಷ ಸದನದಲ್ಲಿ ಬಹುಮತ ಹೊಂದಿದೆಯೇ ಎಂಬುದನ್ನ ಮನವರಿಕೆ ಮಾಡಿಕೊಳ್ಳಬೇಕು. ಇಲ್ಲಿಯವರೆಗೂ ಯಡಿಯೂರಪ್ಪನವರು ಬಹುಮತ ತೋರಿಸಿಲ್ಲ. ಅಲ್ಲದೇ ರಾಜ್ಯಪಾಲರ ಮುಂದೆ ಹೇಗೆ ಬಹುಮತ ತೋರಿಸುತ್ತೀರಿ, ಅಗತ್ಯವಿರುವ ಬೆಂಬಲವನ್ನ ಯಾರಿಂದ ಪಡೆಯುತ್ತೀರಿ. ಆ ಬೆಂಬಲ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕವಾಗಿದೆಯೇ ಎಂಬುದನ್ನು ರಾಜ್ಯಪಾಲರ ಮುಂದೆ ತಿಳಿಸಬೇಕು.

ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರಿಂದ ಬೆಂಬಲ ಪಡೆಯುವುದಾದರೆ ಅದು ಸಂವಿಧಾನಾತ್ಮಕವಾಗಿರುವುದಿಲ್ಲ. ಹೀಗಾಗಿ, ಗವರ್ನರ್ ಇದಕ್ಕೆ ಅವಕಾಶ ಕೊಡಬಾರದು.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ