Fishing Port: ಬಹು‌ಕೋಟಿ ವೆಚ್ಚದ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರಿಂದಲೇ ವಿರೋಧ!

ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.  ಈ‌ ಬೆನ್ನಲ್ಲೆ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ವಿರೋಧ

ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ವಿರೋಧ

  • Share this:
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.  ಈ‌ ಬೆನ್ನಲ್ಲೆ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರೇ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗರ ಮಾಲಾದ ಅಡಿಯಲ್ಲಿ ಈ ಬಂದರು ನಿರ್ಮಾಣವಾಗಲಿದ್ದು. ಆದ್ರೆ ಈ ಯೋಜನೆ ಸಂಬಂಧಿಸಿದ ಸ್ಥಳೀಯ ಮೀನುಗಾರರು ಬಂದರು ನಿರ್ಮಾಣಕ್ಕೆ ಅವಕಾಶ ನೀಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮೀನುಗಾರರಿಂದಲೇ ಮೀನುಗಾರಿಕಾ ಬಂದರಿಗೆ ವಿರೋಧ

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗರಮಾಲಾದ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ 250ಕೋಟಿ ರೂ.ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಅನುಮೋದನೆ‌ ದೊರಕಿದೆ. ಕರ್ನಾಟಕ ಮೆರಿಟೈಮ್ ಬೋರ್ಡ್ ಮತ್ತು ಮೀನುಗಾರಿಕಾ ಇಲಾಖೆಯು ಈ ಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸಲಿವೆ.

3 ವರ್ಷಗಳ ಕಾಲ ನಡೆಯಲಿದೆ ಕಾಮಗಾರಿ

ಮಾಜಾಳಿ, ಮಧ್ಯ ದಾಂಡೇಭಾಗ್, ದೇವಭಾಗ್, ಬಾವಳ, ಹಿಪ್ಪಳ್ಳಿ, ಚಿತ್ತಾಕುಲಾ, ಗಾಭಿತವಾಡ ಮುಂತಾದ ಭಾಗದ ಮೀನುಗಾರರಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಬಂದರಿನ ಕಾಮಗಾರಿ 3 ವರ್ಷಗಳ ಕಾಲ ನಡೆಯಲಿದ್ದು, ತೀರ ವ್ಯಾಪ್ತಿ ಪ್ರದೇಶವು 3 ಮೀಟರ್ ಆಳವಿರಲಿದೆ. ಇಲ್ಲಿ 80 ದೋಣಿಗಳನ್ನು ನಿಲ್ಲಿಸಬಹುದಾಗಿದ್ದು, 1,140 ಮೀಟರ್ ಉತ್ತರದ ಅಲೆ ತಡೆಗೋಡೆ, 595 ಮೀಟರ್ ದಕ್ಷಿಣದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಬಂದರಿನಲ್ಲಿ ವರ್ಷಕ್ಕೆ 15.50 ಟನ್ ವರ್ಷಕ್ಕೆ ಮೀನು ವಹಿವಾಟು ನಡೆಯಲಿದ್ದು, 4,716 ಮೀನುಗಾರರಿಗೆ ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ.



ಸದ್ಯಕ್ಕೆ ಯೋಜನೆಯ ಟೆಂಡರ್ ನಡೆಯಲಷ್ಟೇ ಬಾಕಿಯಿದೆ. ಇಷ್ಟಾದರೂ ಸ್ಥಳೀಯ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಗೊಳಿಸಲು ಬಿಡುವುದಿಲ್ಲ.ಮೀನುಗಾರರ ಜತೆ ಚರ್ಚಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಹಾಗಾದ್ರೆ ಮೀನುಗಾರರ ವಿರೋಧ ಏಕೆ?

ಮೀನುಗಾರ ಮುಖಂಡರು ಹೇಳುವಂತೆ ಮೀನುಗಾರರನ್ನು ಒಕ್ಕಲೆಬ್ಬಿಸಿ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ಸೀಬರ್ಡ್ ಯೋಜನೆ, ಹೊನ್ನಾವರ, ಕಾರವಾರದಲ್ಲಿ ಬಂದರು ನಿರ್ಮಾಣ ಯೋಜನೆಯಲ್ಲಿ ಮೀನುಗಾರರು ಎಲ್ಲವನ್ನೂ ಕಳೆದುಕೊಂಡಿದ್ದರು.‌ ಮೀನುಗಾರರಿಗೆ ಉದ್ಯೋಗ ಒದಗಿಸುವುದಾಗಿ ಆಶ್ವಾಸನೆ ನೀಡಿ ಮನೆ-ಮಠಗಳನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ ಹೊರತು ಈವರೆಗೆ ಯಾವುದೇ ಉದ್ಯೋಗವಕಾಶ ನೀಡಲಾಗಿಲ್ಲ. ಮಾಜಾಳಿ ವ್ಯಾಪ್ತಿಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದು, ಸಾಗರಮಾಲಾದಡಿ ನಡೆಯುವ ಈ ಯೋಜನೆ ಜಾರಿಗೊಂಡಲ್ಲಿ ಮತ್ತೆ ಎಲ್ಲರೂ ಮನೆ ಮಠಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Karnataka Rain Alert: ರಾಜ್ಯದಲ್ಲಿ ಮತ್ತೆ ಮುಂದುವರಿಯಲಿದೆ ಮಳೆಯ ಆರ್ಭಟ; ಹಲವೆಡೆ 3 ದಿನಗಳ ಕಾಲ ಅಲರ್ಟ್ ಘೋಷಣೆ

ಈ ಬಾರಿಯೂ ಉದ್ಯೋಗ, ಪರಿಹಾರದ ಪೊಳ್ಳು ಭರವಸೆ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಲಾಗುತ್ತದೆ. ಒಂದು ವೇಳೆ ಹೀಗೆ ನಡೆದಲ್ಲಿ ಎಲ್ಲಾ ಮೀನುಗಾರರು ಬೀದಿಗಿಳಿದು ಹೋರಾಟ ನಡೆಸುತ್ತೇವೆ ಅಂತೀದ್ದಾರೆ ಮೀನುಗಾರರು. ಒಂದಾನು ವೇಳೆ ಇಲ್ಲಿ ಮೀನುಗಾರಿಕಾ ಬಂದರು‌ ನಿರ್ಮಾವಾದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಶಿಸಲಿದೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಸಾಧ್ಯವಾಗುವದಿಲ್ಲ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Mysuru Dasara 2022: ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ, ಈ ಬಾರಿ ದ್ರೌಪದಿ ಮುರ್ಮು ಮುಖ್ಯ ಅತಿಥಿ

ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ವ ಋತು ಕಡಲತೀರ ಎಂದು ಖ್ಯಾತಿ ಪಡೆದಿರುವ ಮಾಜಾಳಿ ಕಡಲತೀರದ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ‌. ಇಲ್ಲಿ ಹೇಗಾದರೂ ಮಾಡಿ ಬಂದರು ನಿರ್ಮಾಣ ಮಾಡಬೇಕು ಅಂತಾ ಸರ್ಕಾರ ನಿರ್ಧಾರ ಮಾಡಿದೆ‌‌.ಆದ್ರೆ, ಇಲ್ಲಿನ ಮೀನುಗಾರರು ಮಾತ್ರ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರಕಾರ ಇನ್ನಾದ್ರೂ ಈ ಯೋಜನೆ ಕೈಬಿಡತ್ತಾ ಇಲ್ಲ ಮೀನುಗಾರರು ವಿರೋಧದ ನಡುವೆ ಮುಂದುವರೆಸತ್ತಾ ಅನ್ನೊಂದನ್ನ ಕಾದು ನೋಡಬೇಕಿದೆ.
Published by:ಪಾವನ ಎಚ್ ಎಸ್
First published: