ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಗೆ ನಮ್ಮ ವಿರೋಧ : ಮಾಜಿ ಸಿಎಂ ಕುಮಾರಸ್ವಾಮಿ

ಸಂವಿಧಾನವನ್ನು ಬುಡಮೇಲು ಮಾಡುವ ಕಾಯ್ದೆ ಇದಾಗಿದೆ. ರಾಜಕೀಯ ಪಕ್ಷಗಳು ದೇಶದಲ್ಲಿರುವ ಸಮಸ್ಯೆ ಬಗೆಹರಿಸಬೇಕು. ಅದು ಬಿಟ್ಟು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ.

news18-kannada
Updated:December 18, 2019, 2:14 PM IST
ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಗೆ ನಮ್ಮ ವಿರೋಧ : ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು(ಡಿ.18): ದೇಶದಲ್ಲಿ ಅಶಾಂತಿ, ಅಪನಂಭಿಕೆ ವಾತವಾರಣ ನಿರ್ಮಾಣ ಆಗಿದೆ. ನಮ್ಮ ಪಕ್ಷದ ಬದ್ದತೆ ಪ್ರತಿಯೊಬ್ಬನಿಗೆ ರಕ್ಷಣೆ ಕೊಡುವಂತದ್ದು, ಕೇಂದ್ರದ ಎರಡು ಕಾಯಿದೆಗಳನ್ನು ನಮ್ಮ ಪಕ್ಷ ವಿರೋಧ ಮಾಡುತ್ತೆ. ಬಿಜೆಪಿಯಿಂದ ಸಮಸ್ಯೆ ಹುಟ್ಟಿ ಹಾಕುವ ಕೆಲಸ ಆಗುತ್ತಿದೆ. ವಲಸೆ ಕೇವಲ ಭಾರತದ ಸಮಸ್ಯೆಯಲ್ಲ ಇಡೀ ವಿಶ್ವದಲ್ಲಿ ಇಂತಹ ಸಮಸ್ಯೆ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಪ್ರೆಸ್​ಕ್ಲಬ್​​​​​ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಹಿಂದೂ ರಾಷ್ಟ್ರ ಸೃಷ್ಠಿ ಮಾಡಲು ಯೋಚಿಸುತ್ತಿದ್ದಾರಾ? ಮುಸ್ಲಿಂ ಸಮುದಾಯ ಉಳಿಸುತ್ತೇವೆ ಅಂತ ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಮುಸ್ಲಿಂ ರಕ್ಷಕರು ಎಂದು ಬಿಂಬಿಸುವ ಯತ್ನವನ್ನು ಮಾಡುತ್ತಿದ್ದು, ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಆಗಿದೆ.  ಪ್ರತಿಯೊಬ್ಬ ನಾಗರಿಕನ ರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ ಎಂದರು.

ಭಾರತ ದೇಶ ತನ್ನದೇ ಆದೇ ಸಂಸ್ಕೃತಿ ಹೊಂದಿದೆ. ಬಿಜೆಪಿ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ್ರು. ಇವಾಗ ಪೌರತ್ವ ಜಾರಿ ಮಾಡಿದೆ. ಇದರ ವಿರುದ್ಧ ದೇಶದಲ್ಲೇ ಹೋರಾಟ ಶುರುವಾಗಿದೆ. ಈ ಬಿಲ್ ನ್ನು ಪರಿಚಯ ಮಾಡಿದಾಗ ಸದನದಲ್ಲ ವಿರೋಧ ವ್ಯಕ್ತವಾಯಿತು. ಇವಾಗ ವಿದ್ಯಾರ್ಥಿಗಳ ಹೋರಾಟಕ್ಕೆ‌ ಹಲವು ಸಂಘಟನೆಗಳು ಸಹಕಾರ ಕೊಟ್ಟಿವೆ ಎಂದು ತಿಳಿಸಿದರು.

ಇದನ್ನೂ ಓದಿ : ಒಂದು ಇಂದಿರಾ ಕ್ಯಾಂಟೀನ್​ಗೆ ಕೋಟಿ ಖರ್ಚು, ಇವರೇನು ಚಿನ್ನದ ಇಟ್ಟಿಗೆ ಇಟ್ಟಿದ್ದಾರಾ; ಸಿಟಿ ರವಿ ಪ್ರಶ್ನೆ

ಸಂವಿಧಾನವನ್ನು ಬುಡಮೇಲು ಮಾಡುವ ಕಾಯ್ದೆ ಇದಾಗಿದೆ. ರಾಜಕೀಯ ಪಕ್ಷಗಳು ದೇಶದಲ್ಲಿರುವ ಸಮಸ್ಯೆ ಬಗೆಹರಿಸಬೇಕು. ಅದು ಬಿಟ್ಟು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ. ಬಿಜೆಪಿ ನಾಯಕರುಗಳು ಹಿಂದೂಗಳನ್ನು ರಕ್ಷಣೆ ಮಾಡ್ತೀವಿ ಎಂದು ದೊಡ್ಡದಾಗಿ ಈ ಕಾಯ್ದೆ ಜಾರಿ ಮಾಡಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಭಯ ಹುಟ್ಟಿಸುವ ಕೆಲಸ ಮಾಡಿದೆ. ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದರು.
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ