HOME » NEWS » State » OPPOSITION PARTY LEADER SIDDARAMAIAH NON VEG MEAL RELAX AT HIS FRIEND HOME MYSORE HK

ರಿಲ್ಯಾಕ್ಸ್ ಮೂಡಲ್ಲಿ ಸಿದ್ಧು - ಸ್ನೇಹಿತನ ಮನೆಯಲ್ಲಿ ನಾಟಿ ಕೋಳಿ ಊಟ - ಹನುಮ ಜಯಂತಿ ನೆಪ ಹೇಳಿದವನಿಗೆ ತರಾಟೆ

ನಾಟಿಕೋಳಿ ಸಾರು, ಮುದ್ದೆ, ಚಿಕನ್ ತಿಂದು ಎಲೆ ಅಡಿಗೆ ಜಗಿದು ಸಖತ್ ರಿಲ್ಯಾಕ್ಸ್ ಆದರು. ಈ ವೇಳೆ ತಮ್ಮ ನಾನ್ ‌ವೆಜ್ ಪ್ರೀತಿ ಸಿಗರೇಟ್ ಸೇದುತ್ತಿದ್ದ ಬಗ್ಗೆಯು ಸ್ನೇಹಿತರು ಗ್ರಾಮಸ್ಥರ ಜೊತೆ ಮನಬಿಚ್ಚಿ ಮಾತನಾಡಿದರು

news18-kannada
Updated:December 27, 2020, 9:02 PM IST
ರಿಲ್ಯಾಕ್ಸ್ ಮೂಡಲ್ಲಿ ಸಿದ್ಧು - ಸ್ನೇಹಿತನ ಮನೆಯಲ್ಲಿ ನಾಟಿ ಕೋಳಿ ಊಟ - ಹನುಮ ಜಯಂತಿ ನೆಪ ಹೇಳಿದವನಿಗೆ ತರಾಟೆ
ಸ್ಬೇಹಿತನ ಮನೆಯಲ್ಲಿ ಊಟ ಮಾಡಿದ ಸಿದ್ದರಾಮಯ್ಯ
  • Share this:
ಮೈಸೂರು (ಡಿಸೆಂಬರ್​.27): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಫುಲ್ ರಿಲ್ಯಾಕ್ಸ್ ಮೂಡಲ್ಲಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಭೇಟಿ‌ ನೀಡಿದ ಅವರು ಸ್ನೇಹಿತನ ಮನೆಯಲ್ಲಿ ನಾಟಿ ಕೋಳಿ ಊಟ ಮಾಡಿ ಕಾಲ ಕಳೆದರು. ಅವರ ನಾನ್ ವೆಜ್ ಪ್ರೀತಿ, ಸಿಗರೇಟ್ ಸೇದುತ್ತಿದ್ದ ಬಗ್ಗೆ ಗ್ರಾಮದ ಸ್ನೇಹಿತರ ಜೊತೆ ಮನ ಬಿಚ್ಚಿ ಮಾತಾಡಿದರು. ಚಿಕನ್‌ ತಿನ್ನಲು ಹನುಮ ಜಯಂತಿ ನೆಪ ಹೇಳಿದ ಗ್ರಾಮಸ್ಥನಿಗು ಸಿದ್ದು ತರಾಟೆಗೆ ತೆಗೆದುಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಸ್ವಗ್ರಾಮಕ್ಕೆ ಹೋಗುವುದೇ ಅಪರೂಪ. ಚುನಾವಣೆ ಸಂದರ್ಭದಲ್ಲೂ ಇಲ್ಲ. ಗ್ರಾಮದ ಹಬ್ಬಗಳಲ್ಲಿ ಮಾತ್ರ ಗ್ರಾಮಕ್ಕೆ ಬಂದು ಹೋಗುತ್ತಾರೆ. ಅದೇ ರೀತಿ ಇವತ್ತು ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮನ ಹುಂಡಿಗೆ ಆಗಮಿಸಿದ ಅವರು ಮತ ಹಾಕಿ ಸ್ನೇಹಿತ ಕೆಂಪೀರಯ್ಯನ ಮನೆಯಲ್ಲಿ ಬಾಡೂಟ ಸವಿದರು.

ನಾಟಿಕೋಳಿ ಸಾರು, ಮುದ್ದೆ, ಚಿಕನ್ ತಿಂದು ಎಲೆ ಅಡಿಗೆ ಜಗಿದು ಸಖತ್ ರಿಲ್ಯಾಕ್ಸ್ ಆದರು. ಈ ವೇಳೆ ತಮ್ಮ ನಾನ್ ‌ವೆಜ್ ಪ್ರೀತಿ ಸಿಗರೇಟ್ ಸೇದುತ್ತಿದ್ದ ಬಗ್ಗೆಯು ಸ್ನೇಹಿತರು ಗ್ರಾಮಸ್ಥರ ಜೊತೆ ಮನಬಿಚ್ಚಿ ಮಾತನಾಡಿದರು.

ನನಗೆ ದಿನದ ಮೂರು ಹೊತ್ತು ಮಾಂಸದೂಟ ಬೇಕಿತ್ತು. ಆದರೆ ಆ್ಯಂಜಿಯೋಗ್ರಾಮ್ ಆದ ಮೇಲೆ ಮಾಂಸಹಾರ ಕಡಿಮೆ ಮಾಡಿದೆ. ಈಗ ಭಾನುವಾರ, ಬುಧವಾರ , ಶುಕ್ರವಾರವಷ್ಟೆ ತಿನ್ನುತ್ತೇನೆ ಅಂದರು. ಅಷ್ಟೆ ಅಲ್ಲದೆ ಸಣ್ಣ ಮೀನಿನ ರುಚಿಯ ಬಗ್ಗೆ ಹೇಳುತ್ತ ನೀನು ತಿನ್ನು ಅಂತ ಸ್ನೇಹಿತನಿಗೆ ಹೇಳಿದರು. ಇಷ್ಟಕ್ಕೆ ನಿಲ್ಲದ ಅವರ ಮಾತು ತಾವು ಸಿಗರೇಟ್ ಬಿಟ್ಟಿದರ ಬಗ್ಗೆಯು ಮಾತನಾಡಿದರು.

ನಾನು ಮುಂಚೆ ಸಿಕ್ಕಪಟ್ಟೆ ಸಿಗರೇಟ್ ಸೇಯುತ್ತಿದ್ದೆ. ಸ್ನೇಹಿತ ವಿದೇಶದಿಂದ ಎರಡು ಬಂಡಲು ಸಿಗರೇಟ್ ತಂದುಕೊಟ್ಟ ಅದನ್ನೆಲ್ಲ‌ಕೂತು ಸೇದಿದ್ಮೇಲೆ ನನಗೆ ಯೋಜನೆಯಾಗೋಯ್ತು, ಇಷ್ಟು ಸಿಗರೇಟ್ ಸೇದಿದ್ರೆ ಏನಾಗಬೇಡ ಅಂತ ಯೋಚನೆ ಮಾಡಿ ಸಿಗರೇಟ್ ಸೇದೋದನ್ನೆ ಬಿಟ್ಬಿದೆ ಅಂತ ಹೇಳಿದರು. ಸ್ನೇಹಿತನ ಕೆಂಪೀರಯ್ಯ ಮೊಮ್ಮಗನ ಜೊತೆಗೆ ಮಾತಾಡುತ್ತಾ ತಮ್ಮ ಕನ್ನಡ ಪ್ರೇಮವನ್ನ ಮತ್ತೊಮ್ಮೆ ತೋರಿಸಿದರು.

ಈ ವೇಳೆ ಮೊಮ್ಮಗನನ್ನ ನೀನು ಯಾವ ಮೀಡಿಯಂನಲ್ಲಿ ಓದುತ್ತಿದ್ದಿಯಾ ಅಂತ ಕೇಳಿದರು. ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದೇನೆ ಅಂತ ಹೇಳಿದಕ್ಕೆ‌ ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರೆಲ್ಲಾ ದೊಡ್ಡವರಾಗಲ್ಲ. ನಾನು ಕನ್ನಡ‌ ಮೀಡಿಯಂನಲ್ಲಿ ಓದಿದ್ದು ಅಂತ ಹೇಳಿದರು.

ಇದನ್ನೂ ಓದಿ : ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಅಂತ ಹೆಸರು ಹೇಳಿಬಿಡಿ: ದೇವೇಗೌಡರಿಗೆ ಸಿದ್ದು ಸವಾಲ್​​

ಇನ್ನು ಇದಕ್ಕು ಮುನ್ನ ನಾನ್​ ವೆಜ್ ಊಟ ಅಂತ ಗೊತ್ತಾಗುತ್ತಿದ್ದಂತೆ ಸಿದ್ದರಾಮಯ್ಯ ಪಕ್ಕದಲ್ಲೆ ಇದ್ದ ಪಕ್ಷದ ಮುಖಂಡರು ಇಂದು ಹನುಮ ಜಯಂತಿ ಅಂತ ಹೇಳಿದರು.  ಯಾವ ಜಯಂತಿ ಹನುಮ ಹುಟ್ಟಿದ್ದು ಯಾವ ತಾರೀಖು ಅಂತ ಗೊತ್ತ ನಿನಗೆ ಅಂತ ಕೇಳಿ ಆತನನ್ನ ಪೇಚಿಗೆ ಸಿಲುಕಿಸಿದರು. ಮತ್ತೆ ಮಾತು ಮುಂದುವರೆಸಿ ನೀನು ಚಿಕನ್ ತಿನ್ನು ಏನು ಆಗಲ್ಲ ಅಂತ ಅವರಿಗು ಹೇಳಿ ಊಟ ಮಾಡಿಸಿದರು. ಇನ್ನು ಗ್ರಾಮದ ಮಹಿಳೆಯರು ಇವರು ಊಟ ಮಾಡುತ್ತಿರುವಾಗ ಮನೆ ಮುಂದೆ‌ ಕುಳಿತು ಸೋಬಾನೆ ಪದಗಳನ್ನು ಹಾಡಿದರು. ನಂತರ ಅವರು ಹೊರ ಬರುತ್ತಿದ್ದಂತೆ ಮಹಿಳೆಯರಿಗೆ ಒಂದೂವರೆ ಸಾವಿರ ಹಣ ಕೊಟ್ಟು ಕಳುಹಿಸಿದರು.

ಒಟ್ಟಾರೆ, ಸಾಕಷ್ಟು ದಿನಗಳ ನಂತರ ಗ್ರಾಮಕ್ಕೆ ಬೇಟಿ ನೀಡಿದ ಸಿದ್ದರಾಮಯ್ಯ, ತಮ್ನ ರಾಜಕೀಯ ಜಂಜಾಟವನ್ನೆಲ್ಲ ಬಿಟ್ಟು ತಮ್ಮ ಸ್ನೇಹಿತರ ಜೊತೆ ಮಾತುಕತೆ ನಡೆಸಿ ರಿಲ್ಯಾಕ್ಸ್ ಆದರು. ಊಟದ ನಂತರ ಎಲೆಅಡಿಕೆ ಹಾಕಿಕೊಂಡು, ಸ್ನೇಹಿತರ ಮನೆಯನ್ನೆಲ್ಲ ಓಡಾಡಿ. ಅವರ ಮೊಮ್ಮೊಕ್ಕಳನ್ನ ಮಾತನಾಡಿಸಿದರು. ಸಿದ್ದರಾಮಯ್ಯರನ್ನ ನೋಡಲು ಮುಗಿಬಿದ್ದ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಜೈಕಾರಗಳನ್ನ ಕೂಗುತ್ತಾ ಸಿದ್ದು ಸಂತಸಕ್ಕೆ ಕಾರಣರಾದರು.
Published by: G Hareeshkumar
First published: December 27, 2020, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories