ಗಾಂಧಿ ಕೊಂದ ಗೋಡ್ಸೆ ಬಿಜೆಪಿ, ಆರ್​ಎಸ್​​ಎಸ್​​​ನ ಆರಾಧ್ಯ ದೈವ : ಸಿದ್ದರಾಮಯ್ಯ ವಾಗ್ದಾಳಿ

ಸಮಾಜದಲ್ಲಿ ಜಾತಿ ಒಡೆದು, ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ. ಸದ್ಯ ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ. ಅದನ್ನ ರಕ್ಷಣೆ ಮಾಡುವ ಕೆಲಸ ಆಗಬೇಕಿದೆ

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಚಿಕ್ಕೋಡಿ(ಅಕ್ಟೋಬರ್​. 02): ಮಹಾತ್ಮಾ ಗಾಂಧಿಯವರನ್ನ ಕೊಂದವರು ಮತಾಂಧರು. ಅಂತಹ ಮತಾಂಧ ಗೋಡ್ಸೆ ಬಿಜೆಪಿ ಹಾಗೂ ಆರ್​ಎಸ್​ಎಸ್​ನ ಆರಾಧ್ಯ ದೈವ ಎಂದು ಮಾಜಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಇಂದು ಗಾಂಧಿ ಜಯಂತಿ ಹಿನ್ನೆಲೆ ರಾಜ್ಯ ಕಾಂಗ್ರೆಸ್ ತಂಡವೇ ಬೆಳಗಾವಿ ಜಿಲ್ಲೆಗೆ ಆಗಮಿಸಿತ್ತು. ಜಿಲ್ಲೆಯ ಗೋಕಾಕ್‌ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಎನ್.ಎಸ್. ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೋಳಿ ಸೇರಿದಂತೆ ಕಾಂಗ್ರೆಸ್ ನ ಘಟಾನು ಘಟಿ ನಾಯಕರು ಘಟಪ್ರಭಾದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸೇವಾದಳದ ಗಾಂಧಿ ಜಯಂತಿಯಲ್ಲಿ ಭಾಗಿಯಾಗಿದರು. ಇದೆ ವೇಳೆ ಮಾತನಾಡಿದ ಮಾತನಾಡಿದ ಸಿದ್ದರಾಮಯ್ಯ , ಸಮಾಜದಲ್ಲಿ ಜಾತಿ ಒಡೆದು, ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ. ಸದ್ಯ ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ. ಅದನ್ನ ರಕ್ಷಣೆ ಮಾಡುವ ಕೆಲಸ ಆಗಬೇಕಿದೆ ಎಂದರು.

ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಕೆಡವಿ ಸಂವಿಧಾನ ಸುಟ್ಟು ಹಾಕಬೇಕು ಎಂದವರು ಇಂದು ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ದ ಹರಿಹಾಯ್ದರು. ಅಲ್ಲದೆ ಸಿಎಂ ಯಡಿಯೂರಪ್ಪನವರ ಮೊಮ್ಮಗ ಆರ್​​ಟಿಜಿಎಸ್​​ ಮೂಲಕ ಲಂಚ ಪಡೆದರು. ಯಡಿಯೂರಪ್ಪ ಮಾತ್ರ ರಾಜೀನಾಮೆ ಕೊಡುತ್ತಿಲ್ಲ. ಸಾಕ್ಷಿ ತೋರಿಸಿ ರಾಜೀನಾಮೆ ಕೊಡುತ್ತೇನೆ ಅಂತಾರೆ. ಪ್ರೂಫ್ ಮಾಡಲು ತನಿಖೆ ನಡೆಸುವವರು ಯಾರು. ಮೊದಲು ತನಿಖೆಯಾಗಲಿ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸಿಎಂ ಅವರಿಗೆ ಸವಾಲು ಹಾಕಿದರು.

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್ ಮಾತನಾಡಿ, ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸೊನೀಯಾ ಗಾಂದಿ ಆದೇಶದಂತೆ ರೈತ ವಿರೋಧಿ ಮಸೂದೆಗಳ ವಿರುದ್ದ ರಾಜ್ಯಾಧ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲು ಅಕ್ಟೋಬರ್​ 10 ರಿಂದ ಚಾಲನೆ ನೀಡುತ್ತೇವೆ. ದೇಶದಾದ್ಯಂತ ಪಡೆದ ಸಹಿಗಳನ್ನುರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವದು ಎಂದರು.

ಇದನ್ನೂ ಓದಿ : ಸರಕಾರಿ ಆಸ್ಪತ್ರೆ ಶೌಚಾಲಯ ಸ್ವಚ್ಛತೆ ; ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಜಿ. ಪಂ. ಅಧ್ಯಕ್ಷೆ

ಗಾಂಧಿ ಜಯಂತಿ ನಿಮಿತ್ತ ಆಯೋಜಿಸಿದ್ದ ಸೇವಾದಳದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ರಾಷ್ಟ್ರ ಧ್ವಜಾರೋಹಣಕ್ಕೆ ಬಂದ ಡಿಕೆಶಿ ತಮ್ಮ ಶೂ ಗಳನ್ನು ಬಿಚ್ಚದೆ  ಶೂ ಹಾಕಿಕೊಂಡು ಧ್ವಜಾರೋಹಣ ನೆರವೇರೆಸಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದರು.

ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಇದರಲ್ಲಿ ಬಹುತೇಕ ಜನ ಮಾಸ್ಕ್​​​​​ ಅನ್ನು ಧರಿಸದೆ ಬೇಕಾಬಿಟ್ಟಿ ಓಡಾಡಿದರು. ಸಾಮಾಜಿಕ ಅಂತರವೂ ಸಂಪೂರ್ಣ ಮಾಯವಾಗಿತ್ತು. ಇನ್ನೂ ಸಮಾರಂಭದ ಬಳಿಕ ಡಿಕೆಶಿ ಜೊತೆಗೆ ಸೆಲ್ಫಿಗಾಗಿ ಕೈ ಕಾರ್ಯಕರ್ತರು ಮುಗಿ ಬಿದ್ದು ಸಾಮಾಜಿಕ ಅಂತರದ ನಿಯಮವನ್ನೆ ಗಾಳಿಗೆ ತೂರಿದರು.
Published by:G Hareeshkumar
First published: