ಸರ್ಕಾರದ ಪರ ಮತ ಹಾಕೋಕೆ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು: ಸಿದ್ಧರಾಮಯ್ಯ ಕಿಡಿ

ಇಡಿ ದೇಶದಲ್ಲಿ ರೈತರ ಹೊರಾಟ ಪ್ರಾರಂಭವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಎಪಿಎಂಸಿ,ಭೂ ಸುಧಾರಣೆ, ಕಾರ್ಮಿಕ ಕಾಯ್ದೆ ತಂದಿದ್ದಾರೆ. ಇವು ಜನ ವಿರೋಧಿ ಕಾಯ್ದೆಗಳು

ಸಿದ್ದರಾಮಯ್ಯ

ಸಿದ್ದರಾಮಯ್ಯ

  • News18
  • Last Updated :
  • Share this:
ಬೆಂಗಳೂರು(ಡಿಸೆಂಬರ್​. 10): ರೈತರ ಭೂಮಿ ರೈತರ ಬಳಿ ಇರಬೇಕು ಅದನ್ನು ಹಣವಂತರಿಗೆ ಮಾರಲು ಹೊರಟಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಬೇನಾಮಿ ಜಮೀನಿದೆ. ಅದನ್ನು ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆ ಪರ ಇದ್ದಾರೆ. ಅವರ ಭೂಮಿ ಮೇಲಿರುವ ಎಲ್ಲಾ ಕೇಸ್ ಸರ್ಕಾರ ವಜಾ ಮಾಡಿದೆ. ಹೀಗಾಗಿ ಸರ್ಕಾರದ ಪರ ಕುಮಾರಸ್ವಾಮಿ ಇದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಡಿ ದೇಶದಲ್ಲಿ ರೈತರ ಹೊರಾಟ ಪ್ರಾರಂಭವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಎಪಿಎಂಸಿ,ಭೂ ಸುಧಾರಣೆ, ಕಾರ್ಮಿಕ ಕಾಯ್ದೆ ತಂದಿದ್ದಾರೆ. ಇವು ಜನ ವಿರೋಧಿ ಕಾಯ್ದೆಗಳು, ರೈತ, ಕಾರ್ಮಿಕ, ದಲಿತ ಮೂರು ಜನ ಇಲ್ಲಿದ್ದೇವೆ ನಾನು ‌ಕೂಡ ರೈತನ ಮಗ ರೈತ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗಿದ್ದೆ ಚುನಾವಣೆಗೆ ಅವಕಾಶ ಇಲ್ಲದ ಕಾರಣ ನಾನು ಹೊರ ಬಂದೆ. ಆದರೆ, ನಾನು ಯಾವಗಲೂ ರೈತರ ಪರ ಎಂದರು.

ಕೇವಲ ಚುನಾವಣೆ ಅಂತ ಬರಲಿಲ್ಲ. ನಿಮ್ಮ ಹೋರಾಟದಲ್ಲಿ ನಮ್ಮ ಬೆಂಬಲ. ನಾವು ಮುಂದೆ ಅಧಿಕಾರಕ್ಕೆ ಬಂದ್ರೆ ಈಗ ತಂದಿರುವ ಮೂರು‌ ಕಾಯ್ದೆ ಕೈ ಬಿಡುತ್ತೆನೆ. ಇದು ಸತ್ಯ, ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ ಎಂದರು.

ಯಡಿಯೂರಪ್ಪನವರು ಮೂರು ಸಲ ಸಿಎಂ ಆಗಿದ್ದಾರೆ. ಮೂರು ಬಾರಿ ಹಸಿರು ಶಾಲು ಹಾಕಿ ಪ್ರಮಾಣ ಮಾಡಿದ್ದಾರೆ. ಆದರೆ, ಇವತ್ತು ಅವರು ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಎಪಿಎಂಸಿ ಕೇಂದ್ರ ಸರ್ಕಾರದ ಬಿಲ್ ಕಾರ್ಪೊರೇಟ್ ಕಂಪನಿಯ ಪರವಾಗಿರುವ ಬಿಲ್ ಅದನ್ನು ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹೇರಿದೆ ಎಂದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಎಪಿಎಂಸಿ ಮುಚ್ಚಲು ಇದು ಸಕಾಲ ಅಂದಿದ್ದಾರೆ. ಅವರ ಉದ್ದೇಶ ಇಷ್ಟೇ ಎಪಿಎಂಸಿ ಮುಚ್ಚುವುದು, ರೈತರು ಶ್ರೀಮಂತರ ಮುಂದೆ ‌ಕೈ ಕಟ್ಟಿ ನಿಲ್ಲುವುದು, ನಮ್ಮ ಬೆಳೆ ತೆಗೆದುಕೊಳ್ಳಿ ಅಂತ ಉಳ್ಳವರ ಎದುರು ಕೈ ಚಾಚುವಂತೆ ಮಾಡುವುದು. ನಾವು ನಿಮ್ಮ ‌ಜೊತೆ ಹೋರಾಟ ‌ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಮುಕ್ತ ಭಾರತದ ಜತೆಯಲ್ಲೇ ಭ್ರಷ್ಟಚಾರ ಮುಕ್ತ ಭಾರತ ನಿರ್ಮಾಣ: ಡಿಸಿಎಂ ಅಶ್ವತ್ಥನಾರಾಯಣ

ಗೋ ಹತ್ಯೆ ನಿಷೇಧ ಬಗ್ಗೆ  ವಾಗ್ದಾಳಿ ನಡೆಸಿದ ಅವರು, ನಿನ್ನೆ ಆ ಬಿಲ್ ಕಾಪಿ ನಮಗೆ ಕೊಟ್ಟಿಲ್ಲ. ಏಕಾಏಕಿ ಈ ಬಿಲ್ ಮಂಡನೆ ಮಾಡಿದರೂ ಮತಗೊಸ್ಕರ್​​  ಜನರನ್ನು ಒಡೆಯುವುದೆ ಅವರ ಕೆಲಸವಾಗಿದೆ ಎಂದು ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಆರ್ ಎಸ್ ಎಸ್ ನವರು ದನದ ಸಗಣಿ ಎತ್ತಿದ್ದಾರೆ. ಹೊಲ ಉಳಿಮೇ ಮಾಡಿದ್ದಾರಾ, ದನಗಳು ವಯಸ್ಸಾದ್ರೆ ಅವುಗಳನ್ನು ಯಾರು ಸಾಕುತ್ತಾರೆ, ಗೋ ಶಾಲೆ ಮಾಡಿ ಅವರು ಸಾಕುತ್ತಾರಾ ಇದು ರೈತರಿಗೆ ನಷ್ಟ ಅಲ್ವ ವಯಸ್ಸಾದ ದನ ಇಟ್ಟುಕೊಂಡು ಅವರು ಏನು ಮಾಡಬೇಕು. ನಾವು ರೈತರ, ಕಾರ್ಮಿಕರ ಹಾಗೂ ದಲಿತರ ಪರ ಇರುತ್ತೇವೆ. ನಿಮ್ಮ ಹೋರಾಟ ಪರ ನಾವು ಯಾವತ್ತಿಗೂ ಇರುತ್ತೇವೆ ಎಂದರು.
Published by:G Hareeshkumar
First published: