ಸದನದಲ್ಲಿ ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​ ಎಂದು ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ

ಈ ಮಧ್ಯೆ ಸದನ ಮಾಜಿ ಸಚಿವ ಹೆಚ್​.ಡಿ. ರೇವಣ್ಣನರ ಬಗ್ಗೆಯೂ ಮಾಜಿ ಸಿಎಂ ಸಿದ್ದರಾಮಯ್ಯ ತಮಾಷೆ ಮಾಡಿದರು. ಈಗ ಬಂದ್ರೇಯೇನಪ್ಪ... ರೇವಣ್ಣ ಲಿಂಬೆಹಣ್ಣನ್ನು ತಂದುಬಿಟ್ರೆ ಕಷ್ಟ ಎಂದು ಕೆಣಕಿದರು.

news18
Updated:October 10, 2019, 5:57 PM IST
ಸದನದಲ್ಲಿ ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​ ಎಂದು ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಚಿವ ಸಿ.ಟಿ. ರವಿ ಮತ್ತು ಸಿದ್ದರಾಮಯ್ಯ
news18
Updated: October 10, 2019, 5:57 PM IST
ಬೆಂಗಳೂರು(ಅ.10): "ಸಿ.ಟಿ ರವಿ ಟೂರಿಸ್ಟ್​​​​ ಮಿನಿಸ್ಟರ್"​​ ಎನ್ನುವ ಮೂಲಕ ವಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಬಿಜೆಪಿ ಪ್ರವಾಸೋದ್ಯಮ ಸಚಿವರ ಕಾಲೆಳೆದಿದ್ದಾರೆ. 

ಇಂದಿನ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಚಳಿಗಾಲ ಅಧಿವೇಶನದಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕಾಲೆಳೆದಿದ್ದಾರೆ. "ಸಿ.ಟಿ ರವಿ ಟೂರಿಸ್ಟ್​​​ ಮಿನಿಸ್ಟರ್​​​. ಮತ್ತೊಂದು ಬಾರಿ ನಿಮ್ಮ ಇಲಾಖೆ ವಿಚಾರ ಬಂದಾಗ ಮಾತಾಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೂತನವಾಗಿ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಸದನ ಇದಾಗಿದೆ. ಮೂರು ದಿನಗಳು ಮಾತ್ರ ನಡೆಯಲಿರುವ ಈ ಚಳಿಗಾಲ ಅಧಿವೇಶನದಲ್ಲಿ ರಾಜ್ಯದಲ್ಲಿ ಬರಗಾಲ, ನೆರೆ ಒಟ್ಟೊಟ್ಟಿಗೆ ಬಂದಿರುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಭೀಕರ ಪ್ರವಾಹದಿಂದ ಏಳು ಲಕ್ಷ ಜನ ಸಂತ್ರಸ್ತರಾಗಿದ್ದಾರೆ. 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಇಂತಹ ಸಂದರ್ಭದಲ್ಲೂ ನೀವು ಕೇವಲ ಮೂರು ದಿನ ಮಾತ್ರ ಕಲಾಪ ಕರೆದಿದ್ದೀರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದಾದರೂ ಪ್ರಮುಖ ವಿಷಯಗಳಿದ್ದರೆ ಚರ್ಚೆಗೆ ಅವಕಾಶ ನೀಡಬೇಕು. ನಿಯಮ 74ರ ಅಡಿಯಲ್ಲಿ ಚರ್ಚೆಗೆ ನಮಗೆ ಅವಕಾಶ ಕೊಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಸ್ಪೀಕರ್ ಅವರು ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಚರ್ಚೆ ಮಾಡದೇ ಹಣಕಾಸು ಮಸೂದೆ ಅಂಗೀಕಾರ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದನ್ನೂ ಓದಿ: ನಾನು ಕೊಟ್ಟ ಲಿಂಬೆಹಣ್ಣನ್ನೇ ರಾಜನಾಥ ಸಿಂಗ್​ ರಫೇಲ್ ವಿಮಾನದ ಮೇಲಿಟ್ಟಿದ್ದು; ಬಿಜೆಪಿ ನಾಯಕರ ಕಾಲೆಳೆದ ಹೆಚ್​.ಡಿ. ರೇವಣ್ಣ

ಈ ಮಧ್ಯೆ ಸದನ ಮಾಜಿ ಸಚಿವ ಹೆಚ್​.ಡಿ. ರೇವಣ್ಣನರ ಬಗ್ಗೆಯೂ ಮಾಜಿ ಸಿಎಂ ಸಿದ್ದರಾಮಯ್ಯ ತಮಾಷೆ ಮಾಡಿದರು. 'ಈಗ ಬಂದ್ರೇಯೇನಪ್ಪ... ರೇವಣ್ಣ ಲಿಂಬೆಹಣ್ಣನ್ನು ತಂದುಬಿಟ್ರೆ ಕಷ್ಟ' ಎಂದು ಕೆಣಕಿದರು. ಅದಕ್ಕೆ ಪ್ರತಿಯಾಗಿ ಸ್ಪೀಕರ್ ಕಾಗೇರಿ 'ರೇವಣ್ಣನವರು ತಮ್ಮ ಲಿಂಬೆಹಣ್ಣನ್ನು ನಿಮಗೆ ಕೊಟ್ಟಿದ್ದಾರೆ ಎಂದು ನನಗೆ ಸುದ್ದಿ ಬಂದಿದೆ' ಎಂದು ಸಿದ್ದರಾಮಯ್ಯನವರ ಕಾಲೆಳೆದರು.
Loading...

------------
First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...