ಕಾವೇರಿ ನಿವಾಸಕ್ಕಾಗಿ ಸಿದ್ದರಾಮಯ್ಯ ಪಟ್ಟು: ಸಿಎಂ ಬಿಎಸ್​ವೈಗೆ ವಿಪಕ್ಷ ನಾಯಕ ಪತ್ರ

2013ರಿಂದಲೂ ಸಿದ್ದರಾಮಯ್ಯ ಕುಮಾರಕೃಪ ರಸ್ತೆಯಲ್ಲಿರುವ ಇದೇ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈತ್ರಿ ಸರ್ಕಾರದಲ್ಲಿಯೂ ಯಾರಿಗೆ ಬಿಟ್ಟಕೊಡದೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರೆಸಿದ್ದರು. 

Ganesh Nachikethu | news18
Updated:October 12, 2019, 7:17 AM IST
ಕಾವೇರಿ ನಿವಾಸಕ್ಕಾಗಿ ಸಿದ್ದರಾಮಯ್ಯ ಪಟ್ಟು: ಸಿಎಂ ಬಿಎಸ್​ವೈಗೆ ವಿಪಕ್ಷ ನಾಯಕ ಪತ್ರ
ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: October 12, 2019, 7:17 AM IST
  • Share this:
ಬೆಂಗಳೂರು(ಅ.12): ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲೇ ವಾಸ್ತವ್ಯ ಮುಂದುವರೆಸಲು ಕಾಂಗ್ರೆಸ್​ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹೀಗಾಗಿಯೇ ಕಾವೇರಿ ನಿವಾಸ ತಮಗೆ ಹಂಚಿಕೆ ಮಾಡಬೇಕೆಂದು ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೂತನ ಸಚಿವರಿಗೆ ವಿಧಾನಸೌಧದ ಕೊಠಡಿ ಬೆನ್ನಲ್ಲೇ ಸರ್ಕಾರಿ ನಿವಾಸದ ಬಂಗಲೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದರು. ಈ ವೇಳೆ ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಿರುವುದು ಮಾತ್ರ ವಿಶೇಷವಾಗಿತ್ತು. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕಾರಣದಿಂದಲೇ ಯಾವುದೇ ಸಚಿವರಿಗೆ ಹಂಚಿಕೆ ಮಾಡಿಲ್ಲ ಎನ್ನಲಾಗಿತ್ತು.

2013ರಿಂದಲೂ ಸಿದ್ದರಾಮಯ್ಯ ಕುಮಾರಕೃಪ ರಸ್ತೆಯಲ್ಲಿರುವ ಇದೇ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈತ್ರಿ ಸರ್ಕಾರದಲ್ಲಿಯೂ ಯಾರಿಗೆ ಬಿಟ್ಟಕೊಡದೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರೆಸಿದ್ದರು. ಈ ಕಾವೇರಿ ನಿವಾಸದ ಮೇಲೆ ಮಾಜಿ ಸಿಎಂ ಡಾ. ಜಿ ಪರಮೇಶ್ವರ್​ ಕಣ್ಣಿಟ್ಟಿದ್ದರಾದರೂ, ಸಿದ್ದರಾಮಯ್ಯ ತೊರೆದಿರಲಿಲ್ಲ.

ಇದನ್ನೂ ಓದಿ: ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿ ಆದೇಶ

ಇದೀಗ ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ಅಧಿಕ್ಕಾರಕ್ಕೆ ಬಂದಿದೆ. ಈಗಾಗಲೇ ಎಲ್ಲಾ ಸಚಿವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತಾದರೂ, ಕಾವೇರಿ ಮಾತ್ರ ಯಾರಿಗೂ ಹಂಚಿಕೆ ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೇ ಬಂದ ಮೇಲೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ನಿವಾಸವನ್ನು ಬಿಡಲು ಮನಸು ಮಾಡಲಿಲ್ಲ ಎನ್ನಲಾಗುತ್ತಿದೆ.

ವಿಪಕ್ಷ ಸ್ಥಾನ ಕೈತಪ್ಪಿದರೇ ಕಾವೇರಿಯಿಂದ ಬೇರೆಡೆ ಹೋಗುವ ನಿರ್ಧಾರ ಮಾಡಿದ್ದರು ಸಿದ್ದರಾಮಯ್ಯ. ಈ ನಡುವೆ ವಿಧಾನಸಭಾ ಅಧಿವೇಶನಕ್ಕೆ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಕಾವೇರಿ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ
------------
First published: October 12, 2019, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading