ಚಾಮರಾಜನಗರ ದುರಂತ ಘಟನೆ ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಒಬ್ಬ ಸಿಟಿಂಗ್ ಎಂಎಲ್​ಎ ಕುಸುಮಾ ಶಿವಳ್ಳಿ ಪಾಪ ಬೆಡ್ ಇಲ್ಲ ಅಂತ ಕಣ್ಣೀರು ಹಾಕಿದರು. ಅವರ ತಾಯಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಬೆಡ್ ಕೊಟ್ಟಿಲ್ಲ. ನಾನು ರಾಮಲಿಂಗಪ್ಪ ಅವರಿಗೆ ಫೋನ್ ಮಾಡಿ ಕೂಡಲೇ ಬೆಡ್ ಕೊಡಿಸಿದೆ. ಪ್ರೆಸ್ ಮೀಟ್ ನಲ್ಲೇ ವೈದ್ಯ ರಾಮಲಿಂಗಪ್ಪಗೆ ಕರೆ ಮಾಡಿ ಸರಿಯಾದ ಬೆಡ್ ವ್ಯವಸ್ಥೆ ಮಾಡಿ ಎಂದು ಸಿದ್ದರಾಮಯ್ಯ ಗದರಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು: ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮಾಡಿದೆ. ಶಾಸಕರು, ಸಂಸದರೆಲ್ಲ ಸೇರಿ 70 ಮಂದಿ ಭಾಗವಹಿಸಿದ್ದರು. ಆಕ್ಸಿಜನ್ ರೆಮಿಡಿಸ್ವಿರ್ ಐಸಿಯು ಬೆಡ್ ಸಿಗ್ತಾಯಿಲ್ಲ. ಜನ ಸಾಯುತ್ತಿದ್ದಾರೆ ಎಂಬುದೇ ಎಲ್ಲರ ಪ್ರಮುಖ ದೂರಾಗಿತ್ತು. ಬಹಳಷ್ಟು ಮಂದಿ ಆಕ್ಸಿಜನ್ ಇಲ್ಲದೇ ಸಾಯುತ್ತಿದ್ದಾರೆ. ಕರ್ನಾಟಕದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತೆ. ಮೊದಲು ನಮ್ಮ ರಾಜ್ಯಕ್ಕೆ ಬೇಕಾದ ಆಕ್ಸಿಜನ್ ಇಟ್ಟುಕೊಳ್ಳಬೇಕು. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್​ಗಳ ಕೊರತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಚಾಮಾರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ್ದಾರೆ. ಅವರಿಗೆ ಸಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಕ್ಕಿದರೆ ಬದುಕಿ ಉಳಿಯುತ್ತಿದ್ದರು. ಅವರ ಸಾವಿಗೆ ಸರ್ಕಾರ ನೇರ ಹೊಣೆ. ಇದು ಸರ್ಕಾರ ಮಾಡಿದ ಕೊಲೆ. 24 ಜನರ ಸಾವುಗಳಿಗೆ ನೇರವಾಗಿ ರಾಜ್ಯದ ಸಿಎಂ, ಆರೋಗ್ಯ ಸಚಿವರು, ಹಾಗೂ ಜಿಲ್ಲಾ ಸಚಿವರು ಹೊಣೆಗಾರರು. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಹೊಣೆಗಾರರು.  ಚಾಮರಾಜನಗರ ಆಸ್ಪತ್ರೆಯಲ್ಲಿ 180 ಬೆಡ್​ಗಳಿವೆ. ಅದರಲ್ಲಿ‌ 120 ಆಕ್ಸಿಜನ್ ಬೆಡ್ ಗಳಿವೆ.  20 ವೆಂಟಿಲೇಟರ್ ಬೆಡ್​ಗಳಿವೆ. ದಿನಕ್ಕೆ 350 ಆಕ್ಸಿಜನ್ ಸಿಲಿಂಡರ್​ಗಳು ಬೇಕು. ಸಿಲೆಂಡರ್ ಮೈಸೂರಿನಿಂದ ಸರಬರಾಜು ಆಗುತ್ತವೆ. ಶುಕ್ರವಾರದಿಂದ ಆಕ್ಸಿಜನ್ ಸಮಸ್ಯೆ ಆಗಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳು ಸಹ ಎಚ್ಚರಿಕೆ ವಹಿಸಿಲ್ಲ. ಇದು ಜಿಲ್ಲಾಧಿಕಾರಿಗಳು ಮಾಡಬೇಕಿತ್ತು. ಚಾಮರಾಜನಗರ ಹಾಗೂ ಮೈಸೂರು ಡಿಸಿಗಳು ಮಾಡಬೇಕಿತ್ತು. ಎಷ್ಟು ಆಕ್ಸಿಜನ್ ಸಿಲಿಂಡರ್ ಕಳಿಸಬೇಕು ಎಂದು ನೋಡಬೇಕಿತ್ತು. ನಿನ್ನೆ ನಮ್ಮ ಪುಟ್ಟರಂಗ ಶೆಟ್ಟರು ಸಚಿವರನ್ನು ಸಂಪರ್ಕ ಮಾಡಲು ನೋಡಿದ್ದಾರೆ ಎಂದು ತಿಳಿಸಿದರು.

  ಚಾಮರಾಜನಗರ ದುರಂತದ ಬಗ್ಗೆ ತನಿಖೆ ಮಾಡಲು ಸರ್ಕಾರ ಐಎಎಸ್ ಅಧಿಕಾರಿ  ಶಿವಯೋಗಿ ಕಳಸದ ಅವರನ್ನು ನೇಮಕ ಮಾಡಿದ್ದಾರೆ.  ಇದರಿಂದ ಸತ್ಯ ಹೊರ ಬರುತ್ತಾ? ಹಾಗಾಗಿ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರುತ್ತದೆ. ಹೆಲ್ತ್ ‌ಮಿನಿಸ್ಟರ್ ಸ್ಥಳಕ್ಕೆ ಹನ್ನೆರಡು ಗಂಟೆ ಮೇಲೆ ಹೋಗಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯ. 24 ಜನರ ಸಾವಿಗೆ ಬೆಲೆ ಇಲ್ಲವಾ. ನಾನು ಸರ್ಕಾರಕ್ಕೆ ಒತ್ತಾಯ ಮಾಡ್ತೇನೆ. ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯ ಮಾಡ್ತೇನೆ. ಕೂಡಲೇ ಅಧಿಕಾರಿಯನ್ನು ವಜಾ ಮಾಡಬೇಕು.  ಸಾವನ್ನಪ್ಪಿದವರು ಕುಟುಂಬಕ್ಕೆ ಪರಿಹಾರ ನಿಧಿ ಕೊಡಬೇಕು. ಇದರ ಹೊಣೆ ಹೊತ್ತು ಸಿಎಂ, ಹೆಲ್ ಮಿನಿಸ್ಟರ್, ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

  ಚಾಮರಾಜನಗರ ದುರಂತ ಪ್ರಕರಣ ಕುರಿತು ಸಿಟಿ ರವಿಗೆ ಹೇಳಿಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕೊಲೆ ಮಾಡಿದವನಿಗೆ ಶಿಕ್ಷೆ ಕೊಟ್ರೆ ಸತ್ತವನು ಬದುಕಿ ಬರ್ತಾನಾ ಅನ್ನೋ ರೀತಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಸಿಟಿ ರವಿ ಸರ್ಕಾರದಲ್ಲಿ ಇಲ್ಲ. ಅವರ ಹೇಳಿಕೆಗೆ ಉತ್ತರಿಸಬೇಕಾದ ಅಗತ್ಯ ಇಲ್ಲ. ಇಷ್ಟೊಂದು ಬೇಜವಾಬ್ದಾರಿ ಸರ್ಕಾರವನ್ನು ನಾನು ಎಂದು ನೋಡಿರಲಿಲ್ಲ. ಇದು ಅತ್ಯಂತ ಕೆಟ್ಟ ಸರ್ಕಾರ. ಭ್ರಷ್ಟಾಚಾರದ ಸರ್ಕಾರ. ನಾನು ಎಂದು ನೋಡಿರಲಿಲ್ಲ ಎಂದು ಹೇಳಿದರು.

  ಇದನ್ನು ಓದಿ: ಚಾಮರಾಜನಗರದಲ್ಲಿ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸತ್ತಿದ್ದರೆ ಸರ್ಕಾರದ ‌ನಿರ್ಲಕ್ಷ್ಯವೇ ಕಾರಣ; ಸಿ.ಟಿ. ರವಿ

  ಒಬ್ಬ ಸಿಟಿಂಗ್ ಎಂಎಲ್​ಎ ಕುಸುಮಾ ಶಿವಳ್ಳಿ ಪಾಪ ಬೆಡ್ ಇಲ್ಲ ಅಂತ ಕಣ್ಣೀರು ಹಾಕಿದರು. ಅವರ ತಾಯಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಬೆಡ್ ಕೊಟ್ಟಿಲ್ಲ. ನಾನು ರಾಮಲಿಂಗಪ್ಪ ಅವರಿಗೆ ಫೋನ್ ಮಾಡಿ ಕೂಡಲೇ ಬೆಡ್ ಕೊಡಿಸಿದೆ. ಪ್ರೆಸ್ ಮೀಟ್ ನಲ್ಲೇ ವೈದ್ಯ ರಾಮಲಿಂಗಪ್ಪಗೆ ಕರೆ ಮಾಡಿ ಸರಿಯಾದ ಬೆಡ್ ವ್ಯವಸ್ಥೆ ಮಾಡಿ ಎಂದು ಸಿದ್ದರಾಮಯ್ಯ ಗದರಿದರು.

  ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಮುಂದಿನ ಒಂದು ಗಂಟೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಲಿದೆ. ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ. ಆಕ್ಸಿಜನ್ ಪೂರೈಕೆ ಮಾಡಿ ಜೀವ ಉಳಿಸಿವಂತೆ ಸಿದ್ದರಾಮಯ್ಯ ಒತ್ತಾಯಿಸಿದರು.
  Published by:HR Ramesh
  First published: