ಬೆಳಗಾವಿ (ಡಿ.5): ಸಿದ್ದರಾಮಯ್ಯ ಹೆಣೆದ ಬಲೆಯಿಂದಾಗಿ ನಾನು ನಾಶವಾದೆ. 12 ವರ್ಷ ರಾಜಕೀಯಲದಲ್ಲಿ ಕಾಪಾಡಿಕೊಂಡ ಹೆಸರನ್ನು ಕಾಂಗ್ರೆಸ್ ಜೊತೆ ಸೇರಿ ಹಾಳು ಮಾಡಿಕೊಂಡೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಗೌರವ ಇದ್ದರೆ ತಾನೇ ಹಾಳಾಗೋಕೆ ಎಂದು ಕುಟುಕಿದ್ದಾರೆ. ಬಾಗಲಕೋಟೆಯ ಮಹಾಲಿಂಗಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನೆಗೆ ತೆರಳುವ ಮುನ್ನ ಮಾತನಾಡಿದ ಅವರು, 2006ರಲ್ಲಿ ಇದ್ದ ನನ್ನ ಗುಡ್ವಿಲ್ ಹಾಳಾಯಿತು ಎನ್ನುತ್ತಾರೆ. ಇವರಿಗೆ ಗುಡ್ ವಿಲ್ ಇದ್ದರೆ ಅಲ್ವಾ ಹಾಳಾಗುವುದು. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ. ಒಲೈಕೆಗಾಗಿ ನಂಬಿಸಲು ಕಣ್ಣೀರು ಹಾಕುತ್ತಾರೆ. ಸಿಎಂ ಮಾಡಿದ್ದರಲ್ಲ ಅದೇನಾ ದ್ರೋಹ? ಕಣ್ಣೀರು ಹಾಕೋದು ಅವರ ಸಂಸ್ಕೃತಿ. ಕಣ್ಣೀರು ಹಾಕೋದೇನು ಹೊಸದೇನಲ್ಲ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮಾತಿಗೆ ಉತ್ತರನೇ ಕೊಡಬಾರದು. ಅವರು ಬೇಜವಾಬ್ದಾರಿಯಿಂದ ಹೇಳಿಕೆ ನೀಡುತ್ತಾರೆ. ಹೇಳುತ್ತಾರೆ. ಖಾಸಗಿ ಹೋಟೆಲ್ನಲ್ಲಿ ಕುಳಿತು ಆಡಳಿತ ನಡೆಸಿದರು. ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಅನುದಾನವನ್ನು ಮನೆಯಿಂದ ತಂದು ಕೊಟ್ಟಿದ್ರಾ?. ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಕೊಟ್ಟರು. ನಾನೇ ಸಿಎಂ ಆಗಿದ್ರು ಮನೆಯಿಂದ ತರುತ್ತಿರಲಿಲ್ಲ. ಅದೆಲ್ಲವೂ ಜನರ ತೆರಿಗೆ ಹಣ. ಶಾಸಕರ ಬೆಂಬಲಿದಿಂದ ತಾನೇ ಸಿಎಂ ಆಗಿದ್ದು. ಶಾಸಕರ ಕೈಗೆ ಸಿಗುತ್ತಿರಲಿಲ್ಲ, ಕಷ್ಟ ಸುಖ ಕೇಳಲಿಲ್ಲ ಎಂದರು.
ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ ಎಂಬ ಅವರ ಟೀಕೆಗೆ ಉತ್ತರಿಸಿದ ಅವರು, ದೇವೇಗೌಡ ಅವರು ಯಾರನ್ನ ಬೆಳಸಲ್ಲ,ಕುಟುಂಬಸ್ಥರನ್ನ ಬೆಳೆಸುತ್ತಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಇದನ್ನು ಓದಿ: ಸಿದ್ದರಾಮಯ್ಯ ಹೆಣೆದ ಬಲೆಗೆ ಬಿದ್ದು, ನಾಶವಾದೆ; ಎಚ್ಡಿ ಕುಮಾರಸ್ವಾಮಿ ಕಿಡಿ
ಉತ್ತರ ಕರ್ನಾಟಕ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೋನಾ ನೆಪ ಹೇಳಿ ಅಧಿವೇಶನ ಮಾಡುತ್ತಿಲ್ಲ. ಆದರೆ ಕಾರ್ಯಕಾರಣಿ ಸಭೆ ಮಾಡುತ್ತಿದ್ದಾರೆ. ನಾಲ್ಕನೂರು ಕೋಟಿ ಖರ್ಚು ಮಾಡಿ ನಿರ್ಮಿಸಿದ ವಿಧಾನಸೌಧ ಕಡೆಗಣನೆ ಆಗುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದರು.
ಚಳಿಕಾಲ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಸೂದೆ ಮಂಡಿಸಲು ಮುಂದಾಗಿರುವು ಕುರಿತು ಉತ್ತರಿಸಿದ ಅವರು, ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಜಾರಿ ಇದೆ. ಗೋ ರಕ್ಷಣೆ ಬಗ್ಗೆ ಭಾಷಣ ಮಾಡುವ ಆರ್ಎಸ್ಎಸ್ನವರು ಎಮ್ಮೆ ದನಗಳನ್ನು ಸಾಕಿ ಸಗಣೆ ಎತ್ತಿದ್ದಾರಾ. ರಾಜಕೀಯಕ್ಕೋಸ್ಕರ ಮಾತಾನಾಡುತ್ತಾ ಸಮಾಜ ಒಡೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ