ಸಿಎಎಗೆ ವಿರಾಮ ನೀಡಿ, ಬದುಕು ಕಳೆದುಕೊಂಡಿರುವ ಸಂತ್ರಸ್ತರ ಕಡೆ ಗಮನಕೊಡಿ; ಸಿದ್ದರಾಮಯ್ಯ

ಸಿಎಎ, ಎನ್‌ಆರ್‌ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ವಿರಾಮ ನೀಡಿ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ‌ ಗಮನ‌ ಕೊಡಿ ಎಂದು ಮನವಿ ಮಾಡಿದ ಅವರು, ಉಳಿದ ಪರಿಹಾರದ ಬಗ್ಗೆಯೂ ಪ್ರಶ್ನಿಸಿದ್ದಾರೆ.

Seema.R | news18-kannada
Updated:January 18, 2020, 4:27 PM IST
ಸಿಎಎಗೆ ವಿರಾಮ ನೀಡಿ, ಬದುಕು ಕಳೆದುಕೊಂಡಿರುವ ಸಂತ್ರಸ್ತರ ಕಡೆ ಗಮನಕೊಡಿ; ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜ.18): ದೇಶವನ್ನು ಒಡೆದು ಆಳುವ ನಿಮ್ಮ ಸಿಎಎ ನೀತಿ ಕುರಿತು ಜನರನ್ನು ಮರಳು ಮಾಡುವ ಬದಲು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ನೀವು ಕೊಟ್ಟಿರುವ ಪರಿಹಾರ ಸೂಕ್ತವಾಗಿದೆಯೇ ಎಂಬ ಕುರಿತು ಯಾಕೆ ಚಿಂತಿಸಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಸಲಹೆ ನೀಡಿದ್ದಾರೆ. 

ಸಿಎಎ ಜಾಗೃತಿ ಸಮಾವೇಶಕ್ಕಾಗಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಅಮಿತ್​ ಶಾ ವಿರುದ್ಧ ಟ್ವಿಟರ್​ನಲ್ಲಿ ಪ್ರಶ್ನೆಗಳ ಸರಮಾಲೆ ಹಾಕಿರುವ ಅವರು ಉತ್ತರಿಸುವಂತೆ ಸವಾಲ್​ ಹಾಕಿದ್ದಾರೆ.

ಸಿಎಎ, ಎನ್‌ಆರ್‌ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ವಿರಾಮ ನೀಡಿ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ‌ ಗಮನ‌ ಕೊಡಿ ಎಂದು ಮನವಿ ಮಾಡಿದ ಅವರು, ಉಳಿದ ಪರಿಹಾರದ ಬಗ್ಗೆಯೂ ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಪ್ರವಾಹದಿಂದ 35 ಸಾವಿರ ಕೋಟಿ ನಷ್ಟವಾಗಿದೆ. ಆದರೆ, ಕೇಂದ್ರದಿಂದ ಬಂದಿರುವುದು ಹೆಚ್ಚುವರಿಯಾಗಿ 1.870 ಕೋಟಿ ಅಷ್ಟೇ ಉಳಿದ ಹಣವನ್ನು ಯಾವಾಗ ನೀಡಬೇಕೆಂದು ನಿರ್ಧರಿಸಿದ್ದೀರಾ? ಮೊದಲು ಬಾಕಿ ನೆರೆ‌ಪರಿಹಾರ ಪಾವತಿ ನಂತರ ಸಿಎಎ, ಎನ್ ಆರ್ ಸಿ ಬಗ್ಗೆ ಯೋಚಿಸೋಣ ಎಂದಿದ್ದಾರೆಕಳಸಾ- ಬಂಡೂರಿ ಯೋಜನೆಯಲ್ಲಿ ನಿಮ್ಮ ಪಕ್ಷಕ್ಕೆ 2 ನಾಲಿಗೆ ಇದೆ. ಚುನಾವಣೆಯ ಮೊದಲು ನಮ್ಮ ಪರ ಇದ್ದ ನೀವು, ಈಗ ಗೋವಾ ಪರವಾಗಿದ್ದೀರಾ. ಯಾಕೆ? ಈ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂಬ ಬಗ್ಗೆ  ಸ್ಪಷ್ಟೀಕರಣ ಕೊಡಿ  ಎಂದು ಆಗ್ರಹಿಸಿದ್ದಾರೆ.


ಸಿಎಎ ಪ್ರತಿಭಟನೆಯಲ್ಲಿ ಮಂಗಳೂರಿನಲ್ಲಿ ಗೋಲಿಬಾರ್​ಗೆ  ಇಬ್ಬರು ಅಮಾಯಕರು ಸಾವನ್ನಪ್ಪಿದರು. ಅದು ಒಂದು ನಕಲಿ ಎನ್​ಕೌಂಟರ್​ ಎಂಬುದು ಸಾರ್ವಜನಿಕರು ಮಾತು. ಈ ಬಗ್ಗೆ ನಿಖರ ತನಿಖೆಯಾಗಬೇಕು ಎಂಬುದನ್ನು ನೀವು ಯೋಚಿಸಿಲ್ಲವೇ ಎಂದು ತಿವಿದಿದ್ದಾರೆ.

ರಾಜ್ಯದ ಕುರಿತು ಟ್ವಿಟರ್​ ಸಾಲು ಸಾಲು ಪ್ರಶ್ನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿಯೂ ಶಾ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕರು, ಅಮಿತ್​ ಶಾ ರಾಜ್ಯಕ್ಕೆ ಬರುತ್ತಿರುವುದೇ ಸುಳ್ಳು ಹೇಳಲು. ಸುಳ್ಳೇ ಅವರ ಬಂಡವಾಳ. ಮಹದಾಯಿ ಬಗೆಹರಿಸುತ್ತೇವೆ ಅಂದಿದ್ದರು. ಮಹಾರಾಷ್ಟ್ರ ನಮಗೆ ಮಧ್ಯಪ್ರವೇಶಿಸಿ ತೀರ್ಮಾನಿಸಬೇಕಿತ್ತು. ಎರಡೂ ಕಡೆ ಅವರದೇ ಸರ್ಕಾರ ಇದೆ. ಇನ್ನೂ ಯಾಕೆ ಬಗೆಹರಿಸಿಲ್ಲ. ಹುಬ್ಬಳ್ಳಿಗೇ ಹೋಗುತ್ತಿದ್ದರಾಲ್ಲ ಅಲ್ಲಿಯಾದರೂ ಅದನ್ನು ಮಾತನಾಡುತ್ತಾರಾ ಕಾದು ನೋಡುತ್ತೇವೆ ಎಂದರು.
ಯಾರ ಮೇಲೆ ದಾಳಿ ನಡೆದರೂ ತಪ್ಪು 

ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಚಕ್ರವತ್ತಿ ಹತ್ಯೆಗೆ ಎಸ್​ಡಿಪಿಐ ಸಂಚು ರೂಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು,  ಯಾರ ಮೇಲೆ ದಾಳಿ ನಡೆದರೂ ಅದು ತಪ್ಪು. ಆ ಪಕ್ಷದವರು, ಈ ಪಕ್ಷವದರು ಅಂತಲ್ಲ. ಯಾರ ಮೇಲೂ ದಾಳಿ ನಡೆಯಬಾರದು. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಎಲ್ಲರೂ ಒಂದೇ ಎಂದರು.

ಇದನ್ನು ಓದಿ: ಅರಮನೆ ಮೈದಾನದಲ್ಲಿ ವಿವೇಕದೀಪಿನೀ ಕಾರ್ಯಕ್ರಮ; ಅಮಿತ್ ಶಾ ಭಾಗಿ

ಎಸ್​ಡಿಪಿಐ ನಿಷೇಧದ ಬಗ್ಗೆ ನನಗೆ ಗೊತ್ತಿಲ್ಲ. ಇದೇ ರೀತಿ ಚಟುವಟಿಕೆ ಆರ್​ಎಸ್​ಎಸ್​ ಮಾಡ್ತಿಲ್ವಾ? ಯಾರೇ ಮಾಡಿದ್ರೂ ಕೂಡ ಅದು ತಪ್ಪು. ಆರ್​ಎಸ್​ಎಸ್​ ನಿಷೇಧಿಸಬೇಕೆಂದು ನಾನು ಹೇಳಲ್ಲ ಎಂದರು. 

 

 

 
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading