• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸದನವನ್ನು ಕೇಸರಿಮಯ ಮಾಡಿದರು; ನಾಳೆಯಿಂದ ಎಲ್ಲಾ ಕಲಾಪ ಬಹಿಷ್ಕಾರ: ಸಿದ್ದರಾಮಯ್ಯ

ಸದನವನ್ನು ಕೇಸರಿಮಯ ಮಾಡಿದರು; ನಾಳೆಯಿಂದ ಎಲ್ಲಾ ಕಲಾಪ ಬಹಿಷ್ಕಾರ: ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕೇಸರಿ ಶಾಲು ಹಾಕಿಕೊಂಡು ಈಗಲೇ ಮಸೂದೆ ಮಂಡನೆ ಆಗಬೇಕು ಎನ್ನುತ್ತಾರೆ. ಸಿಎಂ ಸೇರಿದಂತೆ ಎಲ್ಲರೂ ಕೇಸರಿ ಶಾಲು ಹಾಕಿಕೊಂಡು ಇಡೀ ಸದನವನ್ನು ಕೇಸರಿಮಯ ಮಾಡಿದರು

  • Share this:

ಬೆಂಗಳೂರು (ಡಿ. 9): ಬಿಜೆಪಿಯಿಂದ ಸಂಸದೀಯ ಸಂಪ್ರದಾಯ ನಾಶವಾಗಿದೆ. ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು​ ರಹಸ್ಯವಾಗಿ ಮಂಡನೆ ಮಾಡಲಾಗಿದೆ. ಈ ಕುರಿತು ಕಲಾಪ ಸಲಹಾ ಸಮಿತಿಯಲ್ಲಿ ತಿಳಿಸಿಯೇ ಇಲ್ಲ. ಇದ್ದಕ್ಕಿದ್ದಂತೆ ಆಶ್ಚರ್ಯಕರ ರೀತಿ ಮಸೂದೆ ಮಂಡನೆ ಮಾಡಲಾಗಿದೆ. ಸ್ಪೀಕರ್​ ಕೂಡಾ ವಿಧೇಯಕದ ಬಗ್ಗೆ ಹೇಳಿಲ್ಲ. ಗೋಹತ್ಯೆ ಮಸೂದೆ​ ಮೂಲಕ ಅರ್ಥವ್ಯವಸ್ಥೆ ನಾಶವಾಗಲಿದೆ. ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯ ಬಿಜೆಪಿ ಸರ್ಕಾರ ನಾಶ ಮಾಡಿದೆ. ಕಾನೂನು ವಿರುದ್ಧ ನೀತಿ ನಿಯಮ ಗಾಳಿಗೆ ತೂರಿದ್ದಾರೆ. ಗೋ ಹತ್ಯೆ ನಿಷೇಧ ಕಾಯಿದೆ ಮೂಲಕ ಇಡೀ ಅರ್ಥ ವ್ಯವಸ್ಥೆ ನಾಶ ಮಾಡಲು ಹೊರಟಿದ್ದಾರೆ.  ಪ್ರಜಾಪ್ರಭುತ್ವ ಕೊಲೆ ಮಾಡುವ ಕೊಲೆಗಡುಕರ ಜೊತೆ ಸದನ ನಡೆಸುವುದು ಸರಿಯಲ್ಲ. ಈ ಹಿನ್ನಲೆ  ನಾಳೆ ಎಲ್ಲಾ ಕಲಾಪ ಬಹಿಷ್ಕಾರ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ತಿಳಿಸಿದ್ದಾರೆ. 


ಅಧಿವೇಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು. ಮಧ್ಯಪ್ರದೇಶ , ಉತ್ತರ ಪ್ರದೇಶದಲ್ಲಿ ಗೋವು ನಿಷೇಧ ಕಾನೂನು ತಂದಿದ್ದಾರೆ. 10 ಲಕ್ಷ ಜಾನುವಾರುಗಳು ಉತ್ತರ ಪ್ರದೇಶದಲ್ಲಿ ಕಡಿಮೆ ಆಗಿದೆ. ರೈತರು ಜಾನುವಾರು ಸಾಕುವುದನ್ನೇ ಬಿಟ್ಟು ಬಿಡುತ್ತಾರೆ. ಎಂಥಾ ಸಂದರ್ಭದಲ್ಲಿ ಬಿಲ್ ತಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಿದೆ. ಈ ಸಂದರ್ಭದಲ್ಲಿ ಜನರ ಮೇಲೆ ಇದು ಯಾವ ಪರಿಣಾಮ ಬೀರಲಿದೆ. ಇದು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರಲ್ವಾ?
ಇದು ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆ ಯಲ್ಲವೇ ಎಂದು ಪ್ರಶ್ನಿಸಿದರು, ಅಲ್ಲದೇ ಈ ಕುರಿತು ಚುನಾವಣಾ ಆಯೋಗಕ್ಕೆ ನಾವು ದೂರು ನೀಡುವುದಾಗಿ ತಿಳಿಸಿದರು.


ಇದನ್ನು ಓದಿ: ವಿಪಕ್ಷಗಳ ಗದ್ದಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ; ಗುಜರಾತ್, ಉ.ಪ್ರದೇಶ ಮಾದರಿಯಲ್ಲಿ ಕಾಯ್ದೆ ರಚನೆ


ನಾವು ಯಾರದೋ ಪರ ಅಥವಾ ವಿರೋಧ ಅಲ್ಲ. ಗೋ ರಕ್ಷಣೆ ಅನಾದಿ ಕಾಲದಿಂದಲೂ ಇದೆ. ಆರ್ ಎಸ್ ಎಸ್ ನವರು ದನ ಎಮ್ಮೆ ಮೇಯಿಸಿಕೊಂಡು ಬಂದಿದ್ದಾರಾ? ಸಗಣಿ ಎತ್ತಿದ್ದಾರಾ? ಗಂಜಲ ಬಳದಿದ್ದಾರಾ? ನಾವೆಲ್ಲಾ ಸಗಣಿ, ಗಂಜಲ ಎತ್ತಿದೀವಿ. ಆರ್ ಎಸ್ ಎಸ್ ನವರು ಯಾವಾಗ ಗೋ ಪೂಜೆ ಮಾಡಿದ್ದಾರೆ ಎಂದು ಇದೇ ವೇಳೆ ಆರ್ ಎಸ್ ಎಸ್ ವಿರುದ್ಧ ವ್ಯಂಗ್ಯವಾಡಿದರು.

ಸ್ಪೀಕರ್​ ಬಿಜೆಪಿ ಕೈಗೊಂಬೆ


ಜನ ಅಧಿಕಾರ ಕೊಟ್ಟಿರೋದು ಸಮಾಜ ಪರಿವರ್ತನೆಗೆ ಹೊರತು ಸಮಾಜ ಒಡೆಯುವುದಕ್ಕೆ ಅಲ್ಲ. ಮಸೂದೆ ತರುವ ಮೊದಲು ಚರ್ಚೆ ಮಾಡೋಣ ಅಂತ ನಾನು ಹೇಳಿದೆ. ಮುಂದಿನ ಅಧಿವೇಶನದಲ್ಲಿ ಬಿಲ್ ತಗೊಂಡು ಬನ್ನಿ ಚರ್ಚೆ ಮಾಡೋಣ ಅಂತ ಹೇಳಿದೆ. ಸ್ಪೀಕರ್ ಕಚೇರಿಯನ್ನು ಬಿಜೆಪಿ ಆಫೀಸ್ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಸ್ಪೀಕರ್ ರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಸ್ಪೀಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಕೇಸರಿಮಯ:


ಕೇಸರಿ ಶಾಲು ಹಾಕಿಕೊಂಡು ಈಗಲೇ ಮಸೂದೆ ಮಂಡನೆ ಆಗಬೇಕು ಎನ್ನುತ್ತಾರೆ. ಕಾನೂನು ಸಚಿವ ಮಾಧುಸ್ವಾಮಿ  ನಾಳೆ ಮಂಡಿಸೋಣ ಎಂದರೂ ಉಳಿದವರು ಬಿಡಲಿಲ್ಲ. ಸಿಎಂ ಸೇರಿದಂತೆ ಎಲ್ಲರೂ ಕೇಸರಿ ಶಾಲು ಹಾಕಿಕೊಂಡು ಇಡೀ ಸದನವನ್ನು ಕೇಸರಿಮಯ ಮಾಡಿದರು ಎಂದರು.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು