HOME » NEWS » State » OPPOSITION LEADER SIDDARAMAIAH HUMOROUS TALKS IN KARNATAKA ASSEMBLY SESSION SESR

ಸದನ ಸ್ವಾರಸ್ಯ: ಡಕೋಟಾ ಎಕ್ಸ್​​ಪ್ರೆಸ್, ಪಾಪ ಪುಣ್ಯ, ಎಣ್ಣೆ ಏಟು – ಬಿಜೆಪಿಗರ ಕಾಲೆಳೆದ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುವ ಸಂದರ್ಭದಲ್ಲಿ ಸ್ವಾರಸ್ಯಕರ ಚರ್ಚೆಯೊಂದನ್ನು ನಡೆಸಿ, ಎಲ್ಲರ ಗಮನ ಸೆಳೆದರು

news18-kannada
Updated:February 3, 2021, 3:07 PM IST
ಸದನ ಸ್ವಾರಸ್ಯ: ಡಕೋಟಾ ಎಕ್ಸ್​​ಪ್ರೆಸ್, ಪಾಪ ಪುಣ್ಯ, ಎಣ್ಣೆ ಏಟು – ಬಿಜೆಪಿಗರ ಕಾಲೆಳೆದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು (ಫೆ.3): ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಗಂಭೀರ ಚರ್ಚೆಗಳ ನಡುವೆ ಕೆಲವೊಮ್ಮೆ ಕುತೂಹಲಕಾರಿ, ವಿನೋದ ಚರ್ಚೆಗಳು ನಡೆಯುತ್ತವೆ. ಆಡಳಿತ ಮತ್ತು ವಿಪಕ್ಷ ನಾಯಕರು ಮುಕ್ತವಾಗಿ ಕಾಲೆಳೆದುಕೊಳ್ಳುವ ಮೂಲಕ ಸದನದಲ್ಲಿ ಕೆಲವು ವೇಳೆ ನಗೆಗಡಲಿನಲ್ಲಿ ತೇಲುವಂತಹ ಅನೇಕ ಪ್ರಸಂಗಗಳು ಕಲಾಪದಲ್ಲಿ ಕಂಡು ಬರುತ್ತವೆ. ಅದೇ ರೀತಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುವ ಸಂದರ್ಭದಲ್ಲಿ ಸ್ವಾರಸ್ಯಕರ ಚರ್ಚೆಯೊಂದನ್ನು ನಡೆಸಿ, ಎಲ್ಲರ ಗಮನ ಸೆಳೆದರು. ನಮ್ಮ ಕಡೆ ಪಾಪದವರು ಎಂದರೇ ಕೆಟ್ಟವನು ಎನ್ನುವ ರೀತಿ ಅರ್ಥ ಇದೆ. ಆದರೆ, ಪಾಪ ಪುಣ್ಯ ಎಲ್ಲಾ ಇಲ್ಲೆ ಇರುವುದು ಇಲ್ಲಿಯೇ ಅನುಭವಿಸಬೇಕು ಎಂದರು.

ಜಾಲಪ್ಪ ಒಮ್ಮೆ ನನಗೆ ಎಣ್ಣೆ ಹೊಡೆಯುತ್ತಿಯಾ ಎಂದು ಕೇಳಿದ್ದರು. ನಾನು ಇಲ್ಲ ಸರ್​ ಎಂದೆ. ಅದಕ್ಕೆ ಜಾಲಪ್ಪ, ಈ ಭೂಮಿಯಲ್ಲಿ ಸಿಗುವ ಎಲ್ಲವನ್ನು ಅನುಭವಿಸಬೇಕು ಎಂದು ನನಗೆ ಹೇಳಿದರು. ಇಲ್ಲದಿದ್ದರೆ ಮುಂದೆ ಯಮ ಒಳಗೆ ಸೇರಿಸಿಕೊಳ್ಳಲ್ಲ ಎಂದರು. ಇದೇ ವೇಳೆ ಲಕ್ಷ್ಮಣ ಸವದಿ ಕಾಲೆಳೆದ ವಿಪಕ್ಷ ನಾಯಕರು ನಾನು ಹೇಳಿದ್ದು ಅರ್ಥವಾಯಿತಾ. ನೀನು ಒಳಗೆ ಹೋಗುತ್ತಿಯಾ ಬಿಡು ಎಂದರು.

ಇದಕ್ಕೆ ಉತ್ತರಿಸಿದ ಡಿಸಿಎಂ ಲಕ್ಷಣ ಸವದಿ, ಆಯ್ತು ಸರ್ ನನ್ನದು ಬಿಡಿ .ನೀವು ಒಳಗೆ ಬರ್ತಿರಾ? ಎನ್ನುವ ಮೂಲಕ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಾಪ ಪುಣ್ಯದ ಲೆಕ್ಕಾಚಾರ ಇಲ್ಲಿಯೇ ನಡೆಯುವುದರಿಂದ ಜನರ ಪರವಾದ ಕೆಲಸ ಮಾಡಬೇಕಲ್ಲವೇ? ಆ ಅಬಕಾರಿ ಸಚಿವನಾಗಿದ್ದ ನಾಗೇಶ್ ಈಗ ತೆಗೆದುಹಾಕಲಾಗಿದೆ. ಅವನು ಈಗ ಬೀದಿಪಾಲಾದ. ಇಲಾಖೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿತ್ತಾ ಎಂದು ಅರವಿಂದ್ ಲಿಂಬಾವಳಿಗೆ ತಿವಿದರು. ಈ ವೇಳೆ ಪ್ರತಿಕ್ರಿಯಿಸಿದ ಲಿಂಬಾವಳಿ, ನಾನು ಈಗ ಸಂಪುಟದ ಒಳಗೆ ಬಂದಿದ್ದೇನೆ ಸರ್, ನನ್ನನ್ನೇ ಯಾಕೆ ಕೇಳುತ್ತೀರಾ ಸರ್ ಎಂದು ನುಣುಚಿಕೊಂಡರು.

ಇದನ್ನು ಓದಿ: ಡಕೋಟಾ ಎಕ್ಸ್​​ಪ್ರೆಸ್​​ನಂತಿರುವ​ ಬಿಜೆಪಿ ಸರ್ಕಾರವನ್ನು ಜನರು ಶೀಘ್ರದಲ್ಲೇ ರಿಪ್ಲೇಸ್ ಮಾಡ್ತಾರೆ; ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ

ಇದೇ ವೇಳೆ, ನೀನು ಎಣ್ಣೆ ಹೊಡೆಯುತ್ತಿಯಾ ಲಿಂಬಾವಳಿ? ಯಾವತ್ತಾದ್ರೂ ವಿಸ್ಕಿ ಕುಡಿದಿದ್ದಿಯಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಅದು ನಿಮಗೆ ಗೊತ್ತಿಲ್ವಾ ಸರ್‌ ಎಂದರು. ಹೌದು ಹೌದು ನಾವು ಒಂದು ಸಲ ಶ್ರೀನಿವಾಸ ಮನೆಯಲ್ಲಿ ಸೇರಿದ್ವಲ್ಲಾ? ಅವತ್ತು ನೀನು ವಿಸ್ಕಿ ಕುಡಿದಿದ್ಯಾ ಅಂತ ಗೊತ್ತಾಗಲಿಲ್ಲ ,‌ ಆಯ್ತು ಮತ್ತೆ ಸೇರೋಣ‌ ಎಂದು ಮಾತು ಮುಗಿಸಿದರು.

ಈ ಸರಕಾರ ಒಂದು ರೂಪಾಯಿ ಕೊಡುತ್ತಿಲ್ಲ. ನಾನು ಶ್ರೀರಾಮುಲು ಅವರಿಗೆ ಸಮುದಾಯ ಭವನಕ್ಕೆ ದುಡ್ಡು ನೀಡುವಂತೆ ಕೇಳಿದೆ. ಅಷ್ಟೇ ಅಲ್ಲದೇ ನಿನ್ನ ಕ್ಷೇತ್ರ ಕಣಯ್ಯಾ ಎಂದು ಹೇಳಿದೆ. ಆದರೆ, ಶ್ರೀರಾಮುಲು ಹಣ ಕೊಡಲಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಶ್ರೀರಾಮುಲು, ಒಂದು ರೂಪಾಯಿ ನನಗೇ ಕೊಟ್ಟಿಲ್ಲ ಎಂದು ಸಮಾಜಾಯಿಷಿ ನೀಡಿದರು.
Published by: Seema R
First published: February 3, 2021, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories