Siddaramaiah: ಪ್ರಧಾನಿ ಮೋದಿ ಕಣ್ಣೀರು ಹಾಕಿ ಜನರಿಗೆ ಮೋಸ ಮಾಡ್ತಿದಾರೆ; ಸಿದ್ದರಾಮಯ್ಯ ವಾಗ್ದಾಳಿ

ಸರ್ಕಾರದ ಪ್ಯಾಕೇಜ್ ಜನರಿಗೆ ತಲುಪಿಲ್ಲ. ಅನೇಕ ಕಾರ್ಮಿಕರನ್ನು ಬಿಟ್ಟಿದ್ದಾರೆ. ತಮಿಳುನಾಡು ಉತ್ತಮ ಪರಿಹಾರ ನೀಡಿದೆ. ಕೇರಳ ಮನೆ ಮನೆಗೆ ಆಹಾರ ಸಾಮಾಗ್ರಿ ನೀಡುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಯಾಕೆ ಆಗುತ್ತಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ ಪರಿಹಾರವೂ ತಲುಪಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
    ಬೆಂಗಳೂರು(ಮೇ 24): ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಿಪಕ್ಷ ನಾಯಕ ಹರಿಹಾಯ್ದಿದ್ದಾರೆ.  ಮೋದಿ ಕಣ್ಣೀರು ಹಾಕಿದ ವಿಚಾರವಾಗಿ, ಇದೆಲ್ಲಾ ಬರೀ ನಾಟಕದ ಕಣ್ಣೀರು.  ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಣ್ಣೀರು ಹಾಕಿ‌ ಮೋದಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಚಪ್ಪಾಳೆ, ತಟ್ಟೆ, ಜಾಗಟೆ, ದೀಪ, ಕಣ್ಣೀರು-ಇವುಗಳಿಂದ ಕೊರೋನಾ ‌ಓಡಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

    ಚಾಮರಾಜನಗರದ ಪರಿಹಾರ ಸಿಕ್ಕಿದ್ದು ನಮ್ಮ ಹೋರಾಟದಿಂದ. ಲಸಿಕೆ ವಿಚಾರದಲ್ಲಿ ನಾವು ಅಪಪ್ರಚಾರ ಮಾಡಿಲ್ಲ. ಲಸಿಕೆ ಇಲ್ಲದೇ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.  ಕೇಂದ್ರದಿಂದ ಬರುವ ಲಸಿಕೆ ತಾರತಮ್ಯ ಆಗಿದೆ. ನೀವು ಮೊದಲು ಅದನ್ನು ಕೇಳಿ. ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ಬೇರೆ ದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಿಗಳೇ ಮೊದಲು ಹಾಕಿಸಿಕೊಂಡರು. ಆದರೆ ನಮ್ಮ‌ ಪ್ರಧಾನಿ ತಡವಾಗಿ ಹಾಕಿಸಿಕೊಂಡರು.  ಪ್ರಧಾನಿ ತಡ ಮಾಡಿದ್ದರಿಂದ‌ ಸ್ವಲ್ಪ ಅನುಮಾನ ಇತ್ತು.  ಅದು ಅಲ್ಲದೇ 6 ಕೋಟಿ ಲಸಿಕೆ ರಫ್ತು ಮಾಡಿದರು. ಪ್ರಚಾರಕ್ಕಾಗಿ ರಫ್ತು ಮಾಡಿದ್ದು ಯಾಕೆ? ರಾಜ್ಯಕ್ಕೆ 8 ಕೋಟಿ ಲಸಿಕೆ ಸದ್ಯ ಅಗತ್ಯ ಇದೆ. 4 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಬೇಕಿದೆ. ನಾವು ಶಾಸಕರ ನಿಧಿಯಿಂದ 100ಕೋಟಿ ಕೊಡುತ್ತೇವೆ. ಆದರೆ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಉಮೇಶ್ ಕತ್ತಿಗೆ ಜನ ಕೆಲಸ ಕೊಟ್ಟಿದ್ದಾರೆ.  ಕತ್ತಿ ಕೊಟ್ಟಿರುವ ಕೆಲಸ ಮಾಡಲಿ ಅಕ್ಕಿ‌ ಕೇಳಿದರೆ ಜನ ಸಾಯಲಿ ಎನ್ನುತ್ತಾರೆ. ಮೊದಲು 10ಕೆಜಿ ಅಕ್ಕಿ ನೀಡಲಿ .ಅದು ಬಿಟ್ಟು ಜನ ಸಾಯಲಿ ಎನ್ನಬಹುದಾ ಎಂದು ಆಹಾರ ಸಚಿವ ಉಮೇಶ್​ ಕತ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ:Unconditional Love ಅಂದ್ರೆ ಇದು...!; ಆಕ್ಸಿಜನ್​ ಸಪೋರ್ಟ್​​ನಿಂದ ಅಡುಗೆ ಮಾಡುತ್ತಿರುವ ತಾಯಿಯ ಫೋಟೋ ನೋಡಿ ನೆಟ್ಟಿಗರು ಹೇಳಿದ್ದೇನು?

    ಸರ್ಕಾರದ ಪ್ಯಾಕೇಜ್ ಜನರಿಗೆ ತಲುಪಿಲ್ಲ. ಅನೇಕ ಕಾರ್ಮಿಕರನ್ನು ಬಿಟ್ಟಿದ್ದಾರೆ. ತಮಿಳುನಾಡು ಉತ್ತಮ ಪರಿಹಾರ ನೀಡಿದೆ. ಕೇರಳ ಮನೆ ಮನೆಗೆ ಆಹಾರ ಸಾಮಾಗ್ರಿ ನೀಡುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಯಾಕೆ ಆಗುತ್ತಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ ಪರಿಹಾರವೂ ತಲುಪಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಇನ್ನು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹರಡುತ್ತಿರುವ ವಿಚಾರವಾಗಿ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ 300 ದಾಟಿದೆ. ಡಯಾಬಿಟಿಸ್ ಇರುವವರಿಗೆ ಬರುತ್ತದೆ ಎಂದು ವೈದ್ಯರು ಈಗ ಹೇಳುತ್ತಿದ್ದಾರೆ. ರೋಗಿಗಳಿಗೆ ಬೇಕಾದ ಇಂಜೆಕ್ಷನ್ ಸಿಗುತ್ತಿಲ್ಲ. ಚಿಕಿತ್ಸೆ ಕೊಡಲು ಅಂಪೋಟೆರಿಸಿನ್ ಇಂಜೆಕ್ಷನ್ ಇಲ್ಲ. ದುಬಾರಿ ಮೊತ್ತದ ಇಂಜೆಕ್ಷನ್ ಅದು. ಸದಾನಂದಗೌಡ ಕೂಡಲೇ ಇಂಜೆಕ್ಷನ್ ವ್ಯವಸ್ಥೆ ಮಾಡಬೇಕು.  ಅಗತ್ಯ ಇರುವ ಔಷಧ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಬ್ಲ್ಯಾಕ್​ ಫಂಗಸ್​ ಸಾಕಷ್ಟು ಹರಡುತ್ತಿದೆ. ಆದರೆ ಅದಕ್ಕೆ ಬೇಕಾದ ಚಿಕಿತ್ಸೆ ಸಿಗುತ್ತಿಲ್ಲ. ಇಂಜೆಕ್ಷನ್ ಎಲ್ಲಿಯೂ ಸಿಗುತ್ತಿಲ್ಲ.  ಔಷಧ ಇಲ್ಲದೇ ಜನರನ್ನು ಸಾಯಿಸಲಾಗುತ್ತಿದೆ. ಇದು ಜನರ ಕೊಲೆಯೇ ಸರಿ ಎಂದು ಆರೋಪಿಸಿದರು.

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಚಾರವಾಗಿ,  ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಇಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    Published by:Latha CG
    First published: