ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ; ಬದಾಮಿಯಲ್ಲಿ ಭಾವುಕರಾದ ಮಾಜಿ ಸಿಎಂ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ  ಪ್ರವಾಹ ಸಂಬಂದ ಚರ್ಚೆ ವಿಚಾರ ಕಡಿಮೆ ಅವಧಿಯಲ್ಲಿ ಚರ್ಚೆ ನಡೆಸಲಾಯಿತು. ರಾಜ್ಯದ ಮುಕ್ಕಾಲು ಭಾಗ ಪ್ರವಾಹದಲ್ಲಿ ಸಿಲುಕಿದ್ದರೂ ಈ ಕುರಿತು ಚರ್ಚೆ ಮಾಡಲು ಸ್ಪೀಕರ್​ ಬಿಡಲಿಲ್ಲ ಎಂದು ಆರೋಪಿಸಿದರು

Seema.R | news18india
Updated:October 23, 2019, 4:33 PM IST
  • Share this:
ಬದಾಮಿ(ಅ. 23): ಬಾದಾಮಿ ಕ್ಷೇತ್ರದ ಜನರ ಆಶೀರ್ವಾದದಿಂದ ಇಂದು ನಾನು ಮತ್ತೊಮ್ಮೆ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಇಲ್ಲಿನ ಜನ  ನನ್ನನ್ನು ಶಾಸಕನಾಗಿ ಆಯ್ಕೆ ಮಾಡದಿದ್ದರೆ ನಾನೆಲ್ಲಿ ವಿರೋಧ ಪಕ್ಷದ ನಾಯಕನಾಗುತ್ತಿದ್ದೆ. ಮೈಸೂರಿನಲ್ಲಿ ಸೋಲಿಸಿದಂತೆ ನೀವೂ ಬದಾಮಿಯಲ್ಲಿ ಸೋಲಿಸಿದ್ದರೆ ನಾನು ಮನೆಯಲ್ಲಿರಬೇಕಾಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದ ಜನರೊಂದಿಗೆ ಭಾವುಕರಾಗಿ ಮಾತನಾಡಿದ್ದಾರೆ. 

ಇಲ್ಲಿನ ಗುಳೇದಗುಡ್ಡದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ  ಪ್ರವಾಹ ಸಂಬಂದ ಚರ್ಚೆ ವಿಚಾರ ಕಡಿಮೆ ಅವಧಿಯಲ್ಲಿ ಚರ್ಚೆ ನಡೆಸಲಾಯಿತು. ರಾಜ್ಯದ ಮುಕ್ಕಾಲು ಭಾಗ ಪ್ರವಾಹದಲ್ಲಿ ಸಿಲುಕಿದ್ದರೂ ಈ ಕುರಿತು ಚರ್ಚೆ ಮಾಡಲು ಸ್ಪೀಕರ್​ ಬಿಡಲಿಲ್ಲ ಎಂದು ಆರೋಪಿಸಿದರು.

ಸ್ಪೀಕರ್​ಗೆ ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ: 

ಬಿಜೆಪಿಯವರು ಅವನ್ಯಾವನೋ ಒಬ್ಬ ಪುಣ್ಯಾತ್ಮನನ್ನು ಸ್ಪೀಕರ್​ ಮಾಡಿಬಿಟ್ಟಿದ್ದಾರೆ. ಅವನು ಹೊಸಬ, ಏನು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರು ಜಾಸ್ತಿ ಮಾತನಾಡುವ ಆಗಿಲ್ಲ. ಅವನು ಹೊಸಬ, ಏನು ಗೊತ್ತಿಲ್ಲ. ವಿಪಕ್ಷದವರು ಜಾಸ್ತಿ ಮಾತನಾಡಿದರೆ ಕುಳಿತುಕೊಳ್ಳಿ ಅಂತಾನೆ. ಕರ್ನಾಟಕ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಗೆ ಇಷ್ಟೇ ಮಾತನಾಡಿ ಅಂತ ಹೇಳಿಲ್ಲ. ನನಗೂ ಇಷ್ಟೇ ಮಾತನಾಡಿ ಎಂದರು. ನಾನು ಹೇಳಿದೆ ನಾನು ಮಾತನಾಡುತ್ತೇನೆ. ಕೇಳಿದ್ರೆ ಕೇಳು. ಇಲ್ಲ ಅಂದ್ರೆ ಬಿಡು ಎಂದೆ ಎಂದು ಸ್ಪೀಕರ್​ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ; ಡಿಸಿಎಂ ಲಕ್ಷ್ಮಣ ಸವದಿ

ಸಿಎಂ ಬಿಎಸ್​ ಯಡಿಯೂರಪ್ಪ ಅವರು, ಕಾಂಗ್ರೆಸ್​ನವರಿಗೆ ಕೊಟ್ಟ ಅನುದಾನ ಕಡಿತ ಮಾಡಿದರು. ದ್ವೇಷ ರಾಜಕಾರಣ ಮಾಡಬೇಡಿ. ಬಿಜೆಪಿಯವರಿಗೆ ಅನುದಾನ ಕೊಟ್ಟು, ನಮಗೆ ಕೊಡದಿದ್ದರೆ, ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ನಾನು ಹೇಳಿದ ಮೇಲೆಯೇ ವಾಪಸ್​ ಅನುದಾನ ಕೊಟ್ಟಿದ್ದಾರೆ ಎಂದರು.

(ವರದಿ: ರಾಚಪ್ಪ ಬನ್ನಿದಿನ್ನಿ)
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ