HOME » NEWS » State » OPPOSITION LEADER SIDDARAMAIAH BROTHER SIDDEGOWDA DONATES 10 RS FOR RAM MANDIR SESR PMTV

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಿದ್ದೇಗೌಡ

ಸಿದ್ದೇಗೌಡರು 10 ರೂ ದೇಣಿಗೆ ನೀಡಿದ್ದಾರೆ. 10 ರೂ ದೇಣಿಗೆ ಪಡೆದು ರಶೀದಿಯನ್ನ ನೀಡಿರುವ ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡರ ಜೊತೆ ನಿಂತು ಪೋಟೋಗೆ ಪೋಸ್ ಕೊಟ್ಟಿದ್ದಾರೆ.

news18-kannada
Updated:February 16, 2021, 6:46 PM IST
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಿದ್ದೇಗೌಡ
ಸಿದ್ದೇಗೌಡರು 10 ರೂ ದೇಣಿಗೆ ನೀಡಿದ್ದಾರೆ. 10 ರೂ ದೇಣಿಗೆ ಪಡೆದು ರಶೀದಿಯನ್ನ ನೀಡಿರುವ ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡರ ಜೊತೆ ನಿಂತು ಪೋಟೋಗೆ ಪೋಸ್ ಕೊಟ್ಟಿದ್ದಾರೆ.
  • Share this:
ಮೈಸೂರು (ಫೆ. 16):  ರಾಜ್ಯದಲ್ಲಿ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ  ನಾನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಾಮಮಂದಿರಕ್ಕೆ ದೇಣಿಗೆ ನೀಡುವುದಿಲ್ಲ ಎಂದು ದೆಹಲಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ವಿವಾದಿತ ಸ್ಥಳದಲ್ಲಿ ಕಟ್ಟುತ್ತಿರುವ ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಆದರೆ,  ಇತ್ತ ಸಿದ್ದರಾಮಯ್ಯರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ. ಅಲ್ಲದೇ, ಸಿದ್ದರಾಮಯ್ಯ ಅವರ ತಮ್ಮ ಸಿದ್ಧೇಗೌಡ  ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ದೇಶಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸರ್ಮಪಣಾ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಸಾಂಸ್ಕೃತಿಕ ನಗರದಲ್ಲಿ ಕೂಡ ಈ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಮ ಗ್ರಾಮಗಳಿಗೂ ತೆರಳಿ ನಿಧಿ ಸಂಗ್ರಹಣೆ ನಡೆಸಲಾಗುತ್ತಿದೆ. ಅದರಂತೆ ಸಿದ್ದರಾಮನಹುಂಡಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ. 

ಸಿದ್ದರಾಮಯ್ಯ ಅವರ ಸ್ವಗ್ರಾಮವಾದ  ಸಿದ್ದರಾಮನಹುಂಡಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹಿಸಿದ ಬಿಜೆಪಿ ಕಾರ್ಯಕರ್ತರು, ಅವರ ತಮ್ಮ ಸಿದ್ದೇಗೌಡರ ನಿವಾಸಕ್ಕೆ ತೆರಳಿ ನಿಧಿಗಾಗಿ ಮನವಿ ಮಾಡಿದ್ದಾರೆ. ಕನಿಷ್ಠ 10ರೂನಿಂದ ಎಷ್ಟಾದರೂ ದೇಣಿಗೆ ನೀಡಿ ಎಂದ ಮನವಿ ಮಾಡಿದರು. ಅಲ್ಲದೇ ಈ ವೇಳೆ  ಬಿಜೆಪಿ ಕಾರ್ಯಕರ್ತರು ರಾಮಮಂದಿರದ ಇತಿಹಾಸವನ್ನು ಅವರಿಗೆ ವಿವರಿಸಿದ್ದಾರೆ. ಕೊನೆಗೆ ಬಿಜೆಪಿ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಿದ್ದೇಗೌಡರು 10 ರೂ ದೇಣಿಗೆ ನೀಡಿದ್ದಾರೆ. 10 ರೂ ದೇಣಿಗೆ ಪಡೆದು ರಶೀದಿಯನ್ನ ನೀಡಿರುವ ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡರ ಜೊತೆ ನಿಂತು ಪೋಟೋಗೆ ಪೋಸ್ ಕೊಟ್ಟಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹಸಿರು ನಿಶಾನೆ ತೋರಿದ ಕಾಂಗ್ರೆಸ್​ ಹೈ ಕಮಾಂಡ್​

ಇದಾದ ಬಳಿಕ ಸಿದ್ದರಾಮಯ್ಯರ ಅಣ್ಣನ ಮಗನ ಬಳಿಯೂ ನಿಧಿಗೆ ಮನವಿ ಮಾಡಿದ್ದಾರೆ.‌ ಆದರೆ, ಬಿಜೆಪಿ ಕಾರ್ಯಕರ್ತರ ಮನವಿಗೆ ಸ್ಪಂದಿಸದ ಸಿದ್ದರಾಮಯ್ಯರ ಅಣ್ಣನ ಮಗ ನಾನು‌ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ. ನೀವು ಅಗತ್ಯವಿದ್ದರೆ ನಮ್ಮೂರಿನಲ್ಲಿ ಪಡೆದುಕೊಳ್ಳಿ ಎಂದ ತಿಳಿಸಿದ್ದಾರೆ.

ಕೊನೆಗೆ ಸಿದ್ದರಾಮಯ್ಯರ ಅಣ್ಣನ ಮಗನಿಗೆ ಕರಪತ್ರ ನೀಡಿ ವಾಪಸ್ಸಾದ ಬಿಜೆಪಿಗರು ಸಿದ್ದರಾಮನಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ 40 ಸಾವಿರ ದೇಣಿಗೆ ಸಂಗ್ರಹಿಸಿದ್ದಾರೆ. ರಾಮಮಂದಿರಕ್ಕೆ ದೇಣಿಗೆ ನೀಡುವುದಿಲ್ಲ ಎಂದ ಸಿದ್ದರಾಮಯ್ಯರ ಸ್ವ ಗ್ರಾಮದಲ್ಲೇ ದೇಣಿಗೆ ಸಂಗ್ರಹಕ್ಕೆ‌ ಮುಂದಾದ ಬಿಜೆಪಿ ಕಾರ್ಯಕರ್ತರು ನಡೆಯೂ ಚರ್ಚೆಗೆ ಗ್ರಾಸವಾಗಿದೆ.
Published by: Seema R
First published: February 16, 2021, 6:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories