ತಿಂಗಳಾದರೂ ಸಿಕ್ಕಿಲ್ಲ ಸರ್ಕಾರಿ ಸವಲತ್ತು; ಸ್ಪೀಕರ್ ಕಾಗೇರಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ

ಒಂದು ತಿಂಗಳ ಹಿಂದೆಯೇ ಸ್ಪೀಕರ್ ಕಾಗೇರಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ವಿರೋಧ ಪಕ್ಷದ ನಾಯಕನಾಗಿರುವ ತಮಗೆ ಸರ್ಕಾರಿ ಸವಲತ್ತು, ಸರ್ಕಾರಿ ಕಾರು ಮತ್ತು ಸಿಬ್ಬಂದಿಯನ್ನು ಒದಗಿಸಬೇಕೆಂದು ಮನವಿ ಮಾಡಿದ್ದರು. ಆದರೂ ಇನ್ನೂ ಆ ಸೌಲಭ್ಯವನ್ನು ಮಂಜೂರು ಮಾಡಿಲ್ಲ.

news18-kannada
Updated:November 13, 2019, 3:05 PM IST
ತಿಂಗಳಾದರೂ ಸಿಕ್ಕಿಲ್ಲ ಸರ್ಕಾರಿ ಸವಲತ್ತು; ಸ್ಪೀಕರ್ ಕಾಗೇರಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ
ಸಿದ್ದರಾಮಯ್ಯ- ಸ್ಪೀಕರ್ ಕಾಗೇರಿ
  • Share this:
ಬೆಂಗಳೂರು (ನ. 13): ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ತಿಂಗಳೇ ಕಳೆದಿದೆ. ಇನ್ನೂ ವಿರೋಧ ಪಕ್ಷದವರಿಗೆ ಸಿಗಬೇಕಾದ ಸರ್ಕಾರಿ ಕಾರು ಮತ್ತು ಸಿಬ್ಬಂದಿಗಳನ್ನು ಅವರಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ.

1 ತಿಂಗಳ ಹಿಂದೆಯೇ ಸ್ಪೀಕರ್ ಕಾಗೇರಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ವಿರೋಧ ಪಕ್ಷದ ನಾಯಕನಾಗಿರುವ ತಮಗೆ ಸರ್ಕಾರಿ ಸವಲತ್ತು, ಸರ್ಕಾರಿ ಕಾರು ಮತ್ತು ಸಿಬ್ಬಂದಿಯನ್ನು ಒದಗಿಸಬೇಕೆಂದು ಮನವಿ ಮಾಡಿದ್ದರು. ವಿಪಕ್ಷ ನಾಯಕರಿಗೆ ಸರ್ಕಾರ ಸೌಲಭ್ಯಗಳನ್ನು ಮಂಜೂರು ಮಾಡುವ ಜವಾಬ್ದಾರಿ ಸ್ಪೀಕರ್ ಅವರದ್ದಾಗಿರುತ್ತದೆ. ಆದರೆ, ಸಿದ್ದರಾಮಯ್ಯ ಪತ್ರ ಬರೆದು ತಿಂಗಳಾದರೂ ಇನ್ನೂ ಸರ್ಕಾರಿ, ಕಾರು, ಸಿಬ್ಬಂದಿಯನ್ನು ಮಂಜೂರು ಮಾಡದ ಸ್ಪೀಕರ್ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.

HD Kumaraswamy: ಜೆಡಿಎಸ್ ಸಭೆಯಲ್ಲಿ ಯುಟರ್ನ್ ತೆಗೆದುಕೊಂಡ ಎಚ್​ಡಿ ಕುಮಾರಸ್ವಾಮಿ; ಎಂಎಲ್​ಸಿಗಳ ಬಳಿ ಕ್ಷಮೆ

ಇತ್ತೀಚೆಗಷ್ಟೆ ಸ್ಪೀಕರ್ ಕಾಗೇರಿ ನಡೆಯ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದರು. ವಿಪಕ್ಷ ನಾಯಕರಾದ ತಮಗೆ ಸರ್ಕಾರಿ ಸವಲತ್ತು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಕಾನೂನಿನ ಪ್ರಕಾರ , ಸಂವಿಧಾನಿಕವಾಗಿ ವಿಪಕ್ಷ ನಾಯಕರಿಗೆ ನೀಡಬೇಕಾಗದ ಸವಲತ್ತು ನೀಡುವ ಹೊಣೆಯನ್ನು ಸ್ಪೀಕರ್ ಕಚೇರಿ ನಿರ್ವಹಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ತಲೆಕೆಡಿಸಿಕೊಳ್ಳದ ಕಾಗೇರಿ ನಡೆಯ ಬಗ್ಗೆ ಕಾಂಗ್ರೆಸ್ ನಾಯಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನದ ಒಳಗೆ ನಡೆಯುತ್ತಿದ್ದ ಸ್ಪೀಕರ್- ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಹೊರಗಡೆಯೂ ಮುಂದುವರೆದಿದೆ.

(ವರದಿ: ಚಿದಾನಂದ ಪಟೇಲ್)

First published: November 13, 2019, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading