HOME » NEWS » State » OPPOSITION LEADER S R PATIL SAYS UTTAR PRADESH IS NOT RAMA RAJYA ITS RAVANA RAJYA LG

ಉತ್ತರ ಪ್ರದೇಶ ರಾಮ ರಾಜ್ಯವಲ್ಲ, ರಾವಣ ರಾಜ್ಯ; ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿ

ದುಷ್ಟ, ಹೇಯ ಸರ್ಕಾರ, ಶೋಷಿತರ ವಿರುದ್ಧ ಇರುವ ಸರ್ಕಾರವನ್ನು ಕಿತ್ತು ಹಾಕಲು ಮೋದಿ ಹಿಂದೇಟು ಹಾಕುತ್ತಾರೆ. ಉತ್ತರ ಪ್ರದೇಶದಲ್ಲಿನ ಅತ್ಯಾಚಾರ ಘಟನೆಯ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಬಿಜೆಪಿ ಅತ್ಯಾಚಾರಿ ಸರ್ಕಾರ ಎಂದು ಪಾಟೀಲ್​ ಕಿಡಿಕಾರಿದರು.

news18-kannada
Updated:October 3, 2020, 2:54 PM IST
ಉತ್ತರ ಪ್ರದೇಶ ರಾಮ ರಾಜ್ಯವಲ್ಲ, ರಾವಣ ರಾಜ್ಯ; ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿ
ಎಸ್​.ಆರ್. ಪಾಟೀಲ್
  • Share this:
ಬಾಗಲಕೋಟೆ (ಅಕ್ಟೋಬರ್ 3): ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಇಲ್ಲ, ರಾವಣ ರಾಜ್ಯವಿದೆ. ಮಧ್ಯರಾತ್ರಿಯಲ್ಲಿ ಮಹಿಳೆ ಏಕಾಂಗಿಯಾಗಿ ಓಡಾಡಿದ್ರೆ ಅದು ನಿಜವಾದ ಸ್ವಾತಂತ್ರ್ಯ ಎಂದಿದ್ರು ಗಾಂಧೀಜಿ. ಆದರೀಗ ಹಾಡಹಗಲೇ ಅತ್ಯಾಚಾರ ಮಾಡಿ, ನಾಲಿಗೆ ಸೀಳಿ ಕೊಲೆ ಮಾಡ್ತಾರೆ ಅಂದ್ರೆ ಅದು ರಾವಣ ರಾಜ್ಯ. ರಾಮ ಮಂದಿರ ಕಟ್ಟಿ ರಾಮರಾಜ್ಯ ಬರುತ್ತೆ ಎಂದು ನಾವು ತಿಳಿದಿದ್ದೆವು. ಆದರೆ ರಾವಣ ರಾಜ್ಯ ತಂದಿದ್ದಾರೆ. ಯೋಗಿ ಆದಿತ್ಯನಾಥ್ ಕಾವಿಧಾರಿಯಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ತಕ್ಷಣವೇ ಬಂಧಿಸಿ, ಶಿಕ್ಷೆಗೊಳಿಪಡಿಸಬೇಕಾಗಿತ್ತು. ಅದರ ಬದಲಿಗೆ ಸಹಾಯ ಮಾಡಿದ್ದಾರಲ್ಲ, ಅವರು ತಪ್ಪಿತಸ್ಥರು, ಆರೋಪಿಗಳು ಅಂದ್ರೂ ತಪ್ಪಿಲ್ಲವೆಂದು ಬಾಗಲಕೋಟೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಯುವತಿಯ ಅತ್ಯಾಚಾರ, ಕೊಲೆ  ಪ್ರಕರಣ ಖಂಡಿಸಿ ಪ್ರತಿಭಟನೆ ಬಳಿಕ ಎಸ್ ಆರ್ ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವ್ರು ಬೇಟಿ ಬಾಚಾವೋ ಬೇಟಿ ಪೇಡಾವೋ ಎನ್ನುತ್ತಾರೆ. ಈಗ ಬೇಟಿ ರಕ್ಷಣೆ ಎಲ್ಲಿದೆ ಎನ್ನುವುದನ್ನು ಮೋದಿ ತಿಳಿದುಕೊಳ್ಳಬೇಕು. ದುಷ್ಟ, ಹೇಯ ಸರ್ಕಾರ, ಶೋಷಿತರ ವಿರುದ್ಧ ಇರುವ ಸರ್ಕಾರವನ್ನು ಕಿತ್ತು ಹಾಕಲು ಮೋದಿ ಹಿಂದೇಟು ಹಾಕುತ್ತಾರೆ. ಉತ್ತರ ಪ್ರದೇಶದಲ್ಲಿನ ಅತ್ಯಾಚಾರ ಘಟನೆಯ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಬಿಜೆಪಿ ಅತ್ಯಾಚಾರಿ ಸರ್ಕಾರ ಎಂದು ಪಾಟೀಲ್​ ಕಿಡಿಕಾರಿದರು.

ಇನ್ನು ಸರ್ಕಾರ ಬಹಳ ದಿನ ಇರುವುದಿಲ್ಲ ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ಅವರಿಗೆ ಹಾಗೆ ಅನಿಸಿರಬೇಕು. ಆನಂದ್ ಸಿಂಗ್ ಯಡಿಯೂರಪ್ಪ ಸರ್ಕಾರದ ಕ್ಯಾಬಿನೆಟ್ ಸಚಿವರು, ಅವರೇ ಹೇಳುತ್ತಿದ್ದಾರೆ. ವಿಪಕ್ಷದವರು ಹೇಳುತ್ತಿಲ್ಲ, ಆದರೆ ಮಂತ್ರಿ ಹೇಳುತ್ತಿದ್ದಾರೆ ಅಂದ್ರೆ ಅದರಲ್ಲಿ ಸತ್ಯಾಂಶವಿದೆ ಎನ್ನುವುದು ನನ್ನ ಭಾವನೆ ಎಂದು ಹೇಳಿದರು.

ಆರ್ ಆರ್ ನಗರ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಜನ ಗೆಲ್ಲಿಸಿದರೆ ಗೆಲ್ಲುತ್ತೇವೆ ಎಂದು ಸಿಎಂ ಯಡಿಯೂರಪ್ಪನವರ ಸವಾಲಿಗೆ ಎಸ್ ಆರ್ ಪಾಟೀಲ್ ತಿರುಗೇಟು ನೀಡಿದರು. ಪ್ರಜಾಪ್ರಭುತ್ವದಲ್ಲಿ ಜನ ಕೊಡುವ ತೀರ್ಮಾನಕ್ಕೆ ತಲೆಬಾಗಿ ‌ಸ್ವೀಕರಿಸುತ್ತೇವೆ. ಭ್ರಷ್ಟಾಚಾರ, ಕೆಟ್ಟ ಆಡಳಿತ ನೀಡಿದ್ದಾರೆ. ಬಹುತೇಕ ಕೇಡುಗಾಲ ಸಮೀಪಿಸಿದೆ. ಬೈ ಎಲೆಕ್ಷನ್​​ನಲ್ಲಿ ಜನ ನಮಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ. ಎರಡು ಕ್ಷೇತ್ರಗಳ ಮತದಾರರು ಪ್ರಬುದ್ಧರಿದ್ದಾರೆ. ದುರಾಡಳಿತಕ್ಕೆ ಕೊನೆ ಹಾಡುತ್ತಾರೆ. ಬೈ ಎಲೆಕ್ಷನ್​​ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ನಿರ್ಧಾರ ಹೈಕಮಾಂಡ್​​​​ಗೆ ಬಿಟ್ಟಿದ್ದು. ರಾಜ್ಯಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರವಲ್ಲ. ದೆಹಲಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ, ಆ ಪ್ರಕಾರ ನಡೆಯುತ್ತೇವೆ ಎಂದರು.

ಕೋವಿಡ್ ಆರ್ಥಿಕ ಸಂಕಷ್ಟ ಹಿನ್ನೆಲೆ; ಯಾದಗಿರಿಗೆ ಮಂಜೂರಾಗಿದ್ದ ವಿಜ್ಞಾನ ಕೇಂದ್ರ ಕೈಬಿಟ್ಟ ಸರ್ಕಾರ

ಆ್ಯಂಕರ್​​ ಅನುಶ್ರೀ ಕಾಲ್ ಡಿಟೇಲ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ನಂಬರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್ ಆರ್ ಪಾಟೀಲ್, ಮಾಜಿ ಮುಖ್ಯಮಂತ್ರಿ ಅವರ ಮಗ ಎಂದಿರುವುದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ತನಿಖೆ ಮಾಡಿದಾಗ ಯಾರು ಏನು ಅನ್ನೋದು ಗೊತ್ತಾಗುತ್ತದೆ. ಆರೋಪಿಗಳಿಗೆ ರಕ್ಷಣೆ ಕೊಡುವುದು ಒಳ್ಳೆಯದಲ್ಲ. ಅದು ಕೂಡಾ ಅಪರಾಧ. ಯಾರಿದ್ದಾರೆ? ಏನಿದೆ? ಎಂದು ನನಗೆ ಗೊತ್ತಿಲ್ಲ. ಅದು ಗಾಳಿಯಲ್ಲಿ ಗುಂಡು ಹಾರಿಸಿದಂಗಿತ್ತು. ಸರಿಯಾಗಿ ತನಿಖೆಯಾಗಲಿ, ಡ್ರಗ್ಸ್ ಮಾಫಿಯಾದಿಂದ ಇಡೀ ಯುವ ಶಕ್ತಿ ಹಾಳಾಗಿ ಹೋಗಿದೆ. ನಮ್ಮ ದೇಶ ಹೆಚ್ಚು ಯುವಕರನ್ನು ಹೊಂದಿದ ಯಂಗ್ ಇಂಡಿಯಾ. ಯುವಕರು ಡ್ರಗ್ಸ್ ಹಾವಳಿಯಿಂದ ಆರೋಗ್ಯ ಹಾಳಾಗುತ್ತಿದೆ. ಇದೊಂದು ಹೀನ ಕೆಲಸ, ಇವತ್ತೇ ನಡೆದಿದೆ ಎಂದು ನಾನು ಹೇಳುವುದಿಲ್ಲ ಯಾವಾಗಲೂ ನಡೆದಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ, ಯಾರ್ಯಾರು ತಪ್ಪಿತಸ್ಥರಿದ್ದಾರೆ ಬಯಲಿಗೆ ಬರುತ್ತಿದ್ದಾರೆ. ಫಿನ್​​ಲ್ಯಾಂಡ್ ನಲ್ಲಿ ಬಹಳವಿದೆ ಎನ್ನುವುದು ನಾನು ಕಂಡುಕೊಂಡಿದ್ದೇನೆ. ಯಾರೇ ಆಗಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ‌, ಸರಿಯಾಗಿ ತನಿಖೆಯಾಗಬೇಕು. ನಮ್ಮ ದೇಶ,ರಾಜ್ಯ ಡ್ರಗ್ಸ್ ನಿಂದ ಮುಕ್ತವಾಗಲಿ ಎಂದರು.

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ,ಕೊಲೆ ಖಂಡಿಸಿ ಪ್ರತಿಭಟನೆ ವೇಳೆ ಕೈ ಕಾರ್ಯಕರ್ತೆಯರು ಕಣ್ಣೀರುಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಬಾಗಲಕೋಟೆಯಲ್ಲಿ ಜಿಲ್ಲಾ  ಕಾಂಗ್ರೆಸ್ ಘಟಕ ಹಾಗೂ  ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡುವ ವೇಳೆ ಜಿಲ್ಲಾ ಕಾಂಗ್ರೆಸ್  ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಕಣ್ಣೀರು ಹಾಕಿದರು. ಯೋಗಿ ಆದಿತ್ಯನಾಥ್  ಅವರಿಗೆ ತಾಯಿ ಹೃದಯ ಇಲ್ಲವಲ್ಲ, ಮೋದಿಯವರೇ ನೀವು ಸದನದಲ್ಲಿ ಒಂದು ದಿನವಾದರೂ ಮಹಿಳೆಯರ ಬಗ್ಗೆ ಮಾತನಾಡಿದ್ದೀರಾ? ಮತ್ತೆ ಹೇಳ್ತೀರಾ ಬೇಟಿ ಬಾಚಾವೋ ಬೇಟಿ ಪಡಾವೋ ಅಂತ. ಇಲ್ಲಿ  ಬೇಟಿ ಬಚಾವ್ ಇಲ್ಲ, ಮತ್ತೆ ಯಾವಾಗ ಬೇಟಿ  ಪಡಾವೋ ಮಾಡ್ತೀರಾ. ನನಗೆ ದು:ಖ ಆಗುತ್ತೆ ಒಂದು ಹೆಣ್ಣಾಗಿ ಮಾತನಾಡೋಕೆ. ಆ ತಾಯಿ-ತಂದೆಗೆ ತನ್ನ ಮಗಳ ಹೆಣ ನೋಡೋಕೆ ಆಗಲಿಲ್ಲ ಎಂದು ರಕ್ಷಿತಾ ಈಟಿ ಹೇಳಿದಾಗ, ಕೆಲ  ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
Youtube Video

ಇನ್ನು ಸ್ಮೃತಿ ಇರಾನಿ ಎಲ್ಲಿದ್ದಾರೆ ಈಗ, ಎದೆ ಎದೆ ಬಡೆದುಕೊಂಡು ಬಳೆ ಒಡೆದುಕೊಂಡು ಸ್ಟ್ರೈಕ್ ಮಾಡ್ತಿದ್ದೀರಲ್ಲಾ. ಈಗ ಪಕ್ಷಾತೀತ ಬಿಡಿ, ಇವತ್ತು ಹೆಣ್ಣಿನ ಪ್ರಶ್ನೆ ಇದೆ. ಹೆಣ್ಣಾಗಿ ಮಾತನಾಡೋಕೆ ಬರೋಲ್ಲ ನಿಮಗೆ. ಈವರೆಗೆ ಸ್ಮೃತಿ ಇರಾನಿ ಮೃತ ಹೆಣ್ಣಿನ ಬಗ್ಗೆ ಟ್ವಿಟ್ ಮಾಡಿಲ್ಲವೆಂದು ರಕ್ಷಿತಾ ಈಟಿ  ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್,ಮಾಜಿ ಸಚಿವ ಎಚ್ ವೈ ಮೇಟಿ, ಮುಖಂಡರು ಭಾಗಿಯಾಗಿದ್ದರು.
Published by: Latha CG
First published: October 3, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories