ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯ್ಕೆ

news18
Updated:May 25, 2018, 2:00 PM IST
ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯ್ಕೆ
news18
Updated: May 25, 2018, 2:00 PM IST
 ನ್ಯೂಸ್ 18 ಕನ್ನಡ 

ಬೆಂಗಳೂರು ( ಮೇ. 25) :  ಮಾಜಿ ಮುಖ್ಯಮಂತ್ರಿ  ಹಾಗೂ  ಶಾಸಕ ಬಿ.ಎಸ್​.ಯಡಿಯೂರಪ್ಪ  ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾನ್ಯತೆ ನೀಡಲಾಗಿದೆ.  ನೂತನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಈ ಮಾನ್ಯತೆಯನ್ನು  ವಿಧಾನಸಭೆಯಲ್ಲಿ ಘೋಷಿಸಿದರು. 

ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್  ಪ್ರಕಟಿಸಿದರು.

ಇನ್ನೂ ಬಿಜೆಪಿಯ ಶಾಸಕಾಂಗ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಅವರಿಗೆ ವಿಧಾನಸಭೆಯ ವಿರೋಧ ಪಕ್ಷ ಉಪನಾಯಕ ಮಾನ್ಯತೆ ನೀಡಲಾಗಿದೆ.

 
First published:May 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...