ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ

ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡೋದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲಿನ ಸೋದರತೆ ಹಾಳು ಮಾಡುವ ಉದ್ದೇಶದಿಂದ ಹೋಗಿದ್ದಾರೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಣ ಮಾಡುವ ಅಗತ್ಯತೆ ಏನಿತ್ತು? ಅವರು ದಕ್ಷಿಣ ಕನ್ನಡ ಜಿಲ್ಲೆಯವರ ನೆಮ್ಮದಿ ಹಾಳು ಮಾಡಿದವರು ಎಂದು ಆಕ್ರೋಶ ವ್ಯಕ್ತಪಡಿಸಿದರು

G Hareeshkumar | news18-kannada
Updated:January 13, 2020, 6:11 PM IST
ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ
ಯು.ಟಿ ಖಾದರ್ - ಕಲ್ಲಡ್ಕ ಪ್ರಭಾಕರ್​ ಭಟ್
  • Share this:
ಮಂಗಳೂರು(ಜ.13): ಏಸು ಪ್ರತಿಮೆ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕನಕಪುರದಲ್ಲಿ ಚಲೋ ಹಮ್ಮಿಕೊಂಡಿರುವುದು ಅವರ ಸಣ್ಣ ಮನಸ್ಸನ್ನು ತೋರಿಸುತ್ತದೆ. ದೇವರ ಪ್ರತಿಮೆ ಮಾಡಲು ಅಡ್ಡಿ ಮಾಡುವ ಇವರ ಮನೋಭಾವಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಬೇಸರ ಮಾಡಿಕೊಂಡಿದ್ದಾರೆ.

ಶಾಂತಿ ಸಂದೇಶ ಸಾರಲು ಕನಕಪುರ ತಾಲೂಕಿನ ಹಾರೋಹಳ್ಳಿಯ ಕಪಾಲಿಬೆಟ್ದಲ್ಲಿ ಏಸು ಪ್ರತಿಮೆ ನಿರ್ಮಿಸಲಾಗುತ್ತಿದೆ. ಕ್ರೈಸ್ತ ಸಮುದಾಯವರ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಸಮಾಜಕ್ಕೆ ಪೂರಕವಾಗಿದೆ. ಕ್ರೈಸ್ತ ಸಮುದಾಯವರು ಯಾವುದನ್ನೂ ಮಿಸ್ ಯೂಸ್ ಮಾಡೋದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡೋದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲಿನ ಸೋದರತೆ ಹಾಳು ಮಾಡುವ ಉದ್ದೇಶದಿಂದ ಹೋಗಿದ್ದಾರೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಣ ಮಾಡುವ ಅಗತ್ಯತೆ ಏನಿತ್ತು? ಅವರು ದಕ್ಷಿಣ ಕನ್ನಡ ಜಿಲ್ಲೆಯವರ ನೆಮ್ಮದಿ ಹಾಳು ಮಾಡಿದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಎ, ಎನ್.ಆರ್.ಸಿ. ವಿಷಯದಲ್ಲಿ ಕಾಂಗ್ರೆಸ್ ನಿಂದ ಹಾದಿ ತಪ್ಪಿಸೋ ಕೆಲಸ ; ಪ್ರಹ್ಲಾದ್​ ಜೋಶಿ ಕಿಡಿ

ಕನಕಪುರ ಹಾಗೂ ಬೆಂಗಳೂರಿನವರಾದರೂ ಶಾಂತಿಯಿಂದ ನೆಮ್ಮದಿಯಿಂದ ಇರಲಿ. ಇಲ್ಲಿ ನಾವು ನರಕ ಅನುಭವಿಸುತ್ತಿರೋದೇ ಸಾಕು  ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಮಾಜಿ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದರು.

ಕನಕಪುರದ ಕಪಾಲ ಬೆಟ್ಟದಲ್ಲಿ ಬೃಹತ್ ಏಸು ಶಿಲೆಯನ್ನು ನಿರ್ಮಿಸಲು ಡಿಕೆ ಶಿವಕುಮಾರ್ ಉದ್ದೇಶಿಸಿದ್ದಾರೆ. ಇದರ ವಿರುದ್ಧ ಬಲಪಂಥೀ ಸಂಘಟನೆಗಳಿಂದ ಉಗ್ರ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಕನಕಪುರದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಏಸು ಶಿಲೆ ನಿರ್ಮಾಣವನ್ನು ಬಲವಾಗಿ ವಿರೋಧಿಸಿದರು. ಡಿಕೆ ಶಿವಕುಮಾರ್ ಅವರು ಹಿಂದೂ ಸಮುದಾಯವನ್ನು ನಾಶ ಮಾಡಲು ಹೊರಟಿದ್ದಾರೆ. ಇವರು ಉದ್ಧಾರವಾಗಲ್ಲ ಎಂದು ಕಲ್ಲಡ್ಕ ತರಾಟೆಗೆ ತೆಗೆದುಕೊಂಡಿದ್ದರು.
Published by: G Hareeshkumar
First published: January 13, 2020, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading