ಮೊಟ್ಟೆ ವಿಚಾರಕ್ಕೆ ಶಾಲೆ ಬದಲಿಸಿದ ಲಿಂಗಾಯತ್ ಮಹಾಸಭಾ ಅಧ್ಯಕ್ಷ

Eggs in the school: ಒಂದೇ ಶಾಲೆಯಲ್ಲಿ ಕೆಲವರಿಗೆ ಮೊಟ್ಟೆ, ಕೆಲವರಿಗೆ ಹಣ್ಣು ಕೊಡುವುದರಿಂದ ಮಕ್ಕಳಲ್ಲಿ ತಾರತಮ್ಯತೆ ಬರುತ್ತದೆ. ತನ್ನ ಮಗನಿಗೆ ಇಷ್ಟವಾಗುತ್ತಿಲ್ಲ ಎಂದು ಪೋಷಕರೊಬ್ಬರು ತಮ್ಮ ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ್ದಾರೆ.

ವೀರಣ್ಣ ಕೋರ್ಲಹಳ್ಳಿ ಮತ್ತವರ ಮಗ

ವೀರಣ್ಣ ಕೋರ್ಲಹಳ್ಳಿ ಮತ್ತವರ ಮಗ

  • Share this:
ಕೊಪ್ಪಳ: ರಾಜ್ಯದಲ್ಲಿ ಈಗ ಶಾಲೆಗಳಲ್ಲಿ ಮೊಟ್ಟೆ (Eggs for school children) ನೀಡುವ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದೆ, ಈ ಕುರಿತು ಪರ ವಿರೋಧ ಹೋರಾಟ ನಡೆಯುತ್ತಿದೆ, ಈ ಮಧ್ಯೆ ಒಂದು ಹೆಜ್ಜೆ ಮುಂದೆ ಹೋಗಿ ಅಖಿಲ ಭಾರತ ಲಿಂಗಾಯತ್ ಮಹಾಸಭಾದ ಅಧ್ಯಕ್ಷ ವೀರಣ್ಣ ಕೋರ್ಲಹಳ್ಳಿ (All India Lingayat Mahasabha state president Veeranna Korlahalli) ಎಂಬುವವರು ಸರಕಾರಿ ಶಾಲೆಯಲ್ಲಿದ್ದ ತಮ್ಮ ಮಗನನ್ನು ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡಲಾಗುತ್ತಿದ್ದುದರಿಂದ ಶಾಲೆಯಿಂದ ಟಿಸಿ ಪಡೆದಿದ್ದಾರೆ.

ತೀವ್ರ ಅಪೌಷ್ಠಿಕತೆ (Malnutrition) ಏದುರಿಸುತ್ತಿರುವ ಕಲ್ಯಾಣ ಕರ್ನಾಟಕ (Hyderabad Karnataka) ಹಾಗು ವಿಜಯಪುರ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಹಾಗು ಬಾಳೆ ಹಣ್ಣು ನೀಡುವ ಯೋಜನೆ ಆರಂಭಿಸಲಾಗಿದೆ. ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆ, ಮೊಟ್ಟೆ ಬೇಡ ಎನ್ನುವ ಮಕ್ಕಳಿಗೆ ಬಾಳೆ ಹಣ್ಣನ್ನು ವಾರದಲ್ಲಿ ಮೂರು ದಿನ ನೀಡಲಾಗುತ್ತಿದೆ. ಡಿಸೆಂಬರ್ ಒಂದರಿಂದ ಈ ಯೋಜನೆ ಆರಂಭವಾಗಿದೆ.

ಶಾಲೆಯಲ್ಲಿ ಮೊಟ್ಟೆ ನೀಡುವ ಕುರಿತು ಪರ ವಿರೋಧ ಹೋರಾಟ ನಡೆಯುತ್ತಿದೆ. ಈ ಮಧ್ಯೆ ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಬಸವ ಧರ್ಮಪೀಠ ಹಾಗು ಲಿಂಗಾಯತ್ ಮಹಾಸಭಾ ಸಂಘಟನೆ, ಯಾವುದೇ ಕಾರಣಕ್ಕೂ ಶಾಲೆಯಲ್ಲಿ ಮೊಟ್ಟೆ ನೀಡಬಾರದು. ಶಾಲೆಯಲ್ಲಿ ಮೊಟ್ಟೆ ಹಾಗು ಬಾಳೆ ಹಣ್ಣು ನೀಡುವುದರಿಂದ ಮಕ್ಕಳಲ್ಲಿ ತಾರತಮ್ಯ ಮಾಡಿದಂತಾಗಿದೆ. ಬಸವಣ್ಣನವರು ಸಹ ಮೊಟ್ಟೆ ಸೇರಿದಂತೆ ಮಾಂಸಾಹಾರ ತಿನ್ನದಂತೆ ಹೇಳಿದ್ದಾರೆ. ಈ ಕಾರಣಕ್ಕಾಗಿ ಮೊಟ್ಟೆ ಬೇಡ ಎಂದೆನ್ನುತ್ತಿದೆ.

ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರ ಮಗನ ಶಾಲೆ ಬದಲು:

ಇದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿರುವ ಅಖಿಲ ಭಾರತ ಲಿಂಗಾಯತ್ ಮಹಾಸಭಾದ ರಾಜ್ಯಾಧ್ಯಕ್ಷ ಕೊಪ್ಪಳದವರಾಗಿರುವ ವೀರಣ್ಣ ಕೋರ್ಲಹಳ್ಳಿಯವರು, ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ತಮ್ಮ ಮಗನನ್ನು ಸರಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲವೆಂದ ಪ್ರೇಮ್ - ಕಾನೂನು ಸುವ್ಯವಸ್ಥೆ ಹಾಳು ಮಾಡೋರಿಗೆ ಸಿಎಂ ಎಚ್ಚರಿಕೆ

ಮೊಟ್ಟೆಯಿಂದ ಮಾತ್ರವೇ ಅಪೌಷ್ಟಿಕತೆ ನಿವಾರಣೆ ಆಗಲ್ಲ:

ಕೊಪ್ಪಳದ ರೈಲು ನಿಲ್ದಾಣದ ಬಳಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆಯ ತರಗತಿಗೆ ಜೂನ್ 24 ರಂದು ದಾಖಲು ಮಾಡಿದ್ದರು. ಕನ್ನಡ ಅಭಿಮಾನಕ್ಕಾಗಿ ಸರಕಾರಿ ಶಾಲೆಗೆ ಸೇರಿಸಿದ್ದರು. ಈ ಸಂದರ್ಭದಲ್ಲಿ ಸರಕಾರ ನೀಡುವ ಸೌಲಭ್ಯಗಳ ಬಗ್ಗೆ ಸಾಕಷ್ಟು ಹೆಮ್ಮೆ ಪಡುತ್ತಿದ್ದರು. ಆದರೆ ಈಗ ಅಪೌಷ್ಠಿಕತೆ ನೆಪದಲ್ಲಿ ಮೊಟ್ಟೆ ನೀಡುತ್ತಿದ್ದಾರೆ. ಮೊಟ್ಟೆಯೊಂದರಿಂದಲೇ ಅಪೌಷ್ಠಿಕತೆ ನಿವಾರಣೆಯಾಗುವುದಿಲ್ಲ. ಹಣ್ಣು, ಕಾಳುಗಳಿಂದ ಅಪೌಷ್ಠಿಕತೆ ನಿವಾರಣೆಯಾಗುತ್ತದೆ. ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ತಮ್ಮ ಮಗ ಹೇಳಿ ಶಾಲೆಗೆ ಹೋಗುವುದಿಲ್ಲ ಎಂದ, ಈ ಕಾರಣಕ್ಕಾಗಿ ನನ್ನ ಮಗ ಟಿಸಿ ಶಾಲೆಯಿಂದ ತೆಗೆದು ಬೇರೆ ಶಾಲೆಗೆ ಸೇರಿಸಿದ್ದೇನೆ ಎಂದು ವೀರಣ್ಣ ಕೋರ್ಲಹಳ್ಳಿ ಅವರು ಹೇಳಿದ್ದಾರೆ.

ಸಮಾನತೆ ಇರಲ್ಲ:

ಮೊಟ್ಟೆ ತಿನ್ನುವವರಿಗೆ ನಮ್ಮ ವಿರೋಧವಿಲ್ಲ. ಆದರೆ ಶಾಲೆಯಲ್ಲಿ ಸಮಾನತೆಯ ಕಾರಣಕ್ಕಾಗಿ ಶಾಲೆಯಲ್ಲಿ ಮೊಟ್ಟೆ ಬೇಡ. ಅವರಿಗೆ ಮನೆಗೆ ಮೊಟ್ಟೆ ನೀಡಿ ಎಂದು ಅವರು ಸಲಹೆ ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಆಕ್ರೋಶ ತಣಿಸಲು ಪೊಲೀಸರಿಂದಲೇ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ - ನಾಳೆ ಸುವರ್ಣ ಸೌಧ ಮುತ್ತಿಗೆ

ಮೊಟ್ಟೆ ಕಡ್ಡಾಯ ವಿರೋಧಿಸುವವರಿಂದ ಪ್ರತಿಭಟನೆ:

ಈ ಮಧ್ಯೆ ನಾಳೆ ಮೊಟ್ಟೆ ವಿರೋಧಿಸುವ ರಾಜ್ಯದ ವಿವಿಧ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಸವ ಧರ್ಮ ಪೀಠ, ಜೈನ, ಬ್ರಾಹ್ಮಣ ಸಮಾಜ, ಲಿಂಗಾಯತ್ ಮಹಾಸಭಾ, ಮೊಟ್ಟೆ ವಿರೋಧಿಸುವ ಮಠಾಧೀಶರು ಸೋಮವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುವವರು. ಮೊಟ್ಟೆಯನ್ನು ಶಾಲೆಯಲ್ಲಿ ನೀಡುವುದನ್ನು ನಿಲ್ಲಿಸಲು ಆಗ್ರಹಿಸಲಾಗುವುದು ಎಂದು ಅಖಲ ಭಾರತ ಲಿಂಗಾಯತ್ ಮಹಾಸಭಾದ ಅಧ್ಯಕ್ಷ ವೀರಣ್ಣ ಕೋರ್ಲಹಳ್ಳಿ ತಿಳಿಸಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: