• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!

Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಸಮೀಕ್ಷೆಯಲ್ಲಿ ಬಿಜೆಪಿ 103 ರಿಂದ 115 ಸ್ಥಾನಗಳನ್ನು ಪಡೆದು 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸೋಮವಾರ ಬಿಡುಗಡೆಯಾದ ಝೀ ನ್ಯೂಸ್-ಮ್ಯಾಟ್ರಿಜ್ ಕರ್ನಾಟಕ ಚುನಾವಣಾ ಅಭಿಪ್ರಾಯ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಹಿರಂಗಪಡಿಸಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಜನತಾ ದಳದ ಪಾಲಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ 2023, ಮೇ 10 ರಂದು ನಡೆಯಲಿದ್ದು, 13 ರಂದು ಫಲಿತಾಂಶ ಹೊರ ಬೀಳಲಿದೆ. ಹೀಗಿರುವಾಗ ಸಮೀಕ್ಷೆಯಲ್ಲಿ ಬಿಜೆಪಿ 103 ರಿಂದ 115 ಸ್ಥಾನಗಳನ್ನು ಪಡೆದು 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿಯಲಾಗಿದೆ.


ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ 79 ರಿಂದ 91 ಸ್ಥಾನಗಳನ್ನು ಗೆದ್ದರೆ JD(S) 26 ರಿಂದ 36 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗಿದೆ. ಇತರರು 1-3 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 80 ಸ್ಥಾನಗಳನ್ನು ಗಳಿಸಿತ್ತು. ಅತ್ತ ಜೆಡಿಎಸ್ (ಎಸ್) 37 ಸ್ಥಾನಗಳಲ್ಲಿ ಜಯಗಳಿಸಿತ್ತು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ:  Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!


ಶೇಕಡಾವಾರು ಮತಗಳಿಗೆ ಸಂಬಂಧಿಸಿದಂತೆ, ಈ ಒಪೀನಿಯ್​ ಪೋಲ್​ನಲ್ಲಿ ಬಿಜೆಪಿಗೆ 42 ಶೇಕಡಾ, ಕಾಂಗ್ರೆಸ್ 40 ಶೇಕಡಾ, JD(S) ಶೇಕಡಾ 15 ಮತ್ತು ಇತರರು ಶೇಕಡಾ 3 ರಷ್ಟು ಮತಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದು, ಶೇ.66ರಷ್ಟು ಮಂದಿ ಕೇಸರಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 16 ರಷ್ಟು ಲಿಂಗಾಯತರು ಕಾಂಗ್ರೆಸ್‌ಗೆ, ಶೇಕಡಾ 8 ರಷ್ಟು ಜೆಡಿ (ಎಸ್) ಮತ್ತು ಶೇಕಡಾ 10 ರಷ್ಟು ಇತರರಿಗೆ ಮತ ಹಾಕುತ್ತಾರೆ.


top videos



    ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದಂತೆ ಶೇ 52ರಷ್ಟು ಜನ ಜೆಡಿಎಸ್‌ಗೆ, ಶೇ 28ರಷ್ಟು ಮಂದಿ ಕಾಂಗ್ರೆಸ್‌ಗೆ, ಶೇ 4ರಷ್ಟು ಮಂದಿ ಇತರರಿಗೆ ಮತ ಹಾಕಲಿದ್ದಾರೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

    First published: