Leopard: ಚಿರತೆ ಕಾರ್ಯಾಚರಣೆ ವಿಫಲ; ಜನರ ಭಯ ದೂರ ಮಾಡಲು ಅರಣ್ಯ ಇಲಾಖೆ ಪ್ರಯತ್ನ

ಬೆಳಗಾವಿಯ ಗಾಲ್ಫ್ ಕ್ಲಬ್​​ನಲ್ಲಿದ್ದ ಚಿರತೆ ಮತ್ತೆ ಕಾಡಿಗೆ ಹೋಗಿದೆ ಎನ್ನುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೇ ಜನರ ಭಯ ದೂರ ಮಾಡಲು, ಗಾಲ್ಫ್ ಕ್ಲಬ್​​ನಲ್ಲಿ 22 ಟ್ರ್ಯಾಕ್ ಕ್ಯಾಮೆರಾ, 9 ಬೋನ್ ಇಡಲು ನಿರ್ಧರಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಳಗಾವಿಯಲ್ಲಿ (Belagavi) ಕಳೆದ ಒಂದು ತಿಂಗಳಿಂದ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ (Leopard) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಗಾಲ್ಪ್ ಕ್ಲಬ್​​ನಲ್ಲಿ ಚಿರತೆ ಇಲ್ಲ, ಅಲ್ಲಿಂದ ಬೇರೆಡೆ ಹೋಗಿದೆ. ಜನ ಭಯಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಇಂದಿನಿಂದ ಶಾಲೆಗಳು (Schools) ಎಂದಿನಂತೆ ಆರಂಭಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆದರೇ ಇನ್ನೂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ. ಬೆಳಗಾವಿಯಲ್ಲಿ ಚಿರತೆಯೊಂದು ಅರಣ್ಯ ಅಧಿಕಾರಿಗಳಿಗೆ (Forest Department) ಚಳ್ಳೆ ಹಣ್ಣು ತಿನಿಸಿದ್ರೆ, ಜನರಲ್ಲಿ ಭಯ ಹುಟ್ಟಿಸಿತ್ತು. ಕಳೆದ ಒಂದು ತಿಂಗಳಿಂದ ನಗರದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಆಗಸ್ಟ್ 5ರಂದು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನೊಬ್ಬನ (Building Worker) ಮೇಲೆ ದಾಳಿ ಮಾಡಿದ ಚಿರತೆ  ಬಳಿಕ ಅಲ್ಲಿಂದ ಗಾಲ್ಫ್ ಕ್ಲಬ್ ಸೇರಿಕೊಂಡಿತ್ತು. ಬಳಿಕ ಅರಣ್ಯಾಧಿಕಾರಿಗಳು ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರೂ ಚಾಲಾಕಿ ಚಿರತೆ ಪತ್ತೆ ಆಗಿರಲಿಲ್ಲ.

ಆಗಸ್ಟ್ 22ರಂದು ಕ್ಲಬ್ ರಸ್ತೆಯಲ್ಲಿ ಚಿರತೆ ಪತ್ತೆಯಾಗಿತ್ತು, ಬಳಿಕ ಅದು ಅರಣ್ಯಾಧಿಕಾರಿಗಳ ಕಣ್ಣು ತಪ್ಪಿಸಿ ಗಾಲ್ಫ್ ಕ್ಲಬ್ ಸೇರಿಕೊಂಡಿತ್ತು. ಅರಣ್ಯ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಸಕ್ರೆಬೈಲ್​​ನಿಂದ 2 ಆನೆಗಳನ್ನು ತಂದು 10 ಜನ ಶಾರ್ಫ್​ ಶೂಟರ್ ಜತೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಯಿತು.

9 ದಿನಗಳಿಂದ ಪತ್ತೆಯಾಗದ ಚಿರತೆ

ಎರಡು, ಮೂರು ಸಲ ಕೂದಲಳೇ ಅಂತರಲ್ಲಿ ಚಿರತೆ ಪ್ರತ್ಯಕ್ಷವಾಗಿ ಮಾಯವಾಗಿತ್ತು. ಕಳೆದ 9 ದಿನಗಳಿಂದ ಚಿರತೆ ಚಲನವಲನ, ಹೆಜ್ಜೆ ಗುರುತು ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಹೀಗಾಗಿ ಚಿರತೆ ಗಾಲ್ಫ್ ಕ್ಲಬ್​​ನಲ್ಲಿ ಇಲ್ಲ ಎನ್ನುವ ನಿರ್ಧಾರಕ್ಕೆ ಅರಣ್ಯಾಧಿಕಾರಿಗಳು ಬಂದಿದ್ದಾರೆ.

ಇದನ್ನೂ ಓದಿ:  Hubballi: ಗಣಪನ ಎದುರು ನಮಾಜ್! ಗಂಡು ಮೆಟ್ಟಿದ ನಾಡಿನಲ್ಲೊಂದು ಸಾಮರಸ್ಯ ಸಂದೇಶ

ಭಾನುವಾರ ಬೆಳಗ್ಗೆ 300 ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚಾರಣೆ ನಡೆಸಿದ್ರು. ಗಾಲ್ಫ್ ಕ್ಲಬ್​​ನಲ್ಲಿ ಕೊಂಬಿಂಗ್ ನಡೆಸಿದರೂ ಚಿರತೆಯ ಯಾವುದೇ ಕುರುಹು ಪತ್ತೆಯಾಗಿಲ್ಲ. ಇನ್ನೂ ಎರಡು ದಿನಗಳ ಹಿಂದೆ ಅಂಬೇವಾಡಿ ಗ್ರಾಮದ ಬಳಿ ಚಿರತೆಯೊಂದು ಪ್ರತ್ಯಕ್ಷಗೊಂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Operation leopard failed in belagavi csb mrq
ಚಿರತೆ ಸೆರೆ ಹಿಡಿಯಲು ಆನೆಗಳಿಂದ ಆಪರೇಷನ್


ಗಾಲ್ಫ್​​ಕ್ಲಬ್​​ನಲ್ಲಿ 22 ಟ್ರ್ಯಾಕ್ ಕ್ಯಾಮೆರಾ, 9 ಬೋನ್

ಬೆಳಗಾವಿಯ ಗಾಲ್ಫ್ ಕ್ಲಬ್​​ನಲ್ಲಿದ್ದ ಚಿರತೆ ಮತ್ತೆ ಕಾಡಿಗೆ ಹೋಗಿದೆ ಎನ್ನುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೇ ಜನರ ಭಯ ದೂರ ಮಾಡಲು, ಗಾಲ್ಫ್ ಕ್ಲಬ್​​ನಲ್ಲಿ 22 ಟ್ರ್ಯಾಕ್ ಕ್ಯಾಮೆರಾ, 9 ಬೋನ್ ಇಡಲು ನಿರ್ಧರಿಸಲಾಗಿದೆ. ಇನ್ನೂ ಚಿರತೆ ಕಾರ್ಯಾಚರಣೆ ಆಗಿರೋ ಖರ್ಚು ವೆಚ್ಚ ಮಾಹಿತಿಯನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು ಎಂದು ಡಿಎಫ್ಓ ಹೇಳಿದ್ದಾರೆ. ಜೊತೆಗೆ ಆನೆ ವಾಪಸ್ ಕಳುಹಿಸುವ ಬಗ್ಗೆ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:  Murugha Shri Case: 37 ವಿದ್ಯಾರ್ಥಿಗಳನ್ನು ವಸತಿ ಶಾಲೆಗಳಿಗೆ ಸ್ಥಳಾಂತರ

ಶಾಲೆ ಆರಂಭ ಸಾಧ್ಯತೆ

ಗಾಲ್ಫ್ ಕ್ಲಬ್​​ನಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ನಗರದ 22 ಶಾಲೆಗಳಿಗೆ ಸತತವಾಗಿ ರಜೆ ನೀಡಲಾಗಿತ್ತು. ಆಗಸ್ಟ್​ 8 ರಿಂದ 15 ಹಾಗೂ ಆಗಸ್ಟ್​ 18ರಂದು ಇಲ್ಲಿಯವರೆಗೆ ರಜೆ ಮುಂದುವರೆಸಲಾಗಿದೆ. ಇನ್ನೂ ಇಂದಿನಿಂದ ಶಾಲೆಗಳು ಆರಂಭಿಸುವ ಬಗ್ಗೆ ಇನ್ನೂ ಜಿಲ್ಲಾಡಳಿತ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Operation leopard failed in belagavi csb mrq
ಬೋನ್ ಇರಿಸಿರೋದು


ಉಕ್ಕಡಗಾತ್ರಿಯಲ್ಲಿ ಅಕ್ಕ-ತಂಗಿ ನೀರುಪಾಲು!

ಹರಿಹರ ತಾಲೂಕಿನ ಉಕ್ಕಡಗಾತ್ರಿ ತೀರ್ಥಕ್ಷೇತ್ರಕ್ಕೆ ಹೋಗಿದ್ದ ಅಕ್ಕತಂಗಿಯರು ನೀರುಪಾಲಾದ ಘಟನೆ ನಡೆದಿದೆ. ನೀರಿನಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಹುಚ್ಚವನಹಳ್ಳಿ ಗ್ರಾಮದ ರಾಧಮ್ಮ ಮಕ್ಕಳಾದ ವಿ ಚೈತ್ರ (19 ವರ್ಷ) ವಿ ಪುಷ್ಪಾವತಿ (16) ಸಾವನ್ನಪ್ಪಿದವರು.

ಹೊಳೆಯಲ್ಲಿ ಸ್ನಾನ ಮಾಡಲು ನೀರಿನಲ್ಲಿ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚೈತ್ರಾ ಎಂಬಾಕೆ ವಿಕಲಚೇತನರಾಗಿದ್ದರು. ಉಕ್ಕಡಗಾತ್ರಿ ಉಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published by:Mahmadrafik K
First published: