News18 India World Cup 2019

ಆಪರೇಷನ್ ಕಮಲಕ್ಕೆ ಕೈ ಹಾಕಿದ್ರೆ ನಿಮ್ಮ ವಿಕೆಟ್​ಗಳೇ ಪತನ - ದಿನೇಶ್ ಗುಂಡೂರಾವ್ ಎಚ್ಚರಿಕೆ

news18
Updated:September 12, 2018, 5:25 PM IST
ಆಪರೇಷನ್ ಕಮಲಕ್ಕೆ ಕೈ ಹಾಕಿದ್ರೆ ನಿಮ್ಮ ವಿಕೆಟ್​ಗಳೇ ಪತನ - ದಿನೇಶ್ ಗುಂಡೂರಾವ್ ಎಚ್ಚರಿಕೆ
news18
Updated: September 12, 2018, 5:25 PM IST
- ಚಿದಾನಂದ ಪಟೇಲ್, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.12)  : ‘ಆಪರೇಷನ್ ಕಮಲದಂತಹ ಅತ್ಯಂತ ಕೆಟ್ಟ ಮತ್ತು ಪ್ರಜಾಸತ್ತಾತ್ಮಕ ವಿರೋಧಿ ಕಾರ್ಯಕ್ಕೆ ಕೈಹಾಕಿದರೆ, ನಿಮ್ಮ ವಿಕೆಟ್ ಗಳ ಪತನವಾದೀತು ಜೋಕೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, “ರಾಜ್ಯ ರಾಜಕಾರಣದಲ್ಲಿ ಬೆಂಕಿಯಿಲ್ಲದೆಯೂ ಹೊಗೆ ಆಡುತ್ತಿದೆ! ಪಕ್ಷ ಬಿಡುವುದಾಗಿ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಹೇಳಿಲ್ಲ. ಆದರೂ ಕೆಲವು ಮಾಧ್ಯಮಗಳು ಕೆಲವು ಶಾಸಕರು ಪಕ್ಷ ಬಿಡುತ್ತಿದ್ದಾರೆ, ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ಧಾರೆ. ಇದರ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದರು.

ಶಾಸಕರಾದ ಆನಂದ್ ಸಿಂಗ್, ಅಮರೇಗೌಡ ಬಯ್ಯಾಪುರ,  ಸಿ.ಎಸ್​.ಶಿವಳ್ಳಿ, ಎಂಟಿಬಿ ನಾಗರಾಜ್, ಬಸವನಗೌಡ, ಪ್ರತಾಪ್ ಗೌಡ, ಬಿಸಿ ಪಾಟೀಲ್ ಸೇರಿದಂತೆ ಹಲವು ಶಾಸಕರೂ ನಮ್ಮೊಂದಿಗಿದ್ದಾರೆ. ಯಾರೂ ಪಕ್ಷ ಬಿಡುವ ಅಪಸ್ವರ ತೆಗೆದಿಲ್ಲ. ಪಕ್ಷವನ್ನೂ ಬಿಡುತ್ತಿಲ್ಲ” ಎಂದು ಮಾಹಿತಿ ನೀಡಿದರು.

ನಮ್ಮ ಜತೆ ಬಿಜೆಪಿ 5 ಶಾಸಕರು ಬರಲು ಉತ್ಸುಕತೆ ತೋರಿದ್ದಾರೆ. ನಾವು  ಬಿಜೆಪಿ ಮಾಡಿದ ಹಾಗೆ ಮಾಡಲು ಇಷ್ಟವಿಲ್ಲ.  ಬಿಜೆಪಿಯವರು ಅಧಿಕಾರ ದಾಹದಿಂದ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರ, ಕೆಲವೆಡೆ ಮಳೆಯಿಂದಾದ ಅನಾಹುತ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವದನ್ನು ಬಿಟ್ಟು ರಾಜಕೀಯ ಮಾಡುವುದನ್ನು ಮೊದಲು ಬಿಡಿ  ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷರು ಹೇಳಿದರು.

 
Loading...

 
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...