Operation Elephant: ಪುಂಡಾನೆಗಳನ್ನು ಖೆಡ್ಡಕ್ಕೆ ಕೆಡವಿದ ಸಕ್ರೆಬೈಲು ಆನೆಗಳು! ಭೀಮಾರ್ಜುನ ನೇತೃತ್ವದಲ್ಲಿ ‘ಆಪರೇಷನ್‘ ಸಕ್ಸಸ್

ಅರಣ್ಯಾಧಿಕಾರಿಗಳು ಹಾಗೂ ರೈತರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ ಹಿಡಿಯುವಲ್ಲಿ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಬೆಳೆಗಳನ್ನ ಉಳಿಸಿಕೊಳ್ಳಲು ಹರಸಾಹಸಪಡ್ತಿದ್ದ ರೈತರು ಇನ್ನಾದ್ರು ನೆಮ್ಮದಿಯಾಗಿ ಕೃಷಿ ಮಾಡಬಹುದು ಅಂತ ಸಂತಸಗೊಂಡಿದ್ದಾರೆ.

ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ

ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ

  • Share this:
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikkamagaluru) ಅಂದ್ರೆ ಕಾಡಾನೆಗಳ (Elephant) ಹಾವಳಿ ಇರುವ ಊರು ಎನ್ನುವಂತಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ (Attack) ಮಾಡುತ್ತಲೇ ಇರುತ್ತವೆ. ಜಿಲ್ಲೆಯ ಜನರ ಪ್ರಮುಖ ಬೆಳೆಯಾದ ಕಾಫಿ (Coffee) ಸೇರಿದಂತೆ ಅನೇಕ ಬೆಳೆಗಳನ್ನು (crops) ನಾಶ (Destroy) ಮಾಡುತ್ತವೆ. ಆಹಾರ (Food) ಅರಸಿ ನಾಡಿಗೆ ನುಗ್ಗುವ ಕಾಡಾನೆಗಳು ಅದೆಷ್ಟೋ ಬಾರಿ ಪ್ರಾಣ ಹಾನಿ ಮಾಡಿದ್ದೂ ಇದೆ. ಹೀಗೆ ಜಿಲ್ಲೆ ಜನರು, ಅರಣ್ಯಾಧಿಕಾರಿಗಳು ಹಾಗೂ ರೈತರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ ಹಿಡಿಯುವಲ್ಲಿ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ರೈತರನ್ನು ಕಂಗೆಡಿಸಿದ್ದ ಕಾಡಾನೆಗಳು

ಕಾಡಾನೆಗಳು ಕಳೆದು ಎರಡ್ಮೂರು ತಿಂಗಳಿಂದ ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಸಿಕ್ಕಾಪಟ್ಟೆ ತೊಂದರೆ ಕೊಟ್ಟಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ರೈತ್ರು ಕಣ್ಮುಚ್ಚಿ ನಿದ್ದೆ ಮಾಡಂಗಿಲ್ಲ. ಹೊಲಗದ್ದೆಗಳಿಗೆ ಹೋಗಂಗಿಲ್ಲ. ಸ್ಥಳಿಯರು-ಅರಣ್ಯ ಇಲಾಖೆ ಎಷ್ಟೆ ಹರಸಾಹಸಪಟ್ರು ಒಂದ್ ದಿನ ಕಣ್ಮರೆಯಾಗೋದು ಮರುದಿನ ಅದೇ ಜಾಗದಲ್ಲಿ ಪ್ರತ್ಯಕ್ಷ ಆಗ್ತಿತ್ತು.

ಕಾಡಾನೆ ಹಿಡಿಯಲು ಬಂದ ಭೀಮ-ಅರ್ಜುನ

ಕಾಡಾನೆ ಕಾಟದಿಂದ ರೈತರ ಜೊತೆ ಅಧಿಕಾರಿಗಳು ರೋಸಿ ಹೋಗಿದ್ರು. ಅದಕ್ಕಾಗಿ ಅಧಿಕಾರಿಗಳು ಈ ಕಾಡಾನೆಗಳಿಗೆ ಗತಿ ಕಾಣಿಸ್ಬೇಕು ಅಂತ ನಾಗರಹೊಳೆಯಿಂದ ಮೈಸೂರು ಅಂಬಾರಿ ಹೊರುವ ಭೀಮಾ ಹಾಗೂ ಅರ್ಜುನ ಆನೆಗಳನ್ನ ಕರೆಸಿದ್ರು. ಆದ್ರೆ, ನೋ ಯೂಸ್. ಕಾಡಿನ ಪುಂಡನ ಎದುರು ಭೀಮಾ-ಅರ್ಜುನ ಆಟ ನಡೆಯಲಿಲ್ಲ.

ಇದನ್ನೂ ಓದಿ: Puttur: ಜಾತ್ರೆಯಲ್ಲೂ ನಿಷೇಧದ ಕೂಗು, ಅನ್ಯಧರ್ಮೀಯ ಆಟೋಗಳಿಗಿಲ್ಲ ಇಲ್ಲಿ ಅವಕಾಶ!

ಸಕ್ರೆಬೈಲಿನಿಂದಲೂ ಬಂದವು ಸಾಕಾನೆಗಳು

ಲಾರಿ ಇಳಿದ ಇಬ್ಬರು ಮಾವುತ-ಅಧಿಕಾರಿಗಳ ಜೊತೆ ಕಾಡಿಗೆ ಲಗ್ಗೆ ಇಟ್ಟಿದ್ರು. ಆದ್ರೆ, ಆ ಪುಂಡ ಕಾಡಾನೆ ಬಂದು ಭೀಮಾ-ಅರ್ಜುನರ ಜೊತೆಯೇ ಒಂದು ರಾತ್ರಿ ಕಳೆದು ಹೋಗಿದೆ. ಹಾಗಾಗಿ, ಅರಣ್ಯ ಅಧಿಕಾರಿಗಳು ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮತ್ತೆ ಮೂರು ಆನೆ ಕರೆಸಿ ಈ ಪುಂಡನಿಗೊಂದು ಗತಿ ಕಾಣಿಸಿದ್ದಾರೆ.

ಭೀಮ-ಅರ್ಜುನನ ಜೊತೆಯೇ ಇದ್ದ ಕಾಡಾನೆಗಳು

ಪುಂಡಾನೆಯನ್ನ ಮಟ್ಟ ಹಾಕಲು ಮೊದಲು ಅಖಾಡಕ್ಕೀಳಿದಿದ್ದ ಅಂಬಾರಿ ಸ್ಪೆಷಲಿಸ್ಟ್ ಭೀಮಾ-ಅರ್ಜುನರ ಕೈನಲ್ಲಿ ಆಗ್ಲಿಲ್ಲ. ಶತಾಯಗತಾಯ ಹೋರಾಡಿದ್ರು ಕಾಡಾನೆ ಎದುರು ಸಾಕಾನೆಗಳ ಆಟ ನಡೆಯಲಿಲ್ಲ. ಕಾಡಿನಾದ್ಯಂತ ಹುಡುಕಾಟ ನಡೆಸ್ತಿದ್ದ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಒಂಟಿ ಸಲಗ ರಾತ್ರಿ ಬಂದು ಈ ದಸರಾ ಆನೆಗಳ ಜೊತೆಯೇ ಊಟ ಮಾಡ್ಕೊಂಡು, ಮಲಗಿ ಫ್ರೆಂಡ್ ಶಿಪ್ ಮಾಡ್ಕೊಂಡ್, ನಿಮ್ಗೆ ವಯಸ್ಸಾದ ಮೇಲೆ ನಾನೇ ಅಂಬಾರಿ ಹೊರ್ತೀನಿ ಎಂದು ಹೇಳಿ ಹೋಗಿತ್ತು.

ಕೊನೆಗೂ ಸೆರೆಯಾಯ್ತು ಕಾಡಾನೆಗಳು

ಇವುಗಳ ಸ್ನೇಹವನ್ನ ನೋಡಿ ಅರಣ್ಯ ಅಧಿಕಾರಿಗಳೇ ಶಾಕ್ ಆಗಿದ್ರು. ಹಾಗಾಗಿ, ಮತ್ತೆ ಸಕ್ರೆಬೈಲ್ ಆನೆ ಶಿಬಿರದಿಂದ ಮೂವರನ್ನ ಬರಮಾಡಿಕೊಂಡಿದ್ರು. ಒಂದು ವಾರಗಳ ಕಾಲ ನಡೆದ ಈ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರೈತರಿಗೆ ತೊಂದರೆ ಕೊಟ್ಟಿದ್ದ ಕಾಡಾನೆ ಸೆರೆಯಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

ಒಟ್ಟಾರೆ, ಕಾಡಾನೆ ಸೆರೆಯಾಗಿರೋದ್ರಿಂದ ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಬೆಳೆಗಳನ್ನ ಉಳಿಸಿಕೊಳ್ಳಲು ಹರಸಾಹಸಪಡ್ತಿದ್ದ ರೈತರು ಇನ್ನಾದ್ರು ನೆಮ್ಮದಿಯಾಗಿ ಕೃಷಿ ಮಾಡಬಹುದು ಅಂತ ಸಂತಸಗೊಂಡಿದ್ದಾರೆ.

ಇದನ್ನೂ ಓದಿ: Bannerghatta Biological Park: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅಪರೂಪದ ಅತಿಥಿ

ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ ಪುಂಡಾನೆ ಸಾಕಾನೆಗಳ ಸಂಘಟಿತ ಹೋರಾಟದಿಂದ ಸೆರೆಯಾಗಿದೆ. ಕಾಡಾನೆ ಕಾಫಿನಾಡ ಅರಣ್ಯದಿಂದ ಬಂಡೀಪುರ ಕಾಡಿನತ್ತ ಹೆಜ್ಜೆ ಹಾಕ್ತಿದ್ರೆ, ರೈತರು ನೆಮ್ಮದಿಯಾಗಿ ಹೊಲಗದ್ದೆ-ತೋಟಗಳತ್ತ ಹೆಜ್ಜೆ ಹಾಕಿದ್ದಾರೆ.
Published by:Annappa Achari
First published: