Karnataka: ಪ್ರತಿಭಾ ಕಾರಂಜಿಯಲ್ಲಿ ಧರ್ಮ ಪಠಣೆಗೆ ಈ ಭಾಷೆಗೆ ಮಾತ್ರ ಅವಕಾಶ! ಶಿಕ್ಷಕರಿಂದ ವಿರೋಧ

ಮಕ್ಕಳ ಸ್ಪರ್ಧೆಯಲ್ಲೂ ಹಿಂದೂ ,ಮುಸ್ಲಿಂ ಎಂದು ತಾರತಮ್ಯದ ಬಗ್ಗೆ ಮಾತನಾಡುವ ಕ್ಷುಲ್ಲಕ ಮನಸ್ಸುಗಳ ನಮ್ಮ ಜೊತೆ ಇರುವುದು ನಿಜಕ್ಕೂ ವಿಷಾದದ ಸಂಗತಿ ಆಗಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ವರ್ಷಗಳಲ್ಲಿ ಕೊರೋನಾ (Corona) ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದರಿಂದ ಶಾಲಾ ಮಕ್ಕಳು ತಮ್ಮ ಅಮೂಲ್ಯ ಎರಡು ವರ್ಷಗಳ ಶಿಕ್ಷಣವನ್ನು (Education) ಮನೆಯಲ್ಲಿ ಮುಂದುವರಿಸಿದ್ದರು. ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಈ ಕೊರೋನಾ ಕಿತ್ತುಕೊಂಡಿತ್ತು ಎಂದರೂ ತಪ್ಪಾಗಲಾರದು. ಆದರೆ ಈ ವರ್ಷ ಶಾಲಾ ಮಕ್ಕಳು (Children) ಶಾಲೆಗೆ ಹೋಗುತ್ತಿದ್ದಾರೆ. ಅದರ ಜೊತೆಗೆ ಈಗೀಗ ಎಲ್ಲ ಶಾಲೆಗಳಲ್ಲಿ (School) ಸಾಂಸ್ಕೃತಿಕ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಮಕ್ಕಳ ಸ್ಪರ್ಧೆಯಲ್ಲೂ ಹಿಂದೂ ,ಮುಸ್ಲಿಂ ಎಂದು ತಾರತಮ್ಯದ ಬಗ್ಗೆ ಮಾತನಾಡುವ ಕ್ಷುಲ್ಲಕ ಮನಸ್ಸುಗಳ ನಮ್ಮ ಜೊತೆ ಇರುವುದು ನಿಜಕ್ಕೂ ವಿಷಾದದ ಸಂಗತಿ ಆಗಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ಸ್ಪರ್ಧೆಯಲ್ಲಿ ಅತ್ಯಂತ ಪ್ರಮುಖವಾದ ಸ್ಪರ್ಧೆ ಧಾರ್ಮಿಕ ಪಠಣ ಸ್ಪರ್ಧೆಯಾಗಿರುತ್ತದೆ. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರತಿಭಾ ಕಾರಂಜಿ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿಧ್ಯಾರ್ಥಿಗಳು ಕಡ್ಡಾಯವಾಗಿ ಭಗವದ್ಗೀತಾ ಅಥವಾ ಕುರಾನ್‌ನ ಶ್ಲೋಕಗಳನ್ನು ಮಾತ್ರ ಪಠಣೆ ಮಾಡಬೇಕೆಂದು ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವು ಹೊರಡಿಸಿರುವ ಆದೇಶಕ್ಕೆ ಕರ್ನಾಟಕದ ಶಿಕ್ಷಣ ತಜ್ಞರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಆದೇಶವು ಕನ್ನಡ ಭಾಷೆಗೆ ಮತ್ತು ರಾಜ್ಯಕ್ಕೆ ಅವಮಾನವಾಗಿದೆ ಮತ್ತು ಇತರ ಧರ್ಮಗಳ ಧರ್ಮ ಗ್ರಂಥಗಳಿಗೆ ತಾರತಮ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಏನಿದು ಆದೇಶ?
ಇತ್ತಿಚೀಗೆ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವು ಹೊರಡಿಸದ ಆದೇಶದ ಪ್ರಕಾರ, ಪ್ರತಿಭಾ ಕಾರಂಜಿಯ ಸಂದರ್ಭದಲ್ಲಿ, 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳು ಭಗವದ್ಗೀತೆಯ 12ನೇ ಅಧ್ಯಾಯದಿಂದ 1-5 ಶ್ಲೋಕಗಳನ್ನು ಪಠಿಸಬೇಕು. 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು 1 ರಿಂದ 10 ಶ್ಲೋಕಗಳನ್ನು ಪಠಿಸಬೇಕು. 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು 1-15 ಶ್ಲೋಕಗಳನ್ನು ಪಠಿಸಬೇಕು. ಈ ಆದೇಶವು ಸಂಸ್ಕೃತದಲ್ಲಿ ಶ್ಲೋಕಗಳನ್ನು ಪಠಿಸುವುದನ್ನು ಕಡ್ಡಾಯಗೊಳಿಸುತ್ತದೆ. ಅಲ್ಲದೆ, ಕುರಾನ್‌ನ ಪದ್ಯಗಳನ್ನು ಕೂಡ ಅರೇಬಿಕ್‌ನಲ್ಲಿ ಪಠಿಸಬೇಕು ಎಂದು ಈ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Cow Dung: ಬಣ್ಣ ಅಲ್ಲ, ಸಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ ಜನ! ನಾಗರ ಪಂಚಮಿ ಮರುದಿನ ವಿಶಿಷ್ಟ ಆಚರಣೆ

ಏನಂತಾರೆ ಶಿಕ್ಷಣ ತಜ್ಞರು?
ಪ್ರೊ.ಜಿ.ರಾಮಕೃಷ್ಣ, ನಿರಂಜನಾರಾಧ್ಯ ವಿ.ಪಿ., ಡಾ.ವಸುಂಧರಾ ಭೂಪತಿ, ಶ್ರೀಪಾದ್ ಭಟ್, ಪ್ರೊ.ಟಿ.ಆರ್.ಚಂದ್ರಶೇಖರ್, ಬಿ.ಎನ್.ಯೋಗೇಂದ್ರ ಸೇರಿದಂತೆ ಲೇಖಕರು, ಹೋರಾಟಗಾರರು, ಶಿಕ್ಷಣ ತಜ್ಞರು ಎಲ್ಲರೂ ಒಂದೇ ಧ್ವನಿಯಿಂದ ಸಂಸ್ಕೃತ ಮತ್ತು ಅರೇಬಿಕ್ ಅನ್ನು ಸ್ಪರ್ಧೆಗೆ ಕಡ್ಡಾಯಗೊಳಿಸಿರುವುದು ನಮ್ಮ ಕರ್ನಾಟಕ ರಾಜ್ಯದ ಮಾತೃಭಾಷೆ ಕನ್ನಡ ಬಳಕೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞರು ತಮ್ಮ ಮಾತನ್ನು ಮುಂದುವರಿಸಿ, “ಸಂವಿಧಾನವು ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸಿರುವುದರಿಂದ, ಸಾಧ್ಯವಾದಷ್ಟು ಸಾರ್ವಜನಿಕ ಸಂಸ್ಥೆಗಳಲ್ಲಿ ಧರ್ಮ ಮತ್ತು ಸಂಪ್ರದಾಯದ ವಿಷಯಗಳನ್ನು ತರದಿರುವುದು ಉತ್ತಮ. ಧಾರ್ಮಿಕ ಪಠಣ ಸ್ಪರ್ಧೆ ನಡೆಯಬೇಕಾದರೆ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್, ಹಿಂದೂ ಮತ್ತು ಲಿಂಗಾಯತ ಧರ್ಮಗಳ ಧರ್ಮಗ್ರಂಥಗಳಿಂದ ಆಯ್ದ ಭಾಗಗಳನ್ನು ಧಾರ್ಮಿಕ ಪಠಣ ಮಾಡಬೇಕು. ಇದು ಎಲ್ಲಾ ಧರ್ಮಗಳಿಗೆ ಸಮಾನ ಅವಕಾಶವನ್ನು ಒದಗಿಸುವುದು ಮಾತ್ರವಲ್ಲದೆ ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:  National Handloom Day: ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕೈಮಗ್ಗ ಮೇಳ! 

ಅಂತಿಮವಾಗಿ, ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ನೀಡುವುದರಿಂದ, ಮಕ್ಕಳಿಗೂ ಅವರ ಅವರ ಧರ್ಮಗಳ ಆಯ್ದ ಭಾಗಗಳನ್ನು ಅಭ್ಯಾಸ ನಡೆಸಲು ಸೂಕ್ತ ಅವಕಾಶ ನೀಡಿದ ಹಾಗೆ ಆಗುತ್ತದೆ. ಇದರಿಂದ ನಾವು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಗಳಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಲಾಗುತ್ತದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಎಲ್ಲರಲ್ಲೂ ಮೂಡಲಿದ್ದು ಇದು ಶಾಂತಿ-ಸಾಮರಸ್ಯಕ್ಕೆ ಕಾರಣವಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
Published by:Ashwini Prabhu
First published: