ಚಿಕ್ಕೋಡಿಯ ಈ ಊರಲ್ಲಿ ಇರೋದೊಂದು ಬೋರವೆಲ್ ; ಹೆಂಗಳೆಯವರಿಗೆ ಕಿತ್ತಾಡೋದೇ ನಿತ್ಯ ಕಾಯಕ

ಈ ಗ್ರಾಮದಲ್ಲಿ ಒಂದೇ ಒಂದು ಸರ್ಕಾರದ ಬೋರವೆಲ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಖಾಸಗಿಯವರು ತಮ್ಮ ಗದ್ದೆಗೆ ನೀರುಣಿಸಿ ಸಂಜೆ ಜನರಿಗೆ ನೀರು ಕೊಡುತ್ತಿದ್ದಾರೆ.

G Hareeshkumar | news18-kannada
Updated:December 31, 2019, 7:07 PM IST
ಚಿಕ್ಕೋಡಿಯ ಈ ಊರಲ್ಲಿ ಇರೋದೊಂದು ಬೋರವೆಲ್ ; ಹೆಂಗಳೆಯವರಿಗೆ ಕಿತ್ತಾಡೋದೇ ನಿತ್ಯ ಕಾಯಕ
ಬೊರ್​ವೆಲ್​​​​​​​ ನೀರಿಗಾಗಿ ಕಾಯುತ್ತಿರುವ ಮಹಿಳೆಯರು
  • Share this:
ಚಿಕ್ಕೋಡಿ(ಡಿ.31) : ಆ ಗ್ರಾಮದಲ್ಲಿ ಸಂಜೆ ಆದ್ರೆ ಸಾಕು ನಿತ್ಯ ಮಕ್ಕಳು ಮಹಿಳೆಯರು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳೊದೇ ಕಾಯಕ. ಒಬ್ಬರ ಮೇಲೆ ಒಬ್ಬರು ಬೈಯುತ್ತಾರೆ, ಏಗರಾಡುತ್ತಾರೆ. ಅಬ್ಬಬ್ಬಾ ಇವರ ಜಗಳವನ್ನು ಕೇಳಿ ಆ ಊರಿನ  ಪುರುಷರು ಸುಸ್ತೋ ಸುಸ್ತು. ಅಷ್ಟಕ್ಕೂ ಆ ಜಗಳ ಯಾಕೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮರಣಹೋಳ ಗ್ರಾಮದಲ್ಲಿ ನಡೆಯುವ ನಿತ್ಯ ಸಾಹಸದ ಸುದ್ದಿ ಇದಾಗಿದೆ. ಈ ಗ್ರಾಮ ಮಾಜಿ ಸಚಿವ ಶಾಸಕ ಸತೀಶ್ ಜಾರಕಿಹೋಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಕಟ್ಟ ಕಡೆಯ ಹಳ್ಳಿ. ಈ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಇಂತಹ ಸಾಹಸ ನಡೆಯುತ್ತೆ. ಸಂಜೆ ಆದ್ರೆ ಸಾಕು ನಿತ್ಯ ಮಹಿಳೆಯರು ಮಕ್ಕಳು ಬಿಂದಿಗೆ ಹಿಡಿದು ನೀರಿಗಾಗಿ ನಾ ಮುಂದು ನಿಮುಂದು ಎಂದು ಬಡಿದಾಡಿಕೊಳ್ಳುವ ಪರಿಸ್ಥಿತಿ ಇದೆ. ಯಾಕೆಂದರೆ ಇಡೀ ಗ್ರಾಮಕ್ಕೆ ಇರೋದು ಒಂದೆ ಒಂದು ಬೋರವೆಲ್ ಮಾತ್ರ ಅದು ಖಾಸಗಿಯವರದು.

ಈ ಗ್ರಾಮದಲ್ಲಿ ಒಂದೇ ಒಂದು ಸರ್ಕಾರದ ಬೋರವೆಲ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಖಾಸಗಿಯವರು ತಮ್ಮ ಗದ್ದೆಗೆ ನೀರುಣಿಸಿ ಸಂಜೆ ಜನರಿಗೆ ನೀರು ಕೊಡುತ್ತಿದ್ದಾರೆ. ಇನ್ನು ಮರಣಹೋಳ ವಂಟಮೂರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮ ಇದು ಪಂಚಾಯತಿಗೂ ಈ ಗ್ರಾಮಕ್ಕೂ 35 ಕಿಲೋಮೀಟರ್ ಅಂತರ ಇದೆ. ಇಲ್ಲಿನ ಸಮಸ್ಯೆ ಕುರಿತು ಗ್ರಾಮ ಪಂಚಾಯತಿ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ.

ಇನ್ನು ಸಮಸ್ಯೆ ಕುರಿತು ಇಲ್ಲಿನ ಶಾಸಕ ಸತೀಶ್ ಜಾರಕಿಹೋಳಿ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಮಾತ್ರ ಆಗಿಲ್ಲಾ ಸಮಸ್ಯೆ ಗೊತ್ತಿದ್ದು ಯಮಕನಮರಡಿ ಶಾಸಕರು ಸುಮ್ಮನಿದ್ದಾರಾ ಅನ್ನುವ ಅನುಮಾನ ಮೂಡಿದೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರೆ ಸಮಸ್ಯೆ ಬಗ್ಗೆ ಕೇಳಿದಾಗ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ :  ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು..!

ಇದು ನನ್ನ ಕ್ಷೇತ್ರ ಮಾತ್ರವಲ್ಲ ಪ್ರಧಾನಿ ಕ್ಷೇತ್ರದಲ್ಲೂ ಇಂತಹ ಸಮಸ್ಯೆ ಇದೆ ಮೋಟರ್ ಸಮಸ್ಯೆ ವಿದ್ಯುತ್  ಸಮಸ್ಯೆಯಿಂದ ಆಗಿರುತ್ತೆ. ಗ್ರಾಮಸ್ಥರೆ ಗಲಾಟೆ ಮಾಡಿಕೊಂಡು ಪೈಪ್ ಕಡಿದು ಹಾಕಿದ್ದಾರೆ ಹಾಗಾಗಿ ಈ ಸಮಸ್ಯೆ ಇದೆ ವಾರದಲ್ಲಿ ಪಂಚಾಯತನವರು ಸಮಸ್ಯೆ ಬಗೆ ಹರಿಸ್ತಾರೆ ಬಿಡಿ  ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳುತ್ತಾರೆ.

ಒಟ್ಟಿನಲ್ಲಿ ಬೇಸಿಗೆ ಆರಂಬಕ್ಕೂ ಮುನ್ನವೆ ಇಲ್ಲಿನ ಜನ ನೀರಿಗಾಗಿ ಪರಿತಪಸಿತ್ತಿದ್ದಾರೆ. ಇನ್ನಾದರೂ ಇಲ್ಲಿನ ಶಾಸಕರು ಪಂಚಾಯತನವರು ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸಬೇಕಾಗಿದೆ.(ವರದಿ : ಲೋಹಿತ್​ ಶಿರೋಳ)
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ