• Home
  • »
  • News
  • »
  • state
  • »
  • ‘ಎಂಎಲ್​​ಸಿ ಟಿಕೆಟ್​ ಸಿಎಂ​ ಯಡಿಯೂರಪ್ಪ ಒಬ್ಬರ ಕೈಯಲ್ಲಿ ಇಲ್ಲ‘ - ಸಚಿವ ಎಸ್​​ಟಿ ಸೋಮಶೇಖರ್​​

‘ಎಂಎಲ್​​ಸಿ ಟಿಕೆಟ್​ ಸಿಎಂ​ ಯಡಿಯೂರಪ್ಪ ಒಬ್ಬರ ಕೈಯಲ್ಲಿ ಇಲ್ಲ‘ - ಸಚಿವ ಎಸ್​​ಟಿ ಸೋಮಶೇಖರ್​​

ಎಸ್.ಟಿ. ಸೋಮಶೇಖರ್

ಎಸ್.ಟಿ. ಸೋಮಶೇಖರ್

ರಾಜ್ಯಸಭಾ ಸ್ಥಾನ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಮಾತನಾಡಲು ನಾನಿನ್ನೂ ಸಣ್ಣವನು. ಪಕ್ಷದಲ್ಲಿ ಇನ್ನೂ ಬೆಳೆದಿಲ್ಲ. ಇದೀಗ ತಾನೆ ಅಂಬೆಗಾಲಿಡುತ್ತಿದ್ದೇನೆ ಎಂದು ಜಾರಿಕೊಂಡರು.

  • Share this:

ಚಾಮರಾಜನಗರ(ಜೂ.05): ಎಂಎಲ್​​ಸಿ ಟಿಕೆಟ್ ಕೊಡುವುದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪರ ಒಬ್ಬರ ಕೈಯಲ್ಲೇ ಇಲ್ಲ. ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದು ಬಿಜೆಪಿ ಕೋರ್ ಕಮಿಟಿ ನಿರ್ಧಾರ ಮಾಡಬೇಕು. ಇಲ್ಲಿ ಚರ್ಚೆಯಾದ ಬಳಿಕ ಹೈಪವರ್​​ ಕಮಿಟಿಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಸಹಕಾರ ಸಚಿವ ಎಸ್​​.ಟಿ ಸೋಮಶೇಖರ್ ಹೇಳಿದ್ದಾರೆ.


ಈ ಸಂಬಂಧ ಚಾಮರಾಜನಗರಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಹಣದ ಚೆಕ್​​ ನೀಡಿದ ಬಳಿಕ ಮಾತನಾಡಿದ ಸೋಮಶೇಖರ್​​, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದಾರೆ. ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್, ರೋಷನ್ ಬೇಗ್ ಹಾಗೂ ಶಂಕರ್ ಉಳಿದುಕೊಂಡಿದ್ದು, ಅವರಿಗೆ ಟಿಕೆಟ್ ನೀಡಬೇಕೆಂದು ನಾವೆಲ್ಲಾ ಕೇಳಿದ್ದೇವೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈ ನಾಲ್ಕು ಜನರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಬಿಜೆಪಿಯಲ್ಲೇ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ಕೇವಲ ಊಹಾಪೋಹ. ಯಾರು ಸಹ ಅಡಚಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.


ರಾಜ್ಯಸಭಾ ಸ್ಥಾನ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಮಾತನಾಡಲು ನಾನಿನ್ನೂ ಸಣ್ಣವನು. ಪಕ್ಷದಲ್ಲಿ ಇನ್ನೂ ಬೆಳೆದಿಲ್ಲ. ಇದೀಗ ತಾನೆ ಅಂಬೆಗಾಲಿಡುತ್ತಿದ್ದೇನೆ ಎಂದು ಜಾರಿಕೊಂಡರು.


ಇದನ್ನೂ ಓದಿ: ಗುಜರಾತ್​​ನಲ್ಲಿ ಗರಿಗೆದರಿದ ರಾಜಕೀಯ: ರಾಜ್ಯಸಭಾ ಚುನಾವಣೆಗೆ ಮುನ್ನವೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ


ಉಮೇಶ್ ಕತ್ತಿಯವರನ್ನು ಮೂಲೆಗುಂಪು ಮಾಡಲು ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ನೀಡಲಾಗಿದೆ ಎಂಬುದು ಸುಳ್ಳು. ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜಿಲ್ಲೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.


ಹೀಗೆ ಮುಂದುವರಿದ ಅವರು, ನಬಾರ್ಡ್​ನಿಂದ 1500 ಕೋಟಿ ರೂ. ಮಂಜುರಾಗಿದ್ದು ಹೊಸ ರೈತರಿಗೆ ಸಾಲ ನೀಡಲು ಆದ್ಯತೆ ನೀಡಬೇಕೆಂದು ರಾಜ್ಯದ 21 ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಕೆಲವು ಸಹಕಾರಿ ಬ್ಯಾಂಕ್​​ಗಳಲ್ಲಿ  ಸಕ್ಕರೆ ಕಾರ್ಖಾನೆಗಳಿಗೆ  ಸಾಲ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಒಂದು ರೂಪಾಯಿ ಸಹ ವಸೂಲಾಗುತ್ತಿಲ್ಲ. ಅದರ ಬದಲು ರೈತರಿಗೆ, ಸ್ವಸಹಾಯ ಸಂಘಗಳಿಗೆ ನೀಡಿದರೆ ನೂರಕ್ಕೆ ನೂರು ಸಾಲ ವಾಪಸ್ ಆಗುತ್ತೆ. ಮರ್ಯಾದೆ ಹೋಗುತ್ತೆ ಎಂದು ಕಷ್ಟಪಟ್ಟು ಸಾಲ ತೀರಿಸುತ್ತಾರೆ ಎಂದು ಹೇಳಿದರು.

Published by:Ganesh Nachikethu
First published: