• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಬೆಳೆ ಸಮೀಕ್ಷೆ: ಬೆಂ.ಗ್ರಾ ಜಿಲ್ಲೆಗೆ 26ನೇ ಸ್ಥಾನ, ನೆಟ್ವರ್ಕ್​​ ಸಮಸ್ಯೆ, ಕೇವಲ 87,271 ರೈತರು ಮಾತ್ರ ನೋಂದಣಿ

ಬೆಳೆ ಸಮೀಕ್ಷೆ: ಬೆಂ.ಗ್ರಾ ಜಿಲ್ಲೆಗೆ 26ನೇ ಸ್ಥಾನ, ನೆಟ್ವರ್ಕ್​​ ಸಮಸ್ಯೆ, ಕೇವಲ 87,271 ರೈತರು ಮಾತ್ರ ನೋಂದಣಿ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಬೆಂಗಳೂರು ಗ್ರಾಮಾಂತರ ಭಾಗದ ಬಹುತೇಕ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ರೈತರು ನೆಟ್ವರ್ಕ್ ಸಿಗುವ ಜಾಗದಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ನ್ನು ಹಾಕಿಕೊಂಡು ಸರ್ವೇ ಮಾಡಲು ಮಾತ್ರ ಜಮೀನಿಗೆ ಹೋಗಿ ಜಿಪಿಎಸ್ ಆನ್ ಮಾಡಿ ಪೋಟೋ ತೆಗೆದು ಮತ್ತೆ ನೆಟ್ವರ್ಕ್ ಇರುವ ಕಡೆ ಬಂದು ನೋಂದಣಿ ಮಾಡಬಹುದಾಗಿದೆ.

ಮುಂದೆ ಓದಿ ...
 • Share this:

ಬೆಂಗಳೂರು(ಸೆ.26): ರಾಜ್ಯ ಸರ್ಕಾರದ ಯೋಜನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ ರೈತರು ಬೆಳೆದ ಬೆಳೆ ನಷ್ಟವಾದರೆ ಬೆಳೆ ವಿಮೆಯಾದರೂ ರೈತರ ಕೈ ಸೇರಲಿ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಬೆಳೆ ವಿಮೆ ಯೋಜಗಳನ್ನು ರೂಪಿಸಿದೆ ಆದರೆ ಬೆಳೆ ನೊಂದಣಿ ಮಾಡಲು ರೈತರು  ನಿರಾಸಕ್ತಿ ಹೊಂದಿದ್ದಾರೆ‌. ಬೆಳೆ ನೋಂದಣಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 26 ಸ್ಥಾನದಲ್ಲಿದ್ದು, ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸುವ ಕಾರ್ಯ ಮಾಡಬೇಕಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 17.92% ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಗ್ರಾಮಾಂತರ ಭಾಗದ ಬಹುತೇಕ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ರೈತರು ನೆಟ್ವರ್ಕ್ ಸಿಗುವ ಜಾಗದಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ನ್ನು ಹಾಕಿಕೊಂಡು ಸರ್ವೇ ಮಾಡಲು ಮಾತ್ರ ಜಮೀನಿಗೆ ಹೋಗಿ ಜಿಪಿಎಸ್ ಆನ್ ಮಾಡಿ ಪೋಟೋ ತೆಗೆದು ಮತ್ತೆ ನೆಟ್ವರ್ಕ್ ಇರುವ ಕಡೆ ಬಂದು ನೋಂದಣಿ ಮಾಡಬಹುದಾಗಿದೆ.


ಖಾಸಗಿ ವ್ಯಕ್ತಿ ನೇಮಕ: ರೈತರಿಗೆ ಏನಾದರೂ ಮಾಹಿತಿ ಬೇಕಾದಲ್ಲಿ, ಅವರಿಗೆ ಬೆಳೆ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲು ಗ್ರಾಮದ ಒಬ್ಬ ಯುವಕನ್ನು ನೇಮಕ ಮಾಡಲಾಗಿದೆ. ಈ ಕೆಲಸ ನಿರ್ವಹಿಸುವವರಿಗೆ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬೆಳೆ ಸಮೀಕ್ಷೆಯಿಂದ ಬೆಳೆ ವಿಮೆ, ಬೆಳೆ ನಷ್ಟ, ಬರ ಪರಿಹಾರಕ್ಕೆ ಬೆಂಬಲ ಬೆಲೆ , ಕೃಷಿ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸವಲತ್ತುಗಳನ್ನು  ಪಡೆಯಬಹುದಾಗಿದೆ.


ಆನ್​​ಲೈನ್ ತರಬೇತಿ: ಪ್ರತೀ ಮಂಗಳವಾರ ಸುಮಾರು 1.30 ಗಂಟೆಗಳ ಕಾಲ ರೈತರಿಗೆ ಆನ್​​ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ. ಬೆಂಗಳೂರು ನಗರ ಮತ್ತ ಗ್ರಾಮಾಂತರ ಸೇರಿ ವಾರದಲ್ಲಿ 2000 ಜನ ರೈತರು ತರಬೇತಿಗೆ ಭಾಗಿಯಾಗುತ್ತಾರೆ.


ಪ್ರಚಾರ ಮತ್ತು ಮಾಹಿತಿ: ತಾಲೂಕು ಮಟ್ಟದಲ್ಲಿ ಪ್ರತಿ ಹಳ್ಳಿಗಳಿಗೂ ಆಟೋ ಮೂಲಕ, ಕರ ಪತ್ರ ಹಂಚಿಕೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಇನ್ನೂ ಹೆಚ್ಚು ಜನಸಂದಣಿ ಸೇರುವ ಹಾಲಿನ ಡೈರಿಗಳ ಬಳಿ ತೆರಳಿ ರೈತರಿಗೆ ನೇರವಾಗಿ ಮಾಹಿತಿ ನೀಡಲಾಗುತ್ತದೆ.


ದೃಢೀಕರಣ ಪತ್ರ: ಬೇರೆಯವ ಹೊಲವನ್ನು ವಾರಕ್ಕೆ ಮಾಡಿದ್ದಲ್ಲಿ ಹೊಲದ ಯಜಮಾನರ ಬಳಿ ಒಂದು ದೃಢೀಕರಣ ಪತ್ರ ಪಡೆಯಬೇಕಾಗುತ್ತದೆ. ಬೆಳೆ ಹಾನಿ ಅಥವಾ ಯಾವುದೇ ಪರಿಹಾರ ಹಣ ಯಜಮಾನರ ಖಾತೆಗೆ ಜಮಾ ಆಗುತ್ತದೆ. ಹಳ್ಳಿಯಲ್ಲಿ ಜಮೀನಿದ್ದು, ನಗರದಲ್ಲಿ ನೆಲೆಸಿರುವವರ ಸಂಖ್ಯೆ ಹೆಚ್ಚಿರುವುದರಿಂದ ನೋಂದಣಿ ಸಂಖ್ಯೆ ಕಡಿಮೆ ಆಗಲು ಮುಖ್ಯ ಕಾರಣವಾಗಿದೆ.


2020-21 ನೇ ಸಾಲಿನ ನೋಂದಣಿ ಮಾಡಿರುವವರ ಸಂಖ್ಯೆ.


ತಾಲೂಕು | ಒಟ್ಟು ಜಮೀನಿನ ಸರ್ವೆ ನಂ| ಬೆಳೆ ಸಮೀಕ್ಷೆ ಮಾಡಿರುವ ರೈತರು| ಶೇಕಡಾ


 1. ನೆಲಮಂಗಲ | 107604| 23551| 21.89%

 2. ಹೊಸಕೋಟೆ | 135166|25266|18.69%

 3. ದೊಡ್ಡಬಳ್ಳಾಪುರ | 136629| 21702| 15.88%.

 4. ದೇವನಹಳ್ಳಿ |107221| 16752| 15.62.
  ಒಟ್ಟು | 486620| 87271| 17.93%.


ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ್ ವಿನುತಾ ಮಾತನಾಡಿ ರೈತರು ಜಿಲ್ಲೆಯಲ್ಲಿ ಹೆಚ್ಚು ಬೆಳೆ ಸಮೀಕ್ಷೆಗೆ ಮುಂದಾಗಬೇಕು. ಇನ್ನೂ ಕಾಲಾವಕಾಶವಿದ್ದು, ನಮ್ಮ ಜಮೀನನ್ನು ನಾವು ಸುಭದ್ರ ಮಾಡಿಕೊಳ್ಳಲು ಇದು ರೈತರಿಗೆ ಒಂದು ಸುವರ್ಣಾವಕಾಶ. ಈ ಸಮೀಕ್ಷೆಯಿಂದ ಇಲಾಖೆಯಿಂದ ಏನೇ ಪರಿಹಾರ ಬಂದರೂ ರೈತರಿಗೆ ತಲುಪಲು ಅನುಕೂಲವಾಗುತ್ತದೆ ಎಂದರು.

ಇದನ್ನೂ ಓದಿ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ - ಅಪಾರ ಪ್ರಮಾಣದ ಗಾಂಜಾ ವಶ


ರೈತ ಹನುಮಯ್ಯ ಮಾತನಾಡಿ ನಮ್ಮ ಬಳಿ ಆ್ಯಪ್​​ ಹಾಕಿಕೊಳ್ಳುವಂತ ಮೊಬೈಲ್ ಇಲ್ಲ. ನಮಗೆ ಈ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಮನೆಯಲ್ಲಿ ಸಣ್ಣ ಪುಟ್ಟ ಮಕ್ಕಳಿದ್ದು ಅವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ. ಗ್ರಾಮದಲ್ಲಿ ನೇಮಕ ಮಾಡಿರುವವರು ಯಾರೂ ಬಂದು ನಮಗೆ ಸಹಾಯ ಮಾಡುವುದಿಲ್ಲ. ಅದಕ್ಕೆ ನಾವು ಇನ್ನೂ ಸಮೀಕ್ಷೆ ಮಾಡಿಲ್ಲ ಎಂದರು.

Published by:Ganesh Nachikethu
First published: