Online Gambling: ಜೂಜು-ಬೆಟ್ಟಿಂಗ್ ಆಡಿದ್ರೆ ಇನ್ಮೇಲೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ

ಬಾಜಿ ಕಟ್ಟಿ ಆಡಿದ್ರೂ ಶಿಕ್ಷೆ ವಿಧಿಸಲಾಗುತ್ತದೆ. ಜೂಜಾಟಕ್ಕೆ ಸ್ಥಳ ಕೊಟ್ಟವರಿಗೆ ಹಾಗೂ ಬೆಂಬಲಿಸಿದವರಿಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ಏರಿಕೆ ಮಾಡಲಾಗಿದೆ

ಆನ್​ಲೈನ್​ ಗ್ಯಾಂಬ್ಲಿಂಗ್

ಆನ್​ಲೈನ್​ ಗ್ಯಾಂಬ್ಲಿಂಗ್

  • Share this:
    ಬೆಂಗಳೂರು(ಸೆ.17):  ಕರ್ನಾಟಕದಲ್ಲಿ ಆನ್​​ಲೈನ್​​ ಗ್ಯಾಂಬ್ಲಿಂಗ್(Online Gambling), ಬೆಟ್ಟಿಂಗ್​​ಗಳಿಗೆ (Betting)ಕಡಿವಾಣ ಹಾಕಲು ರಾಜ್ಯ ಸರ್ಕಾರ(Karnataka Government) ನಿರ್ಧಾರ ಮಾಡಿದೆ. ಇಂದು ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡಿಸಲಾಯಿತು. ಗೃಹ ಸಚಿವ ಅರಗ ಜ್ಞಾನೇಂದ್ರ(Home Minister Araga Jnanendra) ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕಾಯ್ದೆಯಲ್ಲಿ ಸರ್ಕಾರ ಆನ್​ಲೈನ್​​​ ಜೂಜನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೀಗಾಗಿ ಇನ್ಮುಂದೆ ಕರ್ನಾಟಕದಲ್ಲಿ ಆನ್​ಲೈನ್​ ಗ್ಯಾಂಬ್ಲಿಂಗ್(Online Gambling), ಬೆಟ್ಟಿಂಗ್ ಅಪರಾಧ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

    ಜೂಜು ಆಡಿದರೆ ಎಷ್ಟು ವರ್ಷ ಜೈಲು?

    ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣ ನೀಡಿ ಗಳಿಸುವ ಟೋಕನ್​​ಗಳನ್ನು ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜನ್ನು ನಿಷೇಧಿಸಲಾಗಿದೆ. ಆನ್​ಲೈನ್​ ಜೂಜು, ಬೆಟ್ಟಿಂಗ್ ಆಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 1 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ.

    ಇದನ್ನೂ ಓದಿ:Assam: ಪರೀಕ್ಷೆಗೆ Shorts ಹಾಕಿಕೊಂಡು ಬಂದ ವಿದ್ಯಾರ್ಥಿನಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಸಿದ ಸಿಬ್ಬಂದಿ

    ಬಾಜಿ ಕಟ್ಟಿ ಆಡಿದ್ರೂ ಶಿಕ್ಷೆ

    ಬಾಜಿ ಕಟ್ಟಿ ಆಡಿದ್ರೂ ಶಿಕ್ಷೆ ವಿಧಿಸಲಾಗುತ್ತದೆ. ಜೂಜಾಟಕ್ಕೆ ಸ್ಥಳ ಕೊಟ್ಟವರಿಗೆ ಹಾಗೂ ಬೆಂಬಲಿಸಿದವರಿಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ಏರಿಕೆ ಮಾಡಲಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಆಡುವವರಿಗೆ ಸಹಾಯ ಮಾಡಿದ್ರೆ 6 ತಿಂಗಳ ತನಕ ಜೈಲು, ಹತ್ತು ಸಾವಿರ ದಂಡ ವಿಧಿಸಲಾಗುತ್ತದೆ.

    ಇದೇ ವೇಳೆ ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕವನ್ನೂ ಮಂಡಿಸಲಾಯಿತು. ಸರ್ಕಾರಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಲಹೆ ನೀಡಿದರು. ಜೈಲಿನಲ್ಲೇ‌ ದಿನನಿತ್ಯ ಹಗರಣ ಹೊರಬರ್ತಿವೆ. ನಿಮಗೆ ಪೊಲೀಸ್ ಸಿಬ್ಬಂದಿ ಎಲ್ಲಿ‌ಹೆಚ್ಚಿದ್ದಾರೆ. ಅಲ್ಲೇ‌ ಗ್ಯಾಂಗಸ್ಟರ್ ಗಳು ಹುಟ್ಟಿಕೊಳ್ತಿದ್ದಾರೆ. ಮೊದಲು ಜೈಲು ಮಟ್ಟ ಸುಧಾರಿಸಿ. ವ್ಯಬಿಚೆಲ್ ಅಫೆಂಡರ್ಸ್ ಗಳಿದ್ದಾರೆ. ಸಣ್ಣಸಣ್ಣ ಮಟ್ಟದ ವಸ್ತುಗಳು ಸರಬರಾಜಾಗ್ತಿವೆ. ಇದನ್ನ ಬ್ರೇಕ್ ಮಾಡೋ ಪ್ರಯತ್ನ ಮಾಡಿ ಎಂದು ಬಂಧೀಖಾನೆ ಮಂಡಳಿ ‌ವಿಧೇಯಕಕ್ಕೆ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

    ಯು.ಟಿ.ಖಾದರ್ ಕೂಡ ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕದ ಬಗ್ಗೆ ಸಲಹೆ ನೀಡಿದರು. ಗಲಾಟೆ ಮಾಡುವವರಿಗೆ ಎಲ್ಲಾ ಸೌಲಭ್ಯ ಸಿಗುತ್ತಿವೆ. ಜೈಲಿನಲ್ಲಿ ಬೇಕಾದಷ್ಟು ಪೆಸಿಲಿಟಿ ‌ಸಿಗುತ್ತವೆ. ಅವರನ್ನ ರಕ್ಷಿಸೋಕೆ ರಾಜಕಾರಣಿಗಳೂ ಇದ್ದಾರೆ. ಬಿಡಿಸಿಕೊಂಡು ಬರಲು ಲಾಯರ್ ಸಿಗ್ತಾರೆ. ಉತ್ತಮ ಕೆಲಸ ಮಾಡುವವರಿಗೆ ಯಾರ ಬೆಂಬಲವೂ ಸಿಗಲ್ಲ. ಇಂತಹ ಪರಿಸ್ಥಿತಿ ಇವತ್ತು ಇದೆ. ಇದರ ಬಗ್ಗೆ ನಾವು ಗಮನಹರಿಸಬೇಕಿದೆ ಎಂದು ವಿಧೇಯಕ ಕಠಿಣಗೊಳಿಸುವಂತೆ ಖಾದರ್ ಒತ್ತಾಯಿಸಿದರು.

    ಇದನ್ನೂ ಓದಿ:Student Suicide: ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ Second PU ವಿದ್ಯಾರ್ಥಿ

    ಮುಂದುವರೆದ ಅವರು, ಜೈಲಿಗೆ ಹೋಗಿ ಪಿ ಎಚ್ ಡಿ ತೆಗೆದುಕೊಂಡು ಬರ್ತಾರೆ. ಮೊದಲ ಸಲ ಜೈಲಿಗೆ ಹೊಗುವವರನ್ನು ಆಸ್ಪತ್ರೆಗೆ ಕಳುಹಿಸಿ. ಅಲ್ಲಿ ಮನಃ ಪರಿವರ್ತನೆ ಮಾಡಬೇಕು. ಆದ್ರೆ ನಾವು ದೊಡ್ಡ ಜೈಲಿಗೆ ಕಳುಹಿಸಿದ್ರೆ. ಕ್ರಿಮಿನಲ್ ಗಳ ಪರಿಚಯ ಆಗುತ್ತೆ. ಸಣ್ಣ ತಪ್ಪಿಗೆ ಜೈಲ್ ಗೆ ಹೊದವನು ಕ್ರಿಮಿನಲ್ ಆಗಿ ಬರ್ತಾನೆ. ಬಿಡುಗಡೆ ಸಂದರ್ಭದಲ್ಲಿ ಪಿ ಹೆಚ್ ಡಿ ಸರ್ಟಿಫಿಕೇಟ್ ತೆಗೆದುಕೊಂಡು ಬರ್ತಾನೆ. ನಾವೆಲ್ಲ ವಿದೇಶಕ್ಕೆ ಹೋಗಿ ಸರ್ಟಿಫಿಕೇಟ್ ತಂದ ಹಾಗೆ. ಹಾಗಾಗಿ ಜೈಲಿನಲ್ಲಿ ಎಲ್ಲ‌ ಸೌಲಭ್ಯ ಸಿಗಬಾರದು. ಒಂದು ಸಾರಿ ಜೈಲಿಗೆ ಹೋದ್ರೆ ಮತ್ತೆ ಹೋಗ್ತೀನಿ ಅನ್ನಬಾರದು. ಹಾಗಿರಬೇಕು ಜೈಲು ವ್ಯವಸ್ಥೆ ಎಂದು ಖಾದರ್ ಸರ್ಕಾರಕ್ಕೆ ಸಲಹೆ ನೀಡಿದರು.
    Published by:Latha CG
    First published: