ಹೆಚ್ಚಾಗುತ್ತಿದೆ ಆನ್​ಲೈನ್​ ವಂಚನೆ: 10 ದಿನಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲು


Updated:January 14, 2018, 10:14 AM IST
ಹೆಚ್ಚಾಗುತ್ತಿದೆ ಆನ್​ಲೈನ್​ ವಂಚನೆ: 10 ದಿನಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲು

Updated: January 14, 2018, 10:14 AM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜ.14): ರಾಜ್ಯದಲ್ಲಿ ಆನ್​ಲೈನ್​ ವಂಚನೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನರನ್ನು ತಮ್ಮ ಜಅಲಕ್ಕೆ ಸಿಲುಕಿಸಿ ಸುಲಿಗೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಕಳೆದ 10 ದಿನದಲ್ಲಿ 100 ಕ್ಕೂ ಹೆಚ್ಚು ಆನ್​ಲೈನ್​ ವಂಚನೆಯ ಪ್ರಕರಣಗಳು ದಾಖಲಾಗಿವೆ.

ಅಕೌಂಟ್​ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಳ್ಳುವ ಈ ವವಂಚನೆ ಕ್ಯಾನ್ಸರ್ ಗುಣಪಡಿಸುವ ಹೆಸರಿನಲ್ಲೂ ನಡೆಯುತ್ತಿದೆ. ಅಲ್ಲದೇ ಫೇಸ್​ಬುಕ್, ವಾಟ್ಸಪ್,ಇ-ಮೇಲ್ ಮೂಲಕ ವಂಚಿಸುತ್ತಿರುವುದೂ ಬೆಳಕಿಗೆ ಬಂದಿದೆ. ಇನ್ನು ಉದ್ಯಮಿಗಳನ್ನೇ ಟಾರ್ಗೆಟ್​ ಮಾಡಿಕೊಂಡ ವಿದೇಶ ಪ್ರಜೆಗಳು ಎಟಿಎಂ, ಡಿಬೇಟ್,ಕ್ರೆಡಿಟ್ ಕಾರ್ಡ್ ಪಿನ್ ಕದ್ದು ಮೋಸ ಮಾಡುತ್ತಿದ್ದಾರೆ.

ಪ್ರತಿದಿನ ಸೈಬರ್ ಕ್ರೈಂಗೆ ವಂಚನೆಗೊಳಗಾಗಿರುವ ದೂರುಗಳಿಂದ ಸೈಬರ್​ ಕ್ರೈಂ ಪೊಲಿಸರು ಬಹಳಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಈ ವಂಚನೆ ಪ್ರಕರಣಗಳಲ್ಲಿ ನೈಜೀರಿಯನ್ ಪ್ರಜೆಗಳ ಹೆಸರೇ ಹೆಚ್ಚಾಗಿ ಕೇಳಿ ಬರುತ್ತಿದ್ದು, ಕಳೆದ ವರ್ಷ 3 ಸಾವಿರ ಸೈಬರ್ ಕ್ರೈಂ ಕೇಸ್ ದಾಖಲಅಗಿವೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ