YouTube: ಯೂಟ್ಯೂಬ್​ ಜಾಹೀರಾತು ನೋಡ್ತೀರಾ? ಇಲ್ನೋಡಿ ತಂದೆ-ಮಗ ಮೋಸ ಹೋದ ಕಥೆ!

ಇತ್ತೀಚಿಗಂತೂ ನಾವು ಮೊಬೈಲ್ ದಾಸರಾಗ್ತಿದ್ದೇವೆ. ಇದನ್ನೇ ಬಂಡವಾಳ ಮಾಡಿಕೊಳ್ಳೋ ಜಾಲಗಳು ಮೋಸ ಮಾಡ್ತಿದೆ. ಮನಸೋಲುವಂತಹ ಜಾಹೀರಾತು ಕೊಟ್ಟು ಆನ್​ಲೈನ್ ದೋಖಾ ಮಾಡ್ತಿದೆ. ಹುಬ್ಬಳ್ಳಿಯಲ್ಲೂ ಇದೇ ರೀತಿ ಒಂದು ತಂಡ ತಂದೆ-ಮಗನಿಗೆ ಪಂಗನಾಮ ಹಾಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇದು ಮೊಬೈಲ್ (Mobile) ಯುಗ. ಅಂಗೈಯಲ್ಲೇ ಪ್ರಪಂಚನ (World) ನೋಡ್ಬೋದು. ಇದನ್ನೇ ಬಂಡವಾಳ ಮಾಡಿಕೊಳ್ಳುವ ಜಾಲ ವಿವಿಧ ರೀತಿಯ ಜಾಹೀರಾತು (Advertisement) ಕೊಟ್ಟು ಖೆಡ್ಡಾಕ್ಕೆ ಬೀಳಿಸುತ್ತಿದೆ. ಅದರಲ್ಲೂ ಈಗೀಗ ಅಂತೂ ಆನ್​ಲೈನ್ ದೋಖಾ (Online Fraud) ನಡೆಯುತ್ತಿರೋದು ಒಂದೆರಡಲ್ಲ. ಮಾನ ಮರ್ಯಾದೆಗೆ ಅಂಜಿ ಎಷ್ಟೋ ಪ್ರಕರಣಗಳು (Case) ಬೆಳಕಿಗೆ ಬರೋದೇ ಇಲ್ಲ. ವಿವಿಧ ರೀತಿಯಲ್ಲಿ ಮಾರ್ಕೆಟಿಂಗ್ (Marketing) ಮಾಡಿ, ಲಾಭ- ದುಪ್ಪಟ್ಟು ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಳ್ಳುವ ಪ್ರಕರಣಗಳು ದಾಖಲಾಗ್ತಿದೆ. ಇದೇ ರೀತಿ ಹುಬ್ಬಳ್ಳಿಯಲ್ಲಿ ತಂದೆ-ಮಗ ಯೂಟ್ಯೂಬ್ ಜಾಹೀರಾತು ನೋಡಿ ಮೋಸ ಹೋಗಿದ್ದಾರೆ. ಅಪ್ಪ-ಮಗ ಒಂದಲ್ಲ ಎರಡಲ್ಲ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಹಣ ಕಳ್ಕೊಂಡಿದ್ದಾರೆ.

ಇತ್ತೀಚಿಗಂತೂ ನಾವು ಮೊಬೈಲ್ ದಾಸರಾಗ್ತಿದ್ದೇವೆ. ಇದನ್ನೇ ಎನ್​ಕ್ಯಾಶ್​ ಮಾಡಿಕೊಳ್ಳೋ ಜಾಲಗಳು ಮೋಸ ಮಾಡ್ತಿದೆ. ಮನಸೋಲುವಂತಹ ಮಾರ್ಕೆಟಿಂಗ್ ಮಾಡಿ ಆನ್​​ಲೈನ್​ ದೋಖಾ ಮಾಡ್ತಿದೆ. ಹುಬ್ಬಳ್ಳಿಯಲ್ಲೂ ಇದೇ ರೀತಿ ಒಂದು ತಂಡ ತಂದೆ-ಮಗನಿಗೆ ಪಂಗನಾಮ ಹಾಕಿದೆ.

21.86 ಲಕ್ಷ ರೂಪಾಯಿ ವಂಚನೆ!

ಆನ್​ಲೈನ್ ಜಾಹೀರಾತಿಗೆ ಕುಟುಂಬವೊಂದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್​​‍ನಲ್ಲಿ ಹಣ ಹೂಡಿಕೆ ಹೆಸರಲ್ಲಿ ಅಪರಿಚಿತ ವ್ಯಕ್ತಿ ವಂಚನೆ ಮಾಡಿದ್ದಾನೆ. ತಂದೆ- ಮಗನಿಗೆ ಬರೋಬ್ಬರಿ 21.86 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿ, ಗ್ಯಾಂಗ್ ಕಟ್ಕೊಂಡು ಬಂದು ಹುಡುಗನ ಮನೆ ಮೇಲೆ ದಾಳಿ

ಯೂಟ್ಯೂಬ್ ಜಾಹೀರಾತು ಕೊಟ್ಟು ದೋಖಾ!

ಹುಬ್ಬಳ್ಳಿಯ ಗೋಕುಲ ರಸ್ತೆಯ ಶ್ರೀಗಿರಿಲಿಂಗ ಮತ್ತು ಅವರ ಪುತ್ರ ಈಶಾನ್‌ ವಂಚನೆಗೆ ಒಳಗಾದವರು. ಇವರಿಗೆ ಆನ್‌ಲೈನ್‌ನಲ್ಲಿ 21.86 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಜಾಹೀರಾತು ನೋಡಿದ್ದ ಈಶಾನ್‌, ಟೆಲಿಗ್ರಾಮ್‌ನಲ್ಲಿ ಖಾತೆ ತೆರೆದು ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರಲ್ಲಿ ಮಾಜಿ ಸಂಸದ ಶಿವರಾಮೇಗೌಡರ ಅಳಿಯನ ಪುಂಡಾಟ; ಹುಲಿಹೈದರ ಗುಂಪು ಘರ್ಷಣೆಗೆ ಟ್ವಿಸ್ಟ್

ಆರಂಭದಲ್ಲಿ ಲಾಭ, ನಂತರ ಪಂಗನಾಮ!

ಆರಂಭದಲ್ಲಿ ಈಶಾನ್​ಗೆ ಲಾಭವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ ನಂತರ ಮತ್ತಷ್ಟು ಹೂಡಿಕೆಗೆ ಈಶಾನ್​ಗೆ ಪ್ರೇರೇಪಿಸಿದ್ದ. ಕ್ಯೂಟೆಕ್ಸ್ ಆ್ಯಪ್‌ನಲ್ಲಿ ಸಾಲ ನೀಡಿದ್ದ ವಂಚಕ ಬಳಿಕ 35 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಲು ಹೇಳಿದ್ದ.

ಅನಾರೋಗ್ಯಕ್ಕೆ ಒಳಗಾಗಿದ್ದ ಮಗ ಈಶಾನ್!

ವಂಚಕನ ಮಾತಿನಿಂದ ಈಶಾನ್​ಗೆ ಚಿಂತೆಯಾಗಿದೆ. ಇದರಿಂದಾಗಿಯೇ ಮಗ ಈಶಾನ್ ಅನಾರೋಗ್ಯಕ್ಕೆ ಕೂಡ ಒಳಗಾಗಿದ್ದ. ವಿಷಯ ತಿಳಿದ ತಂದೆ ಶ್ರೀಗಿರಿಲಿಂಗ ಮಗನ ಆರೋಗ್ಯ ದೃಷ್ಟಿಯಿಂದ ಬಂಡವಾಳ ಹೂಡಿಕೆಗೆ ಮುಂದಾಗಿದ್ದರು.

ಮಗ ಈಶಾನ್​​, ತಂದೆ ಶ್ರೀಗಿರಿಲಿಂಗ ಮತ್ತು ತಾಯಿ ಖಾತೆಗಳಿಂದ ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್ ಕಂಪನಿಗೆ 19.87 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ. ಇಷ್ಟಾಗುತ್ತಿದ್ದಂತೆ ವಂಚಕ ಕೈಎತ್ತಿಬಿಟ್ಟಿದ್ದಾನೆ. ಎಲ್ಲಾ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಅಪರಿಚಿತ ವ್ಯಕ್ತಿ ವಂಚಿಸಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯ

ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ ಶಿಳ್ಳಿಕೇತರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಒತ್ತಾಯ ಹೆಚ್ಚಾಗಿದೆ. ಜಾತಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಹುಬ್ಬಳ್ಳಿಯ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಯಿತು. ಅಲೆಮಾರಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದೇ ವಂಚನೆ ಮಾಡಲಾಗ್ತಿದೆ. ಸರ್ಕಾರಿ ಅಧಿಕಾರಿಗಳೇ ಪ್ರಮಾಣ ಪತ್ರ ನೀಡುತ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು. ವಾರದೊಳಗಾಗಿ ಶಿಳ್ಳಿಕೇತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿದರು.
Published by:Thara Kemmara
First published: