ಬೆಂಗಳೂರಿಗೆ ಬಂತು ಈಜಿಪ್ಟ್‌ ಈರುಳ್ಳಿ; ಏನಿದರ ವಿಶೇಷತೆ? ಕೆ.ಜಿ. ಗೆ ಎಷ್ಟು ರೂ? ಇಲ್ಲಿದೆ ಮಾಹಿತಿ..!

ಇನ್ನೊಂದೆಡೆ ಈರುಳ್ಳಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಬಹುತೇಕ ಅಂಗಡಿಗಳು ಖಾಲಿ ಖಾಲಿ ಇವೆ. ಕೇವಲ  ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಮಾತ್ರ ಈರುಳ್ಳಿ ಲಭ್ಯವಿದೆ. 

ಈರುಳ್ಳಿ

ಈರುಳ್ಳಿ

 • Share this:
ಬೆಂಗಳೂರು(ಡಿ.08): ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಈರುಳ್ಳಿ ಬೆಲೆ 120ಕ್ಕಿಂತ ಹೆಚ್ಚಿದೆ. ಗೃಹಿಣಿಯರೂ ಸಹ ಈರುಳ್ಳಿ ಬೆಲೆ ನೋಡಿ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.

ಈ ನಡುವೆ ಸಿಲಿಕಾನ್​ ಸಿಟಿಗೆ ಈಜಿಪ್ಟ್​​ ಈರುಳ್ಳಿ ಆಗಮನವಾಗಿದೆ. ಯಾವುದು ಈ ಈರುಳ್ಳಿ ಅಂತೀರಾ? ಈರುಳ್ಳಿ ಬೆಲೆ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆ ಇತ್ತು. ಹೀಗಾಗಿ ಇತ್ತೀಚೆಗಷ್ಟೇ ನೆದರ್​ಲ್ಯಾಂಡ್​ ಮತ್ತು ಈಜಿಪ್ಟ್​ ದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿತ್ತು. ಈಗ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಈಜಿಪ್ಟ್​​ ಈರುಳ್ಳಿ ಬಂದಿದೆ. ಇಂದು ಬೆಳಗ್ಗೆ ನಾಲ್ಕು ಲೋಡ್​ ಈರುಳ್ಳಿಯನ್ನು ಯಶವಂಪತಪುರ ಮಾರುಕಟ್ಟೆಗೆ ತಂದು ಹಾಕಲಾಗಿದೆ.

ಹೇಗಿದೆ ಈಜಿಪ್ಟ್​ ಈರುಳ್ಳಿ?

ಒಂದು ಈಜಿಪ್ಟ್​​ ಈರುಳ್ಳಿ ಸುಮಾರು 750 ಗ್ರಾಂ ತೂಕವಿದೆ. ಒಂದು ಕೆಜಿಗೆ ಎರಡೇ ಈರುಳ್ಳೀ ಬರುತ್ತದೆ. ಮಾಮೂಲಿ ನಮ್ಮ ದೇಶದ ಈರುಳ್ಳಿಯಂತೆ ಸಣ್ಣ ಗಾತ್ರ ಇಲ್ಲ. ಗಾತ್ರ ಹೆಚ್ಚಾಗಿರುವುದರಿಂದ 1 ಕೆ.ಜಿ.ಗೆ ಎರಡೇ ಈರುಳ್ಳಿ ಬರುತ್ತೆ.

ಹೈದರಾಬಾದ್ ಅತ್ಯಾಚಾರಿಗಳ ಎನ್​ಕೌಂಟರ್​ ಪ್ರಕರಣ; ಹತ್ಯೆಯ ಸಾಚಾತನದ ಕುರಿತು ಇಂದಿನಿಂದಲೇ ತನಿಖೆ ಆರಂಭ

ಒಂದು ಕೆ.ಜಿ.ಗೆ ಎಷ್ಟು ರೂಪಾಯಿ?

ಈಜಿಪ್ಟ್​​ ಈರುಳ್ಳಿ ಒಂದು ಕೆ.ಜಿ.ಗೆ ಬರೋಬ್ಬರಿ 150 ರೂ.ಗಳು. ಈ ಈಜಿಪ್ಟ್​ ಈರುಳ್ಳಿಯ ಮತ್ತೊಂದು ವೈಶಿಷ್ಟವೆಂದರೆ, ಇದರಲ್ಲಿ ಹೆಚ್ಚು ನೀರಿನಾಂಶ ಇರುತ್ತದೆ.

ನಾಳೆಯಿಂದ ಮಾರಾಟ

ಸದ್ಯ ಪುಣೆಯಿಂದ ಬೆಂಗಳೂರಿಗೆ ಬಂದಿರುವ ಈಜಿಪ್ಟ್​ ಈರುಳ್ಳಿ ನಾಳೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ನಾಳೆ ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಮಾರಾಟವಾಗುತ್ತದೆ ಎನ್ನುವ ಕುತೂಹಲ ವರ್ತಕರು ಹಾಗೂ ಗ್ರಾಹಕರಲ್ಲಿ ಮನೆ ಮಾಡಿದೆ.

ಇನ್ನೊಂದೆಡೆ ಈರುಳ್ಳಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಬಹುತೇಕ ಅಂಗಡಿಗಳು ಖಾಲಿ ಖಾಲಿ ಇವೆ. ಕೇವಲ  ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಮಾತ್ರ ಈರುಳ್ಳಿ ಲಭ್ಯವಿದೆ.  ವರ್ತಕರು ಹೊರ ರಾಜ್ಯಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಗುಜರಾತ್ ನ ರಾಜ್ ಕೋಟ್ , ಮಹಾರಾಷ್ಟ್ರದ ಪುಣೆಯಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇಂದು ಕೇವಲ 25 ಲೋಡ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ.

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು

ರಾಜ್ಯದ ವಿವಿಧೆಡೆ ಈರುಳ್ಳಿ ಬೆಲೆ

 • ಕೋಲಾರ - 140 - 150 ರೂ..

 • ಯಾದಗಿರಿ - 120 ರಿಂದ 150

 • ಬೀದರ್​ - 100 ರೂ.

 • ರಾಯಚೂರು - 40 ರಿಂದ 100

 • ತುಮಕೂರು -150 ರಿಂದ 160

 • ಗದಗ - 130 ರಿಂದ 150

 • ದಾವಣಗೆರೆ - 20 ರಿಂದ 150

 • ಮೈಸೂರು - 150 ರೂ.

 • ಮಂಡ್ಯ - 150 ರಿಂದ 180

 • ಚಿಕ್ಕಮಗಳೂರು - 140 ರೂ.

 • ಧಾರವಾಡ - 120 ರಿಂದ 140

 • ಬಾಗಲಕೋಟೆ - 110 ರಿಂದ 120

 • ಕಲಬುರಗಿ - 100 ರೂ.

 • ಚಿಕ್ಕಬಳ್ಳಾಪುರ - 110-120

 • ನೆಲಮಂಗಲ - 110-130


First published: