ಬೆಂಗಳೂರಿನಲ್ಲಿ ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ; ಗ್ರಾಹಕರಿಗೆ ನಿರಾಳ, ರೈತರಿಗೆ ಕಣ್ಣೀರು

Onion Price: ಡಿಸೆಂಬರ್​ ತಿಂಗಳಲ್ಲಿ ಈರುಳ್ಳಿ ಬೆಳೆದು, ಮಾರಾಟ ಮಾಡಿ ಕೋಟ್ಯಧಿಪತಿಯಾಗಿದ್ದ ರೈತರ ಯಶೋಗಾಥೆ ಕೇಳಿದವರು ಹುಬ್ಬೇರಿಸಿದ್ದರು. ಇದೀಗ 1 ಕೆ.ಜಿ.ಗೆ 17 ರೂ. ಕೂಡ ಸಿಗದೆ ರೈತರು ಪರದಾಡುತ್ತಿದ್ದಾರೆ.

ಈರುಳ್ಳಿ (ಸಾಂದರ್ಭಿಕ ಚಿತ್ರ)

ಈರುಳ್ಳಿ (ಸಾಂದರ್ಭಿಕ ಚಿತ್ರ)

 • Share this:
  ಬೆಂಗಳೂರು (ಫೆ. 11): 1 ತಿಂಗಳ ಹಿಂದೆ ಶತಕದ ಗಡಿ ದಾಟಿದ್ದ ಈರುಳ್ಳಿ ಬೆಲೆ ಈಗ ನೆಲಕ್ಕೆ ಕುಸಿದಿದೆ. ಗಗನಕ್ಕೇರಿದ್ದ ಈರುಳ್ಳಿ ಬೆಲೆಯಿಂದ ಗ್ರಾಹಕರು ಪರದಾಡುವಂತಾಗಿತ್ತು. ಈಗ ಈರುಳ್ಳಿಯ ಬೆಲೆ 25ರಿಂದ 30ಕ್ಕೆ ಇಳಿಕೆಯಾಗಿದೆ.

  ಡಿಸೆಂಬರ್- ಜನವರಿ ತಿಂಗಳಲ್ಲಿ 1 ಕೆ.ಜಿ. ಈರುಳ್ಳಿಗೆ 200 ರೂ.ವರೆಗೂ ಮಾರಾಟ ಮಾಡಲಾಗುತ್ತಿತ್ತು. ಚಿನ್ನದ ಬೆಲೆ ದಾಖಲಿಸಿದ್ದ ಈರುಳ್ಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗಳೂ ಹುಟ್ಟಿಕೊಂಡಿದ್ದವು. ವಿಪರೀತ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆತು ಹೋದ ಕಾರಣ ಈರುಳ್ಳಿ ಸರಬರಾಜು ಕಡಿಮೆಯಾಗಿತ್ತು. ನಂತರ ರಷ್ಯಾ, ಟರ್ಕಿ, ಜಪಾನ್​ನಿಂದಲೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಈರುಳ್ಳಿಯ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆಗಳೂ ದಾಖಲಾಗಿದ್ದವು. ಆದರೀಗ 1 ಕೆ.ಜಿ. ಈರುಳ್ಳಿ ಬೆಲೆ 20ರಿಂದ 25 ರೂ.ಗೆ ಇಳಿದಿದೆ.

  ಪ್ರವಾಹದಿಂದಾಗಿ ಈರುಳ್ಳಿ ಬೆಳೆವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಭಾಗದಲ್ಲಿ ಈರುಳ್ಳಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈರುಳ್ಳಿಯ ರಫ್ತನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಇದೀಗ ಪರಿಸ್ಥಿತಿ ಸಹಜಸ್ಥಿತಿಗೆ ಬಂದಿದ್ದು, ಈರುಳ್ಳಿಯ ಸರಬರಾಜು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಈರುಳ್ಳಿ ಬೆಲೆ ಇಳಿಮುಖವಾಗಿದೆ.

  ಇದನ್ನೂ ಓದಿ: ಮುಗಿಯದ ಬಿಎಸ್​ವೈ ಸಂಪುಟ ಗೊಂದಲ; ಐವರು ಸಚಿವರಿಗೆ ಮತ್ತೆ ಖಾತೆ ಬದಲಾವಣೆ

  ಡಿಸೆಂಬರ್​ ತಿಂಗಳಲ್ಲಿ ಈರುಳ್ಳಿ ಬೆಳೆದು, ಮಾರಾಟ ಮಾಡಿ ಕೋಟ್ಯಧಿಪತಿಯಾಗಿದ್ದ ರೈತರ ಯಶೋಗಾಥೆ ಕೇಳಿದವರು ಹುಬ್ಬೇರಿಸಿದ್ದರು. ಇದೀಗ 1 ಕೆ.ಜಿ.ಗೆ 17 ರೂ. ಕೂಡ ಸಿಗದೆ ರೈತರು ಪರದಾಡುತ್ತಿದ್ದಾರೆ. ಬೆಂಗಳೂರಿಗೆ ನಾಸಿಕ್ ಮತ್ತು ಶೋಲಾಪುರದಿಂದ ಈರುಳ್ಳಿ ಸರಬರಾಜು ಆಗುತ್ತದೆ. ನಾಸಿಕ್​ನಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಈರುಳ್ಳಿಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

  ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಹತ್ಯೆ; ಗಂಡನ ಒಂದೇ ಏಟಿಗೆ ಪ್ರಾಣಬಿಟ್ಟ ಹೆಂಡತಿ

  ಆದರೆ, ಸದ್ಯದ ಮಟ್ಟಿಗೆ ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದರಿಂದ ಅಲ್ಲಿನ ಈರುಳ್ಳಿ ಬೆಂಗಳೂರಿಗೆ ಸರಬರಾಜಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗಾರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಹೀಗಿದ್ದರೂ ನಾಸಿಕ್ ಮತ್ತು ಶೋಲಾಪುರದ ರೈತರಿಗೂ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಕೆ.ಜಿ.ಗೆ 40 ರೂ. ಕೂಡ ಸಿಗದ ಕಾರಣ ಈರುಳ್ಳಿ ಬೆಳೆಗಾರರು ಕಂಗೆಟ್ಟಿದ್ದಾರೆ.
  First published: