• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Onion Price: ಬೇಡಿಕೆಗೆ ತಕ್ಕಂತೆ ಇಲ್ಲದ ಈರುಳ್ಳಿ ದಾಸ್ತಾನು; ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿ ನೀರು

Onion Price: ಬೇಡಿಕೆಗೆ ತಕ್ಕಂತೆ ಇಲ್ಲದ ಈರುಳ್ಳಿ ದಾಸ್ತಾನು; ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿ ನೀರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷ ಇದೇ ಅವಧಿಯಲ್ಲಿಇಲ್ಲಿನ ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಪ್ರತಿದಿನ 10-15 ಲಾರಿ ಈರುಳ್ಳಿ ತರಿಸಲಾಗುತ್ತಿತ್ತು. ಈ ಬಾರಿ ದರ ಹೆಚ್ಚಳವಾಗಿರುವ ಕಾರಣ ಕೇವಲ 4-5 ಲಾರಿ ತರಿಸಲಾಗುತ್ತಿದೆ.

  • Share this:

ಹಾವೇರಿ(ನ.23): ಪ್ರಸಕ್ತ ಸಾಲಿನಲ್ಲಿ ದೀಪಾವಳಿ ಹಬ್ಬ ಮುಕ್ತಾಯವಾದರೂ ಮಾರುಕಟ್ಟೆಯಲ್ಲಿ ನಿತ್ಯ ಜೀವನದಲ್ಲಿಅಡುಗೆಗೆ ಅಗತ್ಯವಾದ ಈರುಳ್ಳಿ ದರ ಇಳಿಯದಿರುವುದು ಗ್ರಾಹಕರ ಕಣ್ಣಲ್ಲಿನೀರು ತರಿಸುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ದಾಸ್ತಾನು ಇಲ್ಲದಿರುವುದೇ ದರ ಇಳಿಮುಖವಾಗದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ಎಪಿಎಂಸಿ ವ್ಯಾಪ್ತಿಯ ಈರುಳ್ಳಿ ಮಾರುಕಟ್ಟೆಯಲ್ಲಿ ಹೋಲ್‌ಸೇಲ್‌ ಮಾರಾಟ ಮಳಿಗೆಯಲ್ಲಿ ಈರುಳ್ಳಿ ಚೀಲಗಳು ಸ್ಟಾಕ್ ಇಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿವೆ. ಸಾಮಾನ್ಯವಾಗಿ ಇಲ್ಲಿನ ಮಾರುಕಟ್ಟೆಗೆ ರಾಣೇಬೆನ್ನೂರು ಮತ್ತು ಹಾವೇರಿ ತಾಲೂಕಿನ ಗ್ರಾಮಗಳಿಂದಲೇ ದೀಪಾವಳಿವರೆಗೆ ಹೆಚ್ಚಿನ ಪ್ರಮಾಣದಲ್ಲಿಈರುಳ್ಳಿ ಪೂರೈಕೆಯಾಗುತ್ತದೆ.


ಆದರೆ ಈ ಬಾರಿ ಜೂನ್‌ ತಿಂಗಳಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸ್ಥಳೀಯ ತಾಲೂಕು ಮತ್ತು ಹಾವೇರಿ ತಾಲೂಕಿನ ಈರುಳ್ಳಿ ಹೊಲದಲ್ಲಿನ ಶೇ.75ರಷ್ಟು ಫಸಲು ತೇಲಿಹೋಗಿದೆ. ಆದ್ದರಿಂದ ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಈರುಳ್ಳಿ ಬಹುತೇಕ ಖಾಲಿಯಾಗಿದೆ.


Puneeth Rajkumar: ಗೋಕಾಕ್​ ಚಳುವಳಿ ಸಮಯದಲ್ಲಿ ತೆಗೆದ ಫೋಟೋ ಹಂಚಿಕೊಂಡ ಪುನೀತ್​ ರಾಜ್​ಕುಮಾರ್​


ಹೀಗಾಗಿ ದಿನಕ್ಕೆ 10ರಿಂದ 20 ಚೀಲ ಮಾತ್ರ ಮಾರಾಟಕ್ಕೆ ಬರುತ್ತಿದ್ದು, ಅದು ಕೂಡ ಇದೀಗ ನಿಂತು ಹೋಗಿದೆ. ಹೀಗಾಗಿ ದೀಪಾವಳಿ ಕಳೆದ ಬಳಿಕ ಮಹಾರಾಷ್ಟ್ರದಿಂದ ತರಿಸಲಾಗುತ್ತಿತ್ತು. ಆದರೆ ಈ ಬಾರಿ ದಸರಾದಿಂದಲೇ ತರಿಸುವಂತಾಗಿದೆ. ಲಾಕ್‌ಡೌನ್‌ ವೇಳೆ ಮಹಾರಾಷ್ಟ್ರದಿಂದ ಸಮರ್ಪಕವಾಗಿ ಈರುಳ್ಳಿ ಸಾಗಿಸಲು ಸಾಧ್ಯವಾಗದೇ ಹಳೆಯ ದಾಸ್ತಾನನ್ನೇ ಪೂರೈಸಲಾಗುತ್ತಿದೆ.


ಕಳೆದ ವರ್ಷ ಇದೇ ಅವಧಿಯಲ್ಲಿಇಲ್ಲಿನ ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಪ್ರತಿದಿನ 10-15 ಲಾರಿ ಈರುಳ್ಳಿ ತರಿಸಲಾಗುತ್ತಿತ್ತು. ಈ ಬಾರಿ ದರ ಹೆಚ್ಚಳವಾಗಿರುವ ಕಾರಣ ಕೇವಲ 4-5 ಲಾರಿ ತರಿಸಲಾಗುತ್ತಿದೆ. ಹೋಲ್‌ಸೇಲ್‌ ದರ ಕ್ವಿಂಟಾಲ್​​‌ಗೆ 4ರಿಂದ 6 ಸಾವಿರ ರೂ.ವರೆಗಿದೆ. ಸ್ಥಳೀಯ ಈರುಳ್ಳಿ ಕ್ವಿಂಟಾಲ್‌ಗೆ 1000ರಿಂದ 4500 ರೂ.ವರೆಗಿದೆ. ರಿಟೇಲ್‌ನಲ್ಲಿ ಕೆಜಿಗೆ 50ರಿಂದ 90 ರೂ. ದರದಲ್ಲಿಮಾರಾಟವಾಗುತ್ತಿದೆ.


ಈರುಳ್ಳಿ ದಾಸ್ತಾನು ಕಡಿಮೆ ಇರುವುದರಿಂದ ದರ ಹೆಚ್ಚಳವಾಗಿದೆ. ಆದರೆ ಇದರಿಂದ ರೈತನಿಗಾಗಲಿ, ವರ್ತಕರಿಗಾಗಲಿ ಲಾಭವಿಲ್ಲ. ಇಳುವರಿ ಹೆಚ್ಚು ಬಂದರೆ ಮಾತ್ರ ಎಲ್ಲರಿಗೂ ಲಾಭ ದೊರಕುತ್ತದೆ. ಉತ್ತಮ ಇಳುವರಿಯಿದ್ದಾಗ ಕ್ವಿಂಟಲ್‌ಗೆ 2000 ರೂ. ದರ ಲಭಿಸಿದರೂ ರೈತರಿಗೆ ಲಾಭವಾಗುತ್ತದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ6000 ರೂ. ದರವಿದ್ದರೂ ರೈತನಿಗೆ ಲಾಭ ಸಿಗುತ್ತಿಲ್ಲ.

Published by:Latha CG
First published: