• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Onion Price: ಸಾಲು-ಸಾಲು ಹಬ್ಬ ಮುಗಿದರೂ ಗಗನಕ್ಕೇರುತ್ತಿರುವ ತರಕಾರಿ ಬೆಲೆ; ಇನ್ನೂ ತುಟ್ಟಿಯಾದ ಈರುಳ್ಳಿ ದರ

Onion Price: ಸಾಲು-ಸಾಲು ಹಬ್ಬ ಮುಗಿದರೂ ಗಗನಕ್ಕೇರುತ್ತಿರುವ ತರಕಾರಿ ಬೆಲೆ; ಇನ್ನೂ ತುಟ್ಟಿಯಾದ ಈರುಳ್ಳಿ ದರ

ತರಕಾರಿ (ಸಾಂದರ್ಭಿಕ ಚಿತ್ರ)

ತರಕಾರಿ (ಸಾಂದರ್ಭಿಕ ಚಿತ್ರ)

Vegetables Price: ಕಳೆದ ತಿಂಗಳು 20 ರಿಂದ 30 ರೂಪಾಯಿ ಇದ್ದ ಫಸ್ಟ್ ಕ್ವಾಲಿಟಿ ಈರುಳ್ಳಿ ಬೆಲೆ ಪ್ರಸ್ತುತ 100 ರಿಂದ 120 ರೂಪಾಯಿ ಆಗಿದೆ. ಸ್ವಲ್ಪ ಸಣ್ಣ ಈರುಳ್ಳಿ 80-100 ರೂಪಾಯಿಗೆ ಮಾರಾಟವಾಗ್ತಿದೆ. ಅದೇ ರೀತಿ ಮೊದಲು 30 ರಿಂದ 40 ರೂಪಾಯಿ ಇದ್ದ ಕ್ಯಾರೆಟ್ ಬೆಲೆ ಈಗ ಒಂದು ಕೆಜಿಗೆ 100ರಿಂದ 120ರೂಪಾಯಿಗೆ ಏರಿಕೆ ಆಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು(ನ.02):  ಪ್ರವಾಹ, ಸಾಲು ಸಾಲು ಹಬ್ಬಗಳಿಂದ ತರಕಾರಿ ದರ ಗಗನಕ್ಕೇರಿತ್ತು. ಇದೀಗ ದಸರಾ, ಆಯುಧಪೂಜೆ, ಈದ್ ಮಿಲಾದ್ ಎಲ್ಲಾ ಹಬ್ಬಗಳೂ ಮುಗಿದಿವೆ. ಈಗಲಾದ್ರೂ ತರಕಾರಿ ದರ ಕಡಿಮೆಯಾಗಿದೆಯಾ ಎಂದರೆ ಮಾರುಕಟ್ಟೆಗೆ ಹೋದ್ರೆ ಮತ್ತೆ ದರ ಹೆಚ್ಚಾಗಿದೆ. ಇನ್ನು, ಬೀದಿ ಬದಿ ಮಾರಾಟ ಮಾಡುವವರ ಬಳಿ ತರಕಾರಿ ಇನ್ನೂ ಹೆಚ್ಚು ರೇಟಿದೆ. ಸಿಲಿಕಾನ್ ಸಿಟಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.  ಹಬ್ಬ ಮುಗಿದ್ರೂ ತರಕಾರಿ ರೇಟು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಕೊರೋನಾ ಸಂಕಷ್ಟದ ಸಮಯದಲ್ಲೂ ದಿನನಿತ್ಯ ಬಳಸುವ ತರಕಾರಿ ಬೆಲೆ ಗಗನಕ್ಕೇರಿದೆ. ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ನೋಡಿ.


ತರಕಾರಿಗಳ​​ ದರ ಪಟ್ಟಿ


ತರಕಾರಿ ಕಳೆದ ತಿಂಗಳ ಹಿಂದಿನ ದರ(ರೂಗಳಲ್ಲಿ)                 ಪ್ರಸ್ತುತ ದರ(ರೂಗಳಲ್ಲಿ)


ಈರುಳ್ಳಿ 20-30                                                                                           100-120


ಎಲೆಕೋಸು 20-30                                                                                      70-80


ಆಲೂಗಡ್ಡೆ 25-30                                                                                        50-60


ಟೊಮ್ಯಾಟೊ 10-20                                                                                     40-45


ಮೆಣಸಿನಕಾಯಿ30-40                                                                                  60-80


ಕಳೆದ ತಿಂಗಳು 20 ರಿಂದ 30 ರೂಪಾಯಿ ಇದ್ದ ಫಸ್ಟ್ ಕ್ವಾಲಿಟಿ ಈರುಳ್ಳಿ ಬೆಲೆ ಪ್ರಸ್ತುತ 100 ರಿಂದ 120 ರೂಪಾಯಿ ಆಗಿದೆ. ಸ್ವಲ್ಪ ಸಣ್ಣ ಈರುಳ್ಳಿ 80-100 ರೂಪಾಯಿಗೆ ಮಾರಾಟವಾಗ್ತಿದೆ. ಅದೇ ರೀತಿ ಮೊದಲು 30 ರಿಂದ 40 ರೂಪಾಯಿ ಇದ್ದ ಕ್ಯಾರೆಟ್ ಬೆಲೆ ಈಗ ಒಂದು ಕೆಜಿಗೆ 100ರಿಂದ 120ರೂಪಾಯಿಗೆ ಏರಿಕೆ ಆಗಿದೆ. ಕಳೆದ ವಾರ ಕೆಜಿಗೆ 20 ರಿಂದ 30ರೂಪಾಯಿಗೆ ಸಿಕ್ತಿದ್ದ ಎಲೆಕೋಸು ಸದ್ಯ 70ರಿಂದ 80ರೂಪಾಯಿಗೆ ಹೆಚ್ಚಳವಾಗಿದೆ.  ಕಳೆದ 15 ದಿನಗಳ ಹಿಂದೆ 25 ರಿಂದ 30 ರೂಪಾಯಿ ಇದ್ದ ಆಲೂಗಡ್ಡೆ ಬೆಲೆ ಕೆಜಿಗೆ 50 ರಿಂದ 60 ರೂಪಾಯಿ ಆಗಿದೆ. ಅದರ ಜತೆಗೆ ಕಳೆದ ವಾರ ಕೆಜಿಗೆ 10ರಿಂದ 20 ರೂಪಾಯಿ ಇದ್ದ ಟೊಮ್ಯಾಟೋ ಬೆಲೆ 40ರಿಂದ 45 ರೂಪಾಯಿಗೆ ಹೆಚ್ಚಳವಾಗಿದೆ.


ವಸತಿ ಯೋಜನೆ: ಗುಂಡ್ಲುಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಫಲಾನುಭವಿಗಳ ಪಟ್ಟಿ ತಯಾರು ಆರೋಪ


ಇನ್ನು ಯಶವಂತಪುರ ಹಾಗೂ ಕೆಆರ್ ಮಾರ್ಕೆಟ್​ನಲ್ಲಿ 10 ರಿಂದ 20 ರೂಪಾಯಿ ಕಡಿಮೆ ಇದೆ. ಉಳಿದಂತೆ ಬಿಡಿ ಅಂಗಡಿಗಳಲ್ಲಿ ತರಕಾರಿ ದರ ಇನ್ನಷ್ಟು ಹೆಚ್ಚಳವಾಗಿದೆ‌. ತರಕಾರಿ ದರ ಇನ್ನೂ ಕಡಿಮೆಯಾಗದೇ ಇರುವುದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಮಳೆಯಾಗಿದ್ದೇ ಕಾರಣವಾಗಿದೆ. ಅಲ್ಲಿನ ಅತಿವೃಷ್ಟಿ ತರಕಾರಿ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಈರುಳ್ಳಿ ಬೆಲೆ ಹಚ್ಚಾದ ಹಿನ್ನೆಲೆ ಹೋಟೆಲ್​ನವರು ಎಲೆಕೋಸನ್ನು ಹೆಚ್ಚು ಬಳಕೆ ಮಾಡೋಕೆ ಶುರು ಮಾಡಿದ್ರು. ಹೀಗಾಗಿ ಎಲೆಕೋಸಿನ ಬೆಲೆಯೂ ದುಬಾರಿಯಾಗಿದೆ.


ಮಳೆಯಿಂದ ಈರುಳ್ಳಿ ಬೆಲೆ ನಾಶವಾಗಿರುವ ಹಿನ್ನೆಲೆ ಹೊಸ ಈರುಳ್ಳಿ ಬರುವವರೆಗೂ ಈರುಳ್ಳಿ ಬೆಲೆಯೂ ಹೆಚ್ಚಾಗಿಯೇ ಇರುತ್ತದೆ ಎನ್ನಲಾಗುತ್ತಿದೆ. ಉತ್ಪಾದನೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರ್ತಿದೆ. ಅದೇ ರೀತಿ ಕೊತ್ತಂಬರಿ ಸೊಪ್ಪಿನ ಬೆಲೆಯೂ ಹೆಚ್ಚಾಗಿದ್ದು, ಹೆಚ್ಚು ಸರಕು ಬಂದ್ರೆ  ಕಂತೆ ಸೊಪ್ಪಿಗೆ 20 ರೂಪಾಯಿ. ಕಡಿಮೆ ಸೊಪ್ಪು ಬಂದು  ಒಂದು ಕಂತೆಗೆ 30 ರಿಂದ 40ರೂಪಾಯಿ ಇದೆ. ಹೀಗಾಗಿ ತರಕಾರಿ ಬೆಲೆ ಏರಿಕೆ ಕಂಡು ಜನ ಶಾಕ್ ಆಗಿದ್ದಾರೆ.


ಕೊರೋನಾ ಸಮಯದಲ್ಲಿ ಕೆಲಸವೂ ಇಲ್ಲ. ಇದೇ ವೇಳೆ ತರಕಾರಿ ಬೆಲೆಯೂ ಹೆಚ್ಚಾದ್ರೆ ಕಷ್ಟ ಅಂತಿದ್ದಾರೆ.ಈಗಾಗಲೇ ಕೊರೋನಾ ಬಳಿಕ ಜನ ತತ್ತರಿಸಿದ್ದಾರೆ. ಇದೇ ಸಮಯದಲ್ಲಿ ತರಕಾರಿ ಬೆಲೆಯೂ ದುಪ್ಪಟ್ಟಾಗಿದೆ. ಒಂದೆಡೆ ರೈತರು ಬೆಳೆಯ ನಾಶದ ಸಂಕಷ್ಟ ಎದುರಿಸುತ್ತಿದ್ದರೆ, ಇನ್ನೊಂದೆಡೆ ಗ್ರಾಹಕರು ಬೆಲೆ ಏರಿಕೆಯ ಬಿಸಿಯಲ್ಲಿ ತರಕಾರಿ ಖರೀದಿಸಬೇಕಿದೆ‌‌.

Published by:Latha CG
First published: