• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Onion Price | ಈರುಳ್ಳಿ ಬೆಳೆದ ರೈತರಿಗೂ ದರವಿಲ್ಲ, ಗ್ರಾಹಕರಿಗೂ ಕಡಿಮೆ ಬೆಲೆಗೆ ಸಿಗದೆ ಇಬ್ಬರಿಗೂ ಕಣ್ಣೀರು ತರಿಸುತ್ತಿದೆ

Onion Price | ಈರುಳ್ಳಿ ಬೆಳೆದ ರೈತರಿಗೂ ದರವಿಲ್ಲ, ಗ್ರಾಹಕರಿಗೂ ಕಡಿಮೆ ಬೆಲೆಗೆ ಸಿಗದೆ ಇಬ್ಬರಿಗೂ ಕಣ್ಣೀರು ತರಿಸುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ವ್ಯಾಪಾರಿಗಳು ಈರುಳ್ಳಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ ಎನ್ನಲಾಗಿದೆ. ಸರಕಾರ ಹಾಗು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತ ಹಾಗು ಗ್ರಾಹಕನ ಮಧ್ಯೆ ಲಾಭ ಮಾಡಿಕೊಳ್ಳುತ್ತಿರುವ ಮಧ್ಯವರ್ತಿಗಳನ್ನು ನಿಯಂತ್ರಿಸಿ ಇಬ್ಬರಿಗೂ ನ್ಯಾಯ ಒದಗಿಸಬೇಕಾಗಿದೆ.

  • Share this:

ರಾಯಚೂರು: ಈಗ ಈರುಳ್ಳಿ ಬೆಳೆದ ಬೆಳೆಗಾರ ಹಾಗೂ ಈರುಳ್ಳಿ ಖರೀದಿಸುವ ಗ್ರಾಹಕ ಇಬ್ಬರಿಗೂ ಕಣ್ಣೀರು ಬರುತ್ತಿದೆ. ಉತ್ತಮ ದರ ಇಲ್ಲ, ಉತ್ತಮ ಗುಣಮಟ್ಟದ ಈರುಳ್ಳಿ ಇಲ್ಲದೆ ರೈತರು ಖರ್ಚು ಮಾಡಿ ಬೆಳೆದ ಬೆಳೆಯನ್ನು ಅಡ್ಡಾದುಡ್ಡಿಗೆ ಮಾರಾಟ ಮಾಡಬೇಕಾಗಿದೆ. ಮಾರುಕಟ್ಟೆಗೆ ರೈತರ ಈರುಳ್ಳಿ ದರ ಇಳಿಕೆಯಾಗಿದೆ, ಕಡಿಮೆ ದರದಲ್ಲಿ ಈರುಳ್ಳಿ ಖರೀದಿಸಬೇಕೆಂದು ಬಂದಿದ್ದ ಗ್ರಾಹಕ ದುಬಾರಿ ಬೆಲೆ ತೆತ್ತು ಅನಿವಾರ್ಯವಾಗಿ ಖರೀದಿಸಬೇಕಾಗಿದೆ.


ರಾಯಚೂರು ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತನಿಗೆ ಈ ಬಾರಿ ಎರಡು ರೀತಿಯ ನಷ್ಟವಾಗಿದೆ. ಜಿಲ್ಲೆಯಲ್ಲಿ ಒಟ್ಟು 1447 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಈ ವರ್ಷ 40 ವರ್ಷದಲ್ಲಿಯೇ ಅತ್ಯಧಿಕ ಮಳೆಯಾಗಿದ್ದರಿಂದ ಈರುಳ್ಳಿ ಹೊಲದಲ್ಲಿಯೇ ಕೊಳೆತೆ ಹೋಗಿದೆ. ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಮಳೆಯ ಪಾಲಾಗಿದೆ. ಈ ಮಧ್ಯೆ ಅಳಿದುಳಿದ ಈರುಳ್ಳಿಯನ್ನು ಮಾರುಕಟ್ಟೆಗೆ ತಂದರೆ ಮಳೆಗೆ ಈರುಳ್ಳಿ ಕೊಳೆತಿದೆ ಎಂಬ ನೆಪ ಮಾಡಿಕೊಂಡು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಕಡಿಮೆ ದರಕ್ಕೆ ಮಾರಾಟ ಮಾಡಿದರೆ ನಷ್ಟವಾಗುತ್ತಿದೆ. ಆದರೆ ಇದನ್ನು ಇಟ್ಟುಕೊಳ್ಳಲು ಆಗದೆ ಅನಿವಾರ್ಯವಾಗಿ‌ ಮಾರಾಟ ಮಾಡಬೇಕಾಗಿದೆ.


ರಾಯಚೂರು ಎಪಿಎಂಸಿಯಲ್ಲಿ ಕಳೆದ ವರ್ಷ 15000 ರೂಪಾಯಿಯವರೆಗೂ ಮಾರಾಟವಾಗಿದ್ದ ಈರುಳ್ಳಿ ಈ ವರ್ಷ ಕೇವಲ 300-7000 ರೂಪಾಯಿಯವರೆಗೂ ಮಾರಾಟವಾಗಿದೆ, ಅಕ್ಟೋಬರ್ ಒಂದರಿಂದ ಇಲ್ಲಿಯವರೆಗೂ ಒಟ್ಟು 14673 ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿದೆ. ರಾಯಚೂರು ಮಾರುಕಟ್ಟೆಗೆ ರಾಯಚೂರು, ತೆಲಂಗಾಣ, ಆಂಧ್ರಪ್ರದೇಶದಿಂದ ಈರುಳ್ಳಿ ಬರುತ್ತಿದೆ. ಕಳೆದೊಂದು ವಾರದಿಂದ ಈರುಳ್ಳಿ ದರವು ರಾಯಚೂರು ಮಾರುಕಟ್ಟೆಯಲ್ಲಿ 300 ರೂಪಾಯಿಯಿಂದ 5610 ರೂಪಾಯಿ ಇದ್ದು ಸರಾಸರಿ 2020 ರೂಪಾಯಿಗೆ ಮಾರಾಟವಾಗುತ್ತಿದೆ. ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡುವುದರಿಂದ ರೈತ ನಷ್ಟ ಅನುಭವಿಸುತ್ತಿದ್ದಾನೆ. ಇನ್ನೊಂದು ಕಡೆ ತರಕಾರಿ ಖರೀದಿಸಲು ಬಂದ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ದುಬಾರಿ ದರಕ್ಕೆ ಖರೀದಿಸಬೇಕಾಗಿದೆ. ಈಗ ರಾಯಚೂರು ತರಕಾರಿ ವ್ಯಾಪಾರಿಗಳು ಕೆ.ಜಿ.ಗೆ 40-80 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.


ಇದನ್ನು ಓದಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಡಿಯೋ ಸಂವಾದ; ಕೋವಿಡ್ ನಿಯಂತ್ರಣದಲ್ಲಿ ರಾಜ್ಯದ ಕ್ರಮಕ್ಕೆ ಮೆಚ್ಚುಗೆ


ರೈತನಿಗೆ ಈರುಳ್ಳಿ ಕಡಿಮೆ ದರ ಸಿಗುತ್ತಿದೆ. ಇದರಿಂದ ತರಕಾರಿ ಮಾರುಕಟ್ಟೆಯಲ್ಲಿ ದರ ಇಳಿದಿರುತ್ತದೆ ಎಂದುಕೊಂಡು ಗ್ರಾಹಕ ಬಂದರೆ ಇಲ್ಲಿ ಮೊದಲಿನಂತೆ ದುಬಾರಿ ದರಕ್ಕೆ ಖರೀದಿಸಬೇಕಾಗಿದೆ. ಒಂದು ಕಡೆ ಗ್ರಾಹಕನಿಗೂ ಹೊರೆ, ಇನ್ನೊಂದು ಕಡೆ ರೈತನಿಗೂ ನಷ್ಟವಾಗಿ ಈರುಳ್ಳಿ ರೈತ ಹಾಗು ಗ್ರಾಹಕನ ಕಣ್ಣಲ್ಲಿ ನೀರು ತರಿಸುತ್ತಿದೆ.


ಈ ಮಧ್ಯೆ ಕೆಲವು ವ್ಯಾಪಾರಿಗಳು ಈರುಳ್ಳಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ ಎನ್ನಲಾಗಿದೆ. ಸರಕಾರ ಹಾಗು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತ ಹಾಗು ಗ್ರಾಹಕನ ಮಧ್ಯೆ ಲಾಭ ಮಾಡಿಕೊಳ್ಳುತ್ತಿರುವ ಮಧ್ಯವರ್ತಿಗಳನ್ನು ನಿಯಂತ್ರಿಸಿ ಇಬ್ಬರಿಗೂ ನ್ಯಾಯ ಒದಗಿಸಬೇಕಾಗಿದೆ.

Published by:HR Ramesh
First published: