ಎಕರೆಗೆ ಸರಾಸರಿ 250 ಚೀಲ ಈರುಳ್ಳಿ ಬೆಳೆ ಬರುತ್ತಿತ್ತು. ಆದರೆ, ಇದು ಈಗ 70 ಚೀಲಗಳಿಗೆ ಇಳಿಕೆ ಆಗಿದೆ. ಹೀಗಾಗಿ ಪೂರೈಕೆ ಕಡಿಮೆ ಆಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ.
ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ಬೆಳೆ ನೆಲಕಚ್ಚಿದೆ. ಹೀಗಾಗಿ ಈರುಳ್ಳಿ ಬೆಲೆ ಗಗನಕ್ಕೇರಲು ಆರಂಭವಾಗಿದೆ. ಈಗಾಗಲೇ ಕರ್ನಾಟಕದ ಬಹುತೇಕ ಭಾಗದಲ್ಲಿ ಈರುಳ್ಳಿ ಬೆಲೆ 60 ರೂಪಾಯಿ ಗಡಿ ದಾಟಿದ್ದು, ಕೆಲವೇ ದಿನಗಳಲ್ಲಿ ಈ ಬೆಲೆ 100ರ ಗಡಿ ದಾಟಿದೆ ಎನ್ನಲಾಗುತ್ತಿದೆ. ಮಂಗಳೂರಿನ ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ರೂಪಾಯಿ ಇದ್ದರೆ, ದೊಡ್ಡ ಈರುಳ್ಳಿ ಬೆಲೆ 85 ರೂಪಾಯಿ ದಾಟಿದೆ. ಮಂಗಳೂರಿನಲ್ಲೂ ಕೆಲವೇ ದಿನಗಳಲ್ಲಿ ಈರುಳ್ಳಿಯ ದರ ಹೆಚ್ಚಲಿದೆ ಎಂಬುದು ಮಾರುಕಟ್ಟೆ ಪಂಡಿತರ ಮಾತು.
ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದೆ. ಈ ವೇಳೆ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಬೆಳೆ ಹಾನಿಯಾಗಿದೆ. ಎಕರೆಗೆ ಸರಾಸರಿ 250 ಚೀಲ ಈರುಳ್ಳಿ ಬೆಳೆ ಬರುತ್ತಿತ್ತು. ಆದರೆ, ಇದು ಈಗ 70 ಚೀಲಗಳಿಗೆ ಇಳಿಕೆ ಆಗಿದೆ. ಹೀಗಾಗಿ ಪೂರೈಕೆ ಕಡಿಮೆ ಆಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ.
100ರ ಗಡಿ ದಾಟದಲಿದೆ ಈರುಳ್ಳಿ:
ಬೇಡಿಕೆ ಹೆಚ್ಚಿ ಪೂರೈಕೆ ಕಡಿಮೆ ಆದರೆ ಸಹಜವಾಗಿಯೇ ಈರುಳ್ಳಿ ಬೆಲೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100ರಿಂದ 150 ರೂಪಾಯಿ ಆಗಲಿದೆ ಎನ್ನುತ್ತಾರೆ ಈರುಳ್ಳಿ ವರ್ತಕರು.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ