ಹೋಟೆಲ್ ಉದ್ಯಮದ ಮೇಲೂ ಬರೆ ಎಳೆದ ಈರುಳ್ಳಿ; ಖಾದ್ಯಗಳ ಬೆಲೆ ಏರಿಕೆ ಅನಿವಾರ್ಯ ಎಂದ ಉದ್ಯಮಿಗಳು

ಕಿ.ಲೋ. ಈರುಳ್ಳಿಗೆ 140 ರೂ. ಇದ್ದು, ಅತ್ಯಂತ ಕಳಪೆ ಗುಣಮಟ್ಟದ ಈರುಳ್ಳಿಗೂ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರವಾಹದಿಂದಾಗಿ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಈಗ ಬೆಳೆದಿರುವ ಬೆಳೆ ಬರಲು ಇನ್ನು ಎರಡು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ಈರುಳ್ಳಿ ಬೆಲೆ 100 ರೂ. ಆಸುಪಾಸಿನಲ್ಲಿ ಇರಲಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. 

news18-kannada
Updated:November 29, 2019, 4:21 PM IST
ಹೋಟೆಲ್ ಉದ್ಯಮದ ಮೇಲೂ ಬರೆ ಎಳೆದ ಈರುಳ್ಳಿ; ಖಾದ್ಯಗಳ ಬೆಲೆ ಏರಿಕೆ ಅನಿವಾರ್ಯ ಎಂದ ಉದ್ಯಮಿಗಳು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದ್ದು, ಎಲ್ಲರ ಕಣ್ಣಲ್ಲೂ ಕಣ್ಣೀರು ಹಾಕಿಸುತ್ತಿದೆ. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರಿಗಷ್ಟೇ ಅಲ್ಲದೇ, ಹೋಟೆಲ್ ಉದ್ಯಮದ  ಮೇಲೂ ಗಂಭೀರ ಪರಿಣಾಮ ಬೀರಿದೆ.

ಬೆಲೆ ಏರಿಕೆಯಿಂದಾಗಿ ಹೋಟೆಲ್​ಗಳಲ್ಲಿ ಈರುಳ್ಳಿ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಕೆಲವು ಹೋಟೆಲ್​ಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸಿ ಮಾಡುವ ಖಾದ್ಯಗಳನ್ನು ತಯಾರಿಸುವುದನ್ನೇ ಬಿಟ್ಟಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಬೆಲೆ ಏರಿಕೆ ಅನಿವಾರ್ಯವಾಗಲಿದೆ ಎಂದು ಹೋಟೆಲ್​ ಉದ್ಯಮಿಗಳು ಹೇಳಿದ್ದಾರೆ.

ಇನ್ನು ದಿನಬಳಕೆಯಲ್ಲಿ ಪ್ರಮುಖವಾಗಿರುವ ಈರುಳ್ಳಿಗೆ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಯಿಂದಾಗಿ ಎಲ್ಲರೂ ಈರುಳ್ಳಿ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.

ಕಿ.ಲೋ. ಈರುಳ್ಳಿಗೆ 140 ರೂ. ಇದ್ದು, ಅತ್ಯಂತ ಕಳಪೆ ಗುಣಮಟ್ಟದ ಈರುಳ್ಳಿಗೂ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರವಾಹದಿಂದಾಗಿ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಈಗ ಬೆಳೆದಿರುವ ಬೆಳೆ ಬರಲು ಇನ್ನು ಎರಡು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ಈರುಳ್ಳಿ ಬೆಲೆ 100 ರೂ. ಆಸುಪಾಸಿನಲ್ಲಿ ಇರಲಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಇದನ್ನು ಓದಿ: ಬಡವರಿಗೆ ಉಚಿತವಾಗಿ ಈರುಳ್ಳಿ ಹಂಚಿಕೆ; ಚಿನ್ನ ಕೊಟ್ಟಿದ್ದಕ್ಕಿಂತ ಹೆಚ್ಚು ಖುಷಿಯಾದ ಜನರು!

First published: November 29, 2019, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading