Chitradurga: ಈರುಳ್ಳಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು! ಈ ಬಾರಿಯೂ ನಷ್ಟವೇ?

ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಈರುಳ್ಳಿ ಬೆಳೆದ ರೈತರು ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದ ತೋಟಗಾರಿಕೆ ಅಧಿಕಾರಿಗಳು ಅವರ ಕಷ್ಟದ ಬದುಕಿನ ಕಡೆ ತಿರುಗಿಯೂ ನೋಡಿಲ್ಲ. ಇತ್ತ ನಷ್ಟದಲ್ಲಿರೋ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಾದ್ರು ಕೊಟ್ಟು ಸರ್ಕಾರ ನೆರವಾಗಬೇಕು ಅಂತ ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಏ.24): ಬೆವರು ಸುರಿಸಿ ಮೈ ಬಗ್ಗಿಸಿ ದುಡಿದ್ರೆ ಭಗವಂತ ಬಂಗಾರದ ಬೆಳೆ ಕರುಣಿಸ್ತಾನೆ ಎನ್ನುತ್ತಾರೆ. ಚಿತ್ರದುರ್ಗ ಜಿಲ್ಲೆಯ ರೈತರು ಬೋರ್ವೆಲ್ ಆಶ್ರಯಿಸಿ ಈರುಳ್ಳಿ ಬೆಳೆದಿದ್ದರು. ನಿರೀಕ್ಷೆಯಂತೆ ಬೆಳೆ ಬಂಗಾರದಂತೆ ಬಂದಿದ್ದು ಬೆಲೆ ಕೈ ಕೊಟ್ಟಿದೆ. ಪಟ್ಟ ಪರಿಶ್ರಮಕ್ಕೆ ಲಾಭ ಸಿಗುತ್ತದೆ ಅನ್ನೋ ನಿರೀಕ್ಷೆಯಲ್ಲಿದ್ದ ನೂರಾರು ಅನ್ನದಾತರು ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲು ಮಾಡಿದ ಈರುಳ್ಳಿ ಚೀಲಕ್ಕೆ ತುಂಬಿಟ್ಟು ಮಾರಲೂ ಆಗದೆ ರಕ್ಷಣೆ ಮಾಡಲೂ ಆಗದೆ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದಲ್ಲಿ ಇಡೀ ಊರಿನ ಅರ್ಧದಷ್ಟು ರೈತರು ಈರುಳ್ಳಿ ಬೆಳೆದಿದ್ದಾರೆ.

ಕಳೆದ ಮಳೆಗಾಲದಲ್ಲಿ ಬೆಳೆದಿದ್ದ ಈರುಳ್ಳಿ ನೀರಲ್ಲಿ ನೆನೆದು ಕೊಳತು ಹೋಗಿತ್ತು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭಸಿದ್ದ ಒಬ್ಬೊಬ್ಬ ರೈತರು ನೋವನ್ನ ಸಹಿಸಿ ಮತ್ತೆ ಹುಮ್ಮಸ್ಸಿನಿಂದ ಈರುಳ್ಳಿ ಬೆಳೆಯೋಕೆ ಫ್ಲಾನ್ ಮಾಡಿದ್ದರು.

ಬೋರ್ವೆಲ್ ನೀರಾವರಿ ಆಶ್ರಯಿಸಿ ಈರುಳ್ಳಿ ಬೆಳೆ

ಅದರಂತೆ ಮಳೆಗಾಲ ಕಳೆದ ಕೂಡಲೆ ನಷ್ಟಕ್ಕೆ ಎದೆಗುಂದದೆ ಮತ್ತೆ ಉಳುಮೆ ಮಾಡಿ ಬೋರ್ವೆಲ್ ನೀರಾವರಿ ಆಶ್ರಯಿಸಿ ಈರುಳ್ಳಿ ಬೆಳೆ ಹಾಕಿದ್ದಾರೆ. ನಷ್ಟವನ್ನ ಲಾಭವಾಗಿ ಪರಿವರ್ತನೆ ಮಾಡೋಕೆ ಹಗಲು ರಾತ್ರಿ ಎನ್ನದೆ ರಾತ್ರಿ ನಿದ್ದೆಗೆಟ್ಟು ಬೆಳೆಗೆ ನೀರಾಯಿಸಿ, ಕಾಲಕಾಲಕ್ಕೆ ಗೊಬ್ಬರ, ಔಷಧಿ ಹಾಕಿ ಉಪಚರಿಸಿ, ಕಳೆ ತೆಗೆಸಿ ಪಡಬಾರದ ಕಷ್ಟ ಅನುಭವಿಸಿ ದುಡಿದ್ದಾರೆ.

ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ದಿಢೀರ್ ಕುಸಿತ

ಅದರ ಫಲ ಉತ್ತಮ ಇಳುವರಿಯಾಗಿ ಈರುಳ್ಳಿ ಬೆಳೆದಿದ್ದಾರೆ. ಆದರೇ ಅವರ ದುರಾದೃಷ್ಟವೋ ಏನೋ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಯಾಕಂದ್ರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ದಿಡೀರ್ ಕುಸಿತ ಕಂಡಿದೆ. ರೈತ ಒಂದು ಎಕರೆಗೆ 50-80 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದು, ಈಗ 150-20 ಪ್ಯಾಕೇಟ್ ಈರುಳ್ಳಿ ಇಳುವರಿ ಬಂದಿದೆ.

ಇದನ್ನೂ ಓದಿ: Hubballi Riots: ಎಐಎಂಐಎಂ ಕಾರ್ಪೊರೇಟರ್ ನಜೀರ್ ಬಂಧನ - ವಸೀಂ ಪಠಾಣ್ ಗೆ ಮುಂದುವರಿದ ಡ್ರಿಲ್

ಆದರೇ ಈಗ ಬೆಲೆ ಒಂದು ಪ್ಯಾಕೇಟ್ ಗೆ ಕೇವಲ 200-400ಕ್ಕೆ ಇಳಿದಿದೆ‌. ಒಂದು ವೇಳೆ ಈಗಿನ ಬೆಲೆಗೆ ಮಾರಟ ಮಾಡಿದ್ರೆ 50 ಸಾವಿರ ಸಿಗುವುದು ಹೆಚ್ಚಿನ ಮಾತು. ಇದರಿಂದ ಎದೆಯೊಡೆದಿರೋ ರೈತರು ಕಡಿಮೆ ಬೆಲೆಗೆ ಈರುಳ್ಳಿ ಮಾರಲಾಗದೆ, ಚೀಲಕ್ಕ್ಕೆ ತುಂಬಿದ ಸಾವಿರಾರು ಪ್ಯಾಕೇಟ್ ಈರುಳ್ಳಿಯನ್ನ ಜಮೀನಲ್ಲಿಯೇ ಬಿಟ್ಟು ರಕ್ಷಣೆ ಮಾಡುತ್ತಿದ್ದಾರೆ.

ಅಕಾಲಿಕ ಮಳೆಗೆ ನೆನೆದ ಈರುಳ್ಳಿ

ಅನ್ನದಾತನಿ ಅದ್ಯಾವ ಗ್ರಹಚಾರವೋ ಏನೋ ಮೊನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗೆ ಈರುಳ್ಳಿ ನೆಂದು ಕೊಳೆತು ಹೋಗುತ್ತಿವೆ. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಭಾರಿ ಕಷ್ಟದ ಪರಿಸ್ಥಿಯಲ್ಲಿದ್ದಾನೆ. ಕನಿಷ್ಠ ಬೆಲೆಯೂ ಸಿಗದೆ ಹಾಕಿದ ಬಂಡವಾಳವೂ ಬಾರದೆ ಸಾಲದ ಶೂಲಕ್ಕೆ ಸಿಗುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ, ನಾಗಾಲ್ಯಾಂಡ್​ನಿಂದಲೂ KGF 2 ಶೂಟಿಂಗ್ ಸ್ಥಳ ನೋಡಲು ಕೋಲಾರಕ್ಕೆ ಬರ್ತಿದ್ದಾರೆ ಫ್ಯಾನ್ಸ್, ಟೂರಿಸ್ಟ್ ಪ್ಲೇಸ್ ಮಾಡುವಂತೆ ಮನವಿ

ಜಿಲ್ಲೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಈರುಳ್ಳಿ ಬೆಳೆದ ರೈತರು  ಇಷ್ಟೆಲ್ಲಾ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದರು ತೋಟಗಾರಿಕೆ ಅಧಿಕಾರಿಗಳು ಅವರ ಕಷ್ಟದ ಬದುಕಿನ ಕಡೆ ತಿರುಗಿಯೂ ನೋಡಿಲ್ಲ. ಇತ್ತ ನಷ್ಟದಲ್ಲಿರೋ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಾದ್ರು ಕೊಟ್ಟು ಸರ್ಕಾರ ನೆರವಾಗಬೇಕು ಅಂತ ಮನವಿ ಮಾಡಿದ್ದಾರೆ. ಅನ್ನದಾಯನ ಹೆಸರಲ್ಲಿ ಸರ್ಕಾರ ನಡೆಸೋ ಜನಪ್ರತಿನಿಧಿಗಳು ಇತ್ತ ಕಣ್ಣುಬಿಟ್ಟು ನೋಡಿ ರೈತರನ್ನ ಕಷ್ಟದಿಂದ ಪಾರು ಮಾಡಬೇಕಿದೆ.
Published by:Divya D
First published: