ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಂದ ಈರುಳ್ಳಿಗೆ ಕೊಳೆ ರೋಗ; ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರರು

ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಈರುಳ್ಳಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬರೆ ಎಳೆದಂತಾಗಿದೆ. ಚಿತ್ರದುರ್ಗ  ಜಿಲ್ಲೆಯ  ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ನೂರಾರು ಎಕರೆ ಈರುಳ್ಳಿ ಬೆಳೆಯುತ್ತಾರೆ. ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯುವುದು ಕೂಡಾ ಈ ಭಾಗದ ಗ್ರಾಮಗಳೇ.

news18-kannada
Updated:August 14, 2020, 10:33 AM IST
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಂದ ಈರುಳ್ಳಿಗೆ ಕೊಳೆ ರೋಗ; ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರರು
ಕೊಳೆತು ಹೋಗಿರುವ ಈರುಳ್ಳಿ
  • Share this:
ಚಿತ್ರದುರ್ಗ(ಆ.08): ಕೋಟೆನಾಡು ಚಿತ್ರದುರ್ಗದ ಅನ್ನದಾತ, ಕಳೆದ ಹತ್ತಾರು ವರ್ಷಗಳಿಂದ ಅನಾವೃಷ್ಠಿ ಬಂದು ಬರಕ್ಕೆ ತುತ್ತಾಗಿದ್ದ. ಆದರೆ ಕಳೆದ ತಿಂಗಳಿಂದ ಸುರಿದ ಬಾರಿ ವರ್ಷಧಾರೆಗೆ, ಈ ಬಾರಿ ಈರುಳ್ಳಿ ಬೆಳೆದ ರೈತರು ತತ್ತರಿಸಿದ್ದಾರೆ. ಭಾರೀ ಮಳೆಯಿಂದ ರೈತರ ನೂರಾರು ಎಕರೆ ಈರುಳ್ಳಿ ಬೆಳೆ ಹಾನಿಯಾಗಿದೆ.

ಜಿಲ್ಲೆಯ ಈರುಳ್ಳಿ ಬೆಳೆಗಾರರು ಈ ಬಾರಿ ಅತಿವೃಷ್ಠಿಯಿಂದ ಕಂಗಲಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ದಶಕಗಳಿಂದ ಮಳೆಯಿಲ್ಲದೇ ಸತತ ಬರಗಾಲಕ್ಕೆ ತುತ್ತಾಗಿ ಬರದ ಹಣೆಪಟ್ಟಿ ಕಟ್ಟಿಕೊಂಡಿದೆ. ಅದ್ಯಾವ ದೇವರ ವರವೋ ಏನೋ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಆದರೆ ಮಳೆ ಬಂದ ಸಂತಸದಲ್ಲಿದ್ದ  ಈರುಳ್ಳಿ ಬೆಳೆದ ರೈತರು, ಮಳೆ ಹೆಚ್ಚಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾಕಂದ್ರೆ ಈ ಬಾರಿ ಸುರಿಯುತ್ತಿರುವ ನಿರಂತರ ಮಳೆಯಿಂದ ಈರುಳ್ಳಿ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ರೈತರಿಗೆ ಕೈಕೊಟ್ಟಿವೆ.

ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಈರುಳ್ಳಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬರೆ ಎಳೆದಂತಾಗಿದೆ. ಚಿತ್ರದುರ್ಗ  ಜಿಲ್ಲೆಯ  ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ನೂರಾರು ಎಕರೆ ಈರುಳ್ಳಿ ಬೆಳೆಯುತ್ತಾರೆ. ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯುವುದು ಕೂಡಾ ಈ ಭಾಗದ ಗ್ರಾಮಗಳೇ.

Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ

ಕಳೆದ ಬಾರಿ ಮಳೆ ಕೈಕೊಟ್ಟರೂ ಕೂಡಾ ನೂರಾರು ಎಕರೆ ಈರುಳ್ಳಿ ಬೆಳೆಯುವ ಮೂಲಕ ಇಲ್ಲಿನ ರೈತರು ಲಕ್ಷಾಂತರ ಹಣ ಲಾಭ ಗಳಿಸಿದ್ದರು. ಆದ್ರೆ ಈ ಬಾರಿ ಸುರಿದ ಬಾರಿ ಮಳೆಗೆ ಇಲ್ಲಿನ ರೈತರು ಅಕ್ಷರಶಃ ಕಂಗಲಾಗಿದ್ದಾರೆ. ನಿರಂತರ ಮಳೆಗೆ  ನೂರಾರು ಎಕರೆ ಈರುಳ್ಳಿ ಹಾನಿಗೀಡಾಗಿದೆ. ಈ ಬಾರಿ ನೂರಾರು ಎಕರೆ ಈರುಳ್ಳಿಗೆ ಕೊಳೆ ರೋಗ ಬಿದಿದ್ದು, ಇದ್ರಿಂದ ಬಂಡವಾಳ ಹೂಡಿಕೆ ಮಾಡಿದ್ದ ರೈತರು ಪೇಚಿಗೆ ಸಿಲುಕಿದ್ದಾರೆ.

ಪ್ರತಿ ವರ್ಷ ಮಳೆ ಇಲ್ಲದೆ ಬೋರ್​ವೆಲ್​​ಗಳ ಆಶ್ರಯದಲ್ಲಿ ಈರುಳ್ಳಿ ಬೆಳೆಯುತ್ತಿದ್ದ ಬಹುತೇಕ ರೈತರು, ಈ ಬಾರಿಯ ನಷ್ಟಕ್ಕೆ ತತ್ತರಿಸಿದ್ದು, ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಅಲ್ಲದೆ ಕೊಳೆತ ರೋಗದಿಂದ ಹಾಕಿದ ಬಂಡವಾಳ ವಾಪಸ್ ಬರುತ್ತದೋ ಇಲ್ಲವೋ ಎನ್ನುವ ಯೋಚನೆಯಿಂದ  ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಾರಿ ಈರುಳ್ಳಿ ಬಿತ್ತನೆ ಬೀಜದ ಬೆಲೆ ಗಗನಕ್ಕೇರಿದ್ದು, ಸಾಲ ಸೂಲ ಮಾಡಿ  ಬೀಜ ಗೊಬ್ಬರ ಕೊಂಡು ಬಿತ್ತನೆ ಮಾಡಿದ್ದರು. ಅಲ್ಲದೇ ಈಗಾಗಲೇ ಒಂದು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆ ಬೆಳೆಯೋಕೆ 25 ರಿಂದ 40 ಸಾವಿರ ಹಣವನ್ನ ಖರ್ಚು ಮಾಡಿದ್ದಾರೆ.

ಪ್ರಾರಂಭದಲ್ಲಿ ಮಳೆ ಇಲ್ಲದೇ ಇದ್ದರೂ ಕಷ್ಟ ಪಟ್ಟು ಶ್ರಮವಹಿಸಿದ್ದ ರೈತರು, ಕೊಳವೆ ಬಾವಿ ನೀರಲ್ಲೇ ಉತ್ತಮ ಬೆಳೆ ಬೆಳೆದಿದ್ರು. ಆದರೆ ಇನ್ನೇನು ಬೆಳೆ ಕೈ ಸೇರಬೇಕು ಅನ್ನುವಷ್ಟರಲ್ಲಿ, ಸುರಿಯುತ್ತಿರುವ ಮಳೆಯಿಂದ ನಿಜಕ್ಕೂ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ  ಈರುಳ್ಳಿ ಬೆಳೆ ಈಗ ಗೆಡ್ಡೆ ಕಟ್ಟುವ ಸಂದರ್ಭದಲ್ಲಿ  ಹೆಚ್ಚು ಮಳೆ ಬಂದಿದ್ದು 75ರಿಂದ80 % ನಷ್ಟು ಬೆಳೆ ಕೊಳೆತು ಹೋಗುತ್ತಿದೆ. ನೂರಾರು ಎಕರೆ ಈರುಳ್ಳಿ ಬೆಳೆ ಕೊಳೆಯುತ್ತಿದ್ದು, ಸಾಲಮಾಡಿ ಬೆಳೆದಿದ್ದ ಅನ್ನದಾತರ ಪಾಡು ಹೇಳತೀರದಾಗಿದೆ. ಇದ್ರಿಂದ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳ ರೈತರಿಗೆ ರಾಜ್ಯ ಸರ್ಕಾರ ನೆರವಿಗೆ ಬರಬೇಕು,  ಪರಿಹಾರ ನೀಡ್ಬೇಕು ಅಂತ ರೈತರು ಮನವಿ ಮಾಡಿದ್ದಾರೆ.

ಪ್ರತಿ ಬಾರಿ ಮಳೆ ಇಲ್ಲದೆ ಅನಾವೃಷ್ಠಿಯಿಂದ ನರಳುತ್ತಿದ್ದ ರೈತರಿಗೆ ಬಯಸಿದ ಮಳೆಯೇ ಶತ್ರು ಆದಂತಾಗಿದೆ. ಸಾವಿರಾರು ಲೋಡ್ ಈರುಳ್ಳಿ ಬೆಳೆಯಬೇಕಿದ್ದ , ನೂರಾರು ಎಕರೆ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಇದ್ರಿಂದ ಸಾಲದ ಜೊತೆ ಸಾಲ ಹೆಚ್ಚಾಗುತ್ತಿದ್ದು, ಈರಳ್ಳಿ ಬೆಳೆ ಕೈಕೊಟ್ಟಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Published by: Latha CG
First published: August 14, 2020, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading