ಹುಬ್ಬಳ್ಳಿಯಲ್ಲಿ ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶ; ರೈತನ ಕಣ್ಣಲ್ಲಿ ನೀರು

ಒಂದೆಡೆ ಹುಬ್ಬಳ್ಳಿ ಎಪಿಎಮ್‌ಸಿಗೆ ಹೊರ ರಾಜ್ಯಗಳಿಂದ ಪೂರೈಕೆ ಆಗುತ್ತಿರುವ ಈರುಳ್ಳಿ ದರ ಗಗನಕ್ಕೇರಿದೆ. ಇನ್ನೊಂದೆಡೆ ಸ್ಥಳೀಯ ರೈತರು ಬೆಳೆದ ಈರುಳ್ಳಿ ಹೊಲದಲ್ಲೇ ಕೊಳೆತು ನಿಂತಿದೆ. ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಸುತ್ತಮುತ್ತ ಈರುಳ್ಳಿ ಬೆಳೆದಿದ್ದ ರೈತರು ಅತಿವೃಷ್ಟಿಯ ಹೊಡೆತಕ್ಕೆ ಕಂಗೆಟ್ಟಿದ್ದಾರೆ.

ಕೊಳೆತು ಹೋಗಿರುವ ಈರುಳ್ಳಿ

ಕೊಳೆತು ಹೋಗಿರುವ ಈರುಳ್ಳಿ

  • Share this:
ಹುಬ್ಬಳ್ಳಿ(ಅ.23): ಹುಬ್ಬಳ್ಳಿಯಲ್ಲಿ ಈರುಳ್ಳಿ ಬೆಳೆದಿದ್ದ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಅತಿವೃಷ್ಟಿಗೆ ಈರುಳ್ಳಿ ಬೆಳೆ ಸರ್ವನಾಶವಾಗಿದೆ. ವರುಣನ ಆರ್ಭಟಕ್ಕೆ ಹೊಲದಲ್ಲಿಯೇ ಬೆಳೆಯಲ್ಲಾ ಕೊಳೆತು ಹೋಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಈರುಳ್ಳಿ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತರು ದಿಕ್ಕೆಟ್ಟಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಬಿತ್ತಿ, ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿ ಇನ್ನೇನು ಫಸಲು ಬಂತು ಅನ್ನೋವಾಗಲೇ ಮಳೆರಾಯ ರುದ್ರ ನರ್ತನ ತೋರಿಸಿದ್ದು, ಈರುಳ್ಳಿ ಬೆಳೆಗಾರರ ಬದುಕು ತತ್ತರಿಸಿ ಹೋಗಿದೆ. ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಬೆಳೆ ಬೆಳೆದಿದ್ದ ಅನ್ನದಾತರು ಕಣ್ಣೆದುರೇ ಎಲ್ಲಾ ಹಾಳಾದದ್ದನ್ನು ಕಂಡು ಕಣ್ಣೀರಿಟ್ಟಿದ್ದಾರೆ. ನ್ಯೂಸ್ 18 ಬಳಿ ಸಂಕಷ್ಟ ತೋಡಿಕೊಂಡು ಕಣ್ಣೀರು ಸುರಿಸಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದುವರೆಗೂ ಸ್ಥಳ ಪರಿಶೀಲನೆ ನಡೆಸಿಲ್ಲ.

ಒಂದೆಡೆ ಹುಬ್ಬಳ್ಳಿ ಎಪಿಎಮ್‌ಸಿಗೆ ಹೊರ ರಾಜ್ಯಗಳಿಂದ ಪೂರೈಕೆ ಆಗುತ್ತಿರುವ ಈರುಳ್ಳಿ ದರ ಗಗನಕ್ಕೇರಿದೆ. ಇನ್ನೊಂದೆಡೆ ಸ್ಥಳೀಯ ರೈತರು ಬೆಳೆದ ಈರುಳ್ಳಿ ಹೊಲದಲ್ಲೇ ಕೊಳೆತು ನಿಂತಿದೆ. ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಸುತ್ತಮುತ್ತ ಈರುಳ್ಳಿ ಬೆಳೆದಿದ್ದ ರೈತರು ಅತಿವೃಷ್ಟಿಯ ಹೊಡೆತಕ್ಕೆ ಕಂಗೆಟ್ಟಿದ್ದಾರೆ.

ಎಂಟು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದೆ. ಬೀಜ, ಗೊಬ್ಬರ ಮತ್ತು ಕೀಟನಾಶಕ ಸೇರಿದಂತೆ ಕೃಷಿ ಕಾರ್ಮಿಕರ ಸಂಬಳಕ್ಕೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗಿತ್ತು. ಆದರೆ ಒಂದು ರೂಪಾಯಿ ಕೂಡ ಆದಾಯ ಬಂದಿಲ್ಲ. ಈರುಳ್ಳಿ ಎಲ್ಲಾ ಹೊಲದಲ್ಲೇ ಕೊಳೆತು ಹೋಗಿದ್ದು, ಅದನ್ನು ಕಿತ್ತು ಹೊಲ‌ ಸ್ವಚ್ಛ ಮಾಡಲು ಮತ್ತೆ ಸಾಲ‌ ಮಾಡಬೇಕಿದೆ ಎಂದು ಕಿರೇಸೂರು ಗ್ರಾಮದ ರೈತ ಗುರು ರಾಯನಗೌಡರ್ ತಮ್ಮ ನೋವು ಹೇಳಿಕೊಂಡಿದ್ದಾರೆ.

ಭಾರತದಲ್ಲಿ 147 ರೂಗೆ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್? 50 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

ಆನ್‌ಲೈನ್ ಪಾಠಕ್ಕೆ ಹುಬ್ಬಳ್ಳಿಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳ ಅಪಸ್ವರ

ಆನ್‌ಲೈನ್ ಪಾಠಕ್ಕೆ ಹುಬ್ಬಳ್ಳಿಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ನಿರಂತರವಾಗಿ ಮೊಬೈಲ್ ನೋಡುವುದರಿಂದ ಕಣ್ಣು ಉರಿಯುತ್ತೆ. ಕೈಲಿ ಮೊಬೈಲ್‌ ಹಿಡಿದು ನರಗಳ ಸೆಳೆತ ಉಂಟಾಗುತ್ತೆ. ತಲೆ, ಕಿವಿಯಲ್ಲಿ ಸತತ ನೋವು ಕಾಣಿಸಿಕೊಳ್ಳುತ್ತಿದೆ. ಬಹಳಷ್ಟು ‌ಸದರ್ಭಗಳಲ್ಲಿ ಆನ್‌ಲೈನ್ ಪಾಠಗಳು ಅರ್ಥವಾಗಲ್ಲಾ ಎಂದು ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನೆಟ್​​ವರ್ಕ್​​ ಸಿಗದಿದ್ದಾಗ ವಿದ್ಯಾರ್ಥಿಗಳು ಟೆನ್ಷನ್ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಹಾಗೂ ಪಾಲಕರಿಗೆ ಸಾಕಷ್ಟು ಮಾನಸಿಕ ಕಿರುಕುಳವಾಗುತ್ತಿದೆ. ಆನ್​ಲೈನ್​ ಶಿಕ್ಷಣದ ಬದಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಸರ್ಕಾರ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸುತ್ತಿದ್ದಾರೆ.
Published by:Latha CG
First published: