BBMP: ಮೋದಿ ಬಂದು ಹೋದ 1 ವಾರಕ್ಕೆ ಮತ್ತೊಂದು ಕಡೆ ಕಿತ್ತು ಹೋಗಿದೆ ರಸ್ತೆ ಡಾಂಬರು

ಈಗ ಕೆಂಗೇರಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲೇ ರಸ್ತೆ ಮೇಲಿನ ಡಾಂಬರು ಕಿತ್ತು ಬಂದಿತ್ತು. ಇದೇ ಮಾರ್ಗದ ಮೂಲಕ ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್ ಗೆ ಮೋದಿ ಓಡಾಡಿದ್ದರು. ಈಗ ಮೋದಿ ಓಡಾಡಿದ ಒಂದೇ ವಾರಕ್ಕೆ ರಸ್ತೆ ಡಾಂಬರು ಕಿತ್ತು ಹೋಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ 28): ಜೂನ್ 20ಕ್ಕೆ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಬಂದಿದ್ದರು. ಬಂದವರೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೈಸೂರಿಗೆ (Mysuru) ಹೋದರು. ಮೋದಿ ಬರುವ ಹಿನ್ನೆಲೆ ಬಿಬಿಎಂಪಿ ರಸ್ತೆಗಳಿಗೆಲ್ಲಾ ಡಾಂಬರು ಹಾಕಿ ಶೃಂಗಾರ ಮಾಡಿತ್ತು. ಆದರೆ ಮೋದಿ ಬಂದು ಹೋದ ಮೂರೇ ದಿನಕ್ಕೆ ಡಾಂಬರು ಕಿತ್ತು ಬಂದಿತ್ತು. ಇದೀಗ ಒಂದು ವಾರದ ಬಳಿಕ ಮತ್ತೊಂದು ಕಡೆಯ ಡಾಂಬರು ಕಿತ್ತು ಬಂದಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ (News18 kannada) ಸವಿಸ್ತಾರವಾದ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ ಒಂದೇ ಗಂಟೆಯೊಳಗೆ ಬಿಬಿಎಂಪಿ ಅಧಿಕಾರಿಗಳು (BBMP Officer) ಸ್ಥಳಕ್ಕೆ ಬಂದು ಡಾಂಬರೀಕರಣ ಮಾಡಿ ಹೊರಟಿದ್ದಾರೆ. 

ನ್ಯೂಸ್ 18 ಕನ್ನಡದ ವರದಿ ಪ್ರಸಾರ ಆದ ಒಂದೇ ತಾಸಿಗೆ ಮರು ಡಾಂಬರೀಕರಣ !

ಪ್ರಧಾನಿ ಮೋದಿ ನಗರಕ್ಕೆ ಬಂದು ಹೋದ ಮೂರೇ ದಿನಕ್ಕೆ ಜ್ಞಾನಭಾರತಿಯ ಮರಿಯಪ್ಪನಪಾಳ್ಯದಲ್ಲಿ ರಸ್ತೆ ಮೇಲಿನ ಡಾಂಬರು ಕಿತ್ತು ಬಂದಿತ್ತು. ಇದು ರಾಷ್ಟ್ರ ವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಅದಾಗಿ ಈ ಸಂಬಂಧ ಪ್ರಧಾನಿ ಕಚೇರಿಯಿಂದ ಕಾರಣ ಕೇಳಿ ವರದಿಗೆ ಸೂಚಿಸಿತ್ತು.

ಇದನ್ನೂ ಓದಿ: KSRTC Bus Pass: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​; KSRTCಯಿಂದ ಬಸ್​ ಪಾಸ್​ ಅವಧಿ ವಿಸ್ತರಣೆ 

ಅದರ ವರದಿ ಸಲ್ಲಿಸಿದ ಮರು ದಿನವೇ ಮೋದಿ ಬಂದು ಓಡಾಡಿದ ಮತ್ತೊಂದು ರಸ್ತೆಯ ಡಾಂಬಾರು ಕೂಡ ಕಿತ್ತು ಬಂದಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ಸವಿಸ್ತಾರವಾದ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ ಒಂದೇ ಗಂಟೆಯೊಳಗೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಡಾಂಬರೀಕರಣ ಮಾಡಿ ಹೊರಟಿದ್ದಾರೆ.

ಕೆಂಗೇರಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಮೋದಿ ಓಡಾಡಿದ ರಸ್ತೆಯ ಡಾಂಬರು ಕಳಪೆ !

ಮರಿಯಪ್ಪನಪಾಳ್ಯದಲ್ಲಿ ಅದ್ಯಾವಾಗ ರಸ್ತೆ ಟಾರು ಕಿತ್ತು ಬಂತೋ ಆಗಲೇ ಪಾಲಿಕೆ‌ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟೀಸ್, ಗುತ್ತಿಗೆದಾರರಿಗೆ ದಂಡ ಹಾಕಿ ಮೋದಿ ಆ ರಸ್ತೆಯಲ್ಲೇ ಓಡಾಡಿಲ್ಲ ಅಂತ ಪಾಲಿಕೆ ನುಣುಚಿಕೊಂಡಿತ್ತು. ಅದರ ಬಿಸಿ ಮಾಸುವ ಮುನ್ನವೇ ಈಗ ಕೆಂಗೇರಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲೇ ರಸ್ತೆ ಮೇಲಿನ ಡಾಂಬರು ಕಿತ್ತು ಬಂದಿತ್ತು. ಇದೇ ಮಾರ್ಗದ ಮೂಲಕ ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್ ಗೆ ಮೋದಿ ಓಡಾಡಿದ್ದರು. ಈಗ ಮೋದಿ ಓಡಾಡಿದ ಒಂದೇ ವಾರಕ್ಕೆ ರಸ್ತೆ ಡಾಂಬರು ಕಿತ್ತು ಬಂದಿದೆ. ಆದರೆ ರಾತ್ರೋ ರಾತ್ರಿ ಪಾಲಿಕೆ ಪ್ಯಾಚ್ ವರ್ಕ್ ಮಾಡಿ, ಈ ರಸ್ತೆ BMRCL ಅಧೀನದಲ್ಲಿದೆ ಅಂತ ಇದರಿಂದಲೂ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ: Kumaraswamy Tweet: ಬಿಜೆಪಿ ಅಂದ್ರೆ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳದ ಹಿಂದಿನ ಹುನ್ನಾರ ಏನು? ಬಿಜೆಪಿಗೆ HDK ಸಾಲು ಸಾಲು ಪ್ರಶ್ನೆ

ಮೋದಿ ಬರ್ತಾರೆ ಅಂತ ಕೊಮ್ಮಘಟ್ಟದಿಂದ ವೇಸ್ ವರೆಗೆ 7 km ಉದ್ದದ ರಸ್ತೆಗೆ ಬರೋಬ್ಬರಿ 11 ಕೋಟಿ ಖರ್ಚು ಮಾಡಿ ಬಿಬಿಎಂಪಿ ಡಾಂಬರೀಕರಣ ಮಾಡಿತ್ತು. ಇದೀಗ ಅದೇ ರಸ್ತೆಯಲ್ಲಿ ರಸ್ತೆ ಕಿತ್ತು ಬಂದಿದೆ. ಒಟ್ಟಾರೆ ಬಿಬಿಎಂಪಿ ಕಳಪೆ ಕಾಮಾಗರಿಗೆ ದಿನವೊಂದರಂತೆ ಸಾಕ್ಷಿಗಳು ಲಭಿಸುತ್ತಿವೆ. ಆದರೆ ಪಾಲಿಕೆ ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತಿದೆ‌. ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿ ಈಗ ಒಂದು ವಾರಕ್ಕೆಲ್ಲಾ ರಸ್ತೆ ಡಾಂಬರು ಕಿತ್ತು ಬರುತ್ತಿದೆ. ಈ ಮೂಲಕ ರಾಜಧಾನಿ ಮಾನ ಪಾಲಿಕೆ ಹರಾಜಾಕುತ್ತಿದೆ‌.

ಬೆಂಗಳೂರಿನ ರಸ್ತೆಯಲ್ಲಿ ಓಡಾಡೋದೆ ಕಷ್ಟವಾಗಿದೆ. ಗುಂಡಿಬಿದ್ದ ರಸ್ತೆಗಳಿಂದ ಅಪಘಾತ ಪ್ರಕರಣಗಳೂ ಸಹ ಹೆಚ್ಚಾಗಿದೆ. ಬೆಂಗಳೂರಿನ ರಸ್ತೆಗಳ ಕಳಪೆ ಕಾಮಗಾರಿಯೇ ಇದಕ್ಕೆಲ್ಲಾ ಕಾರಣ ಎಂದು ಜನ ಸಾಮಾನ್ಯರು ಸಹ BBMPಗೆ ಹಿಡ ಶಾಪ ಹಾಕುತ್ತಿದ್ದಾರೆ.
Published by:Pavana HS
First published: