• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi Campaign: ನಿಮ್ಮೆಲ್ಲರ ಒಂದು ವೋಟ್, ಕರ್ನಾಟಕದ ಭವಿಷ್ಯ ನಿರ್ಧರಿಸಲಿದೆ; ಪ್ರಧಾನಿ ಮೋದಿ

PM Modi Campaign: ನಿಮ್ಮೆಲ್ಲರ ಒಂದು ವೋಟ್, ಕರ್ನಾಟಕದ ಭವಿಷ್ಯ ನಿರ್ಧರಿಸಲಿದೆ; ಪ್ರಧಾನಿ ಮೋದಿ

ಮುಲ್ಕಿ ಸಮಾವೇಶದಲ್ಲಿ ಪ್ರಧಾನಿ ಮೋದಿ

ಮುಲ್ಕಿ ಸಮಾವೇಶದಲ್ಲಿ ಪ್ರಧಾನಿ ಮೋದಿ

PM Narendra Modi: ನಿಮ್ಮ ಒಂದು ಮತ ದೆಹಲಿಯಲ್ಲಿ ಭದ್ರವಾದ ಸರ್ಕಾರವನ್ನು ರಚನೆ ಮಾಡಿದ್ದರಿಂದ ಇಡೀ ವಿಶ್ವದಲ್ಲಿ ಭಾರತದ ಪರ ಘೋಷಣೆಗಳು ಕೇಳುತ್ತಿದೆ. ಕರ್ನಾಟಕದಲ್ಲಿ ಸ್ಥಿರ ಮತ್ತು ಬಲಿಷ್ಠ ಬಿಜೆಪಿ ಸರ್ಕಾರ ರಚನೆ  ಮಾಡಬೇಕು ಎಂದು ಹೇಳಿದರು.

  • Share this:

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮುಲ್ಕಿ ಕೊಲ್ನಾಡಿನಲ್ಲಿ ಆಯೋಜನೆಯ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿc (PM Narendra Modi) ಅವರಿಗೆ ಕೇಸರಿ ಶಾಲು ಹಾಕಿ ಗಣಪತಿ ಮೂರ್ತಿ ನೀಡಿ ಗೌರವಿಸಲಾಯ್ತು. ಕೃಷಿ, ಕ್ರೀಡೆ, ಔದ್ಯೋಗಿಕ, ಆಧುನೀಕರಣದಲ್ಲಿ ಕರ್ನಾಟಕದ (Karnataka) ನಂಬರ್ ಒನ್ ರಾಜ್ಯ ಮಾಡಲು ಬಿಜೆಪಿ ಸಂಕಲ್ಪ ಹೊಂದಿದೆ. ನಮ್ಮ ಒಬ್ಬ ನಾಯಕ ನಿವೃತ್ತಿ ಆಗುತ್ತಿದೆ ಎಂದು ಕಾಂಗ್ರೆಸ್ ವೋಟ್ ಕೇಳುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು.


ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಕಾಂಗ್ರೆಸ್ ಮತ ಕೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂಬ ಮಂತ್ರ ನನ್ನ ಕಿವಿಯಲ್ಲಿ ಗುಂಯ್​ಗುಟ್ಟುತ್ತಿದೆ. ಕರ್ನಾಟಕ ನಂಬರ್ ಒನ್ ಮಾಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.


ಕಾಂಗ್ರೆಸ್​ಗೆ ಕರ್ನಾಟಕ ಎಟಿಎಂ


ದೆಹಲಿಯಲ್ಲಿ ಕುಳಿತಿರುವ ಕುಟುಂಬಕ್ಕೆ ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಮುಂದಾಗುತ್ತಿದೆ. ಶೇ.85ರಷ್ಟು ಕಮಿಷನ್ ಪಡೆಯುವ ಕಾಂಗ್ರೆಸ್ ಕರ್ನಾಟಕವನ್ನು ದಶಕಗಳ ಹಿಂದೆ ತೆಗೆದುಕೊಂಡು ಹೋಗುತ್ತದೆ. ಇನ್ನು ಜೆಡಿಎಸ್​ ಕಾಂಗ್ರೆಸ್​ಗಿಂತ ಭಿನ್ನವಾಗಿಲ್ಲ ಎಂದು ಕಿಡಿಕಾರಿದರು.


ಕಾಂಗ್ರೆಸ್ ಶಾಂತಿ ಮತ್ತು ಅಭಿವೃದ್ಧಿಯ ವೈರಿಯಾಗಿದ್ದು, ಆತಂಕವಾದಿಗಳ ರಕ್ಷಣೆಗೆ ಮುಂದಾಗುತ್ತದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಯಾವ ಜನರು ತಮ್ಮ ರಾಜ್ಯದಲ್ಲಿ ಅಭಿವೃದ್ಧಿ, ಶಾಂತಿ ಬಯಸುವವರು ಕಾಂಗ್ರೆಸ್​ನ್ನು ಮನೆಗೆ ಕಳುಹಿಸುತ್ತಿದ್ದಾರೆ.


ಮುಲ್ಕಿ ಸಮಾವೇಶದಲ್ಲಿ ಪ್ರಧಾನಿ ಮೋದಿ


ದೇಶದ್ರೋಹಿಗಳ ಪರ ನಿಲ್ಲುವ ಕಾಂಗ್ರೆಸ್


ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ದಾಖಲಾದ  ಪ್ರಕರಣಗಳನ್ನು ಕಾಂಗ್ರೆಸ್ ಹಿಂಪಡೆದುಕೊಳ್ಳುತ್ತದೆ. ನಂತರ ಅವರಿಂದಲೇ ಚುನಾವಣೆಯಲ್ಲಿ ಸಹಾಯ ತೆಗೆದುಕೊಳ್ಳುತ್ತದೆ. ದೇಶ ವಿರೋಧಿಗಳ ಪರ ನಿಲ್ಲುವ ಕಾಂಗ್ರೆಸ್, ನಮ್ಮ ಸೈನಿಕರನ್ನ ಅವಮಾನಿಸುತ್ತದೆ. ಇಂದು ಇಡೀ ವಿಶ್ವ ಭಾರತದಲ್ಲಿನ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುತ್ತದೆ. ಆದ್ರೆ ಕಾಂಗ್ರೆಸ್ ದೇಶಕ್ಕೆ ಅಗೌರವನ್ನು ಕೊಡುತ್ತಿದೆ.




ಬಲಿಷ್ಠ ಸರ್ಕಾರಕ್ಕೆ ಮತ ನೀಡಿ


ನಿಮ್ಮ ಒಂದು ಮತ ದೆಹಲಿಯಲ್ಲಿ ಭದ್ರವಾದ ಸರ್ಕಾರವನ್ನು ರಚನೆ ಮಾಡಿದ್ದರಿಂದ ಇಡೀ ವಿಶ್ವದಲ್ಲಿ ಭಾರತದ ಪರ ಘೋಷಣೆಗಳು ಕೇಳುತ್ತಿದೆ. ಕರ್ನಾಟಕದಲ್ಲಿ ಸ್ಥಿರ ಮತ್ತು ಬಲಿಷ್ಠ ಬಿಜೆಪಿ ಸರ್ಕಾರ ರಚನೆ  ಮಾಡಬೇಕು ಎಂದು ಹೇಳಿದರು.


ಕಾಂಗ್ರೆಸ್ ಶಿಕ್ಷಣ, ಶುದ್ಧ ಕುಡಿಯುವ ನೀರು, ಶೌಚಾಲಯದಂತಹ ಹಲವು ಸಮಸ್ಯೆಗಳು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿತ್ತು. ಆದರೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಈ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತಿದೆ.


ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ರಚನೆ


ಕರ್ನಾಟಕ ಕರಾವಳಿಯ ರಕ್ಷಕರು ನಮ್ಮ ಮೀನುಗಾರು. ಆದರೆ ಈ ಹಿಂದಿನ ಸರ್ಕಾರಕ್ಕೆ ನಮ್ಮ ಮೀನುಗಾರರು ಕಾಣಿಸಲಿಲ್ಲ. ಆದರೆ ದೆಹಲಿಯಲ್ಲಿ ಕುಳಿತ ನನಗೆ ಉಡುಪಿ ಮೀನುಗಾರರು ಕಾಣಿಸಿದರ. ಬಿಜೆಪಿ ಸರ್ಕಾರ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಿತು ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.


ಇದನ್ನೂ ಓದಿ:  Ramya: ಅಂಬಿ ಅಂತ್ಯಸಂಸ್ಕಾರಕ್ಕೆ ರಮ್ಯಾ ಏಕೆ ಬಂದಿರಲಿಲ್ಲ? ಮಂಡ್ಯ ಜನರಿಗೆ ಅಸಲಿ ಸತ್ಯ ಹೇಳಿದ ಪದ್ಮಾವತಿ!


ಕರ್ನಾಟಕದ ಯುವಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಹ್ಯಕಾಶದಲ್ಲಿ ಭಾರತ ಪ್ರಜ್ವಲಿಸಲು ಕರ್ನಾಟಕದ ಯುವಕರು ಕಾರಣ. ಬಿಜೆಪಿ ಯುವಕರಿಗಾಗಿ ಹಲವು ಯೋಜನೆಗಳನ್ನು ನೀಡಿದೆ. ದಕ್ಷಿಣ ಕನ್ನಡದ ಕ್ಷೇತ್ರಗಳು ಆರ್ಥಿಕ ಹಬ್ ಆಗಿದ್ದು, ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಆಗಿದೆ.

top videos
    First published: