1ರಿಂದ 9ನೇ ತರಗತಿವರೆಗೆ ಪರೀಕ್ಷೆ ಇಲ್ಲದೆ ಪಾಸ್?; ಇಂದು ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಈಗಾಗಲೇ 6-9ನೇ ತರಗತಿಗೆ ಪರೀಕ್ಷೆ ನಡೆಸೋಕೆ ಅವಕಾಶ ಕೋರಿ ರುಪ್ಸಾ ಸಂಘಟನೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಹೀಗಾಗಿ 1 ರಿಂದ 9ನೇ ತರಗತಿಗಳಿಗೆ  ಮೌಲ್ಯಾಂಕನ ಪರೀಕ್ಷೆ ನಡೆಸಬೇಕಾ ಅಥವಾ ಪ್ರಮೋಟ್ ಮಾಡಿದ್ರೆ ಉತ್ತಮನಾ ಎಂದು ಖಾಸಗಿ ಶಾಲೆಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಏ.05): ಕೊರೋನಾ ಎರಡನೇ ಅಲೆ ಆರ್ಭಟಕ್ಕೆ ಇಡೀ ರಾಜ್ಯವೇ ನಲುಗಿ ಹೋಗಿದೆ. ಓಪನ್ ಆಗಿದ್ದ ಶಾಲೆಗಳು ಏ.20ರವರೆಗೆ ಮತ್ತೆ ಬಂದ್ ಆಗಿವೆ. ಆದ್ರೆ ಈ ವರ್ಷ ಪರೀಕ್ಷೆ ನಡೆಸಬೇಕಾ ಬೇಡವೇ? ಎನ್ನುವ ಗೊಂದಲ‌ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ‌. ಈ ಎಲ್ಲಾ ಗೊಂದಲಗಳಿಗೆ ಇಂದು ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಸಭೆಯಲ್ಲಿ ನಿರ್ಧಾರವಾಗಲಿದೆ.

ಎರಡನೆ ಅಲೆಗೆ ರಾಜ್ಯದಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೆಲ ತಿಂಗಳ ಹಿಂದೆಯಷ್ಟೇ ಆರಂಭವಾಗಿದ್ದ ಶಾಲೆಗಳು ಮತ್ತೆ ಸರ್ಕಾರ ಬಂದ್ ಮಾಡಿದೆ. ಈ ವರ್ಷ ಖಾಸಗಿ ಶಾಲಾ ಮಕ್ಕಳಿಗೆ ಆನ್ ಲೈನ್, ಸರ್ಕಾರಿ ಶಾಲಾ ಮಕ್ಕಳಿಗೆ ಸಂವೇದನಾ ಮೂಲಕ ತರಗತಿ ಮಾಡಿದ ಹಿನ್ನೆಲೆ, ಸರ್ಕಾರಕ್ಕೆ ಈಗ ಈ ವಿದ್ಯಾರ್ಥಿಗಳಿಗೆ ಹೇಗೆ ಪರೀಕ್ಷೆ ನಡೆಸಬೇಕು ಅನ್ನೊ ಟೆನ್ಷನ್ ಶುರುವಾಗಿದೆ.

1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸಂಬಂಧ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ಸಭೆ ಕರೆದಿದ್ದಾರೆ. ಶಿಕ್ಷಣ ತಜ್ಞ ನಿರಂಜನಾರಾಧ್ಯ, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಕರ್ನಾಟಕ, ಕ್ಯಾಮ್ಸ್ ಸಂಘಟನೆಗಳ ಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸಹ ಇಂದು ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದು, ಇಂದೇ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. 1 ರಿಂದ 9ನೇ ತರಗತಿಗಳವರೆಗೆ ಬಂದ್ ಮಾಡಲಾಗಿದ್ದು, ಇದೀಗ ಶಾಲಾಮಕ್ಕಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ? ಎಂಬ ಕುರಿತು ಮಹತ್ವದ ನಿರ್ಧಾರ ಇಂದು ಪ್ರಕಟವಾಗಲಿದೆ.

Coronavirus: ಅಮೆರಿಕಾ ಬಿಟ್ಟರೆ ದಿನವೊಂದಕ್ಕೆ ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ ಆಗಿದ್ದು ಭಾರತದಲ್ಲೇ..!

ಈಗಾಗಲೇ 6-9ನೇ ತರಗತಿಗೆ ಪರೀಕ್ಷೆ ನಡೆಸೋಕೆ ಅವಕಾಶ ಕೋರಿ ರುಪ್ಸಾ ಸಂಘಟನೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಹೀಗಾಗಿ 1 ರಿಂದ 9ನೇ ತರಗತಿಗಳಿಗೆ  ಮೌಲ್ಯಾಂಕನ ಪರೀಕ್ಷೆ ನಡೆಸಬೇಕಾ ಅಥವಾ ಪ್ರಮೋಟ್ ಮಾಡಿದ್ರೆ ಉತ್ತಮನಾ ಎಂದು ಖಾಸಗಿ ಶಾಲೆಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತೆ. ಇದರ ಜೊತೆ 2021-22ನೇ ಸಾಲಿನ ಖಾಸಗಿ ಶಾಲೆಗಳ ಪುಸ್ತಕ ಖರೀದಿ, ಬಿಸಿಯೂಟ ನೌಕರರ ಬೇಡಿಕೆ ಸೇರಿದಂತೆ ಶಿಕ್ಷಣ ಇಲಾಖೆಗೆ ಸೇರಿದ ಹಲವು ಗೊಂದಲಗಳ ಬಗ್ಗೆ ಸಭೆ ನಡೆಸೋಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಆದ್ರೆ, ಸಭೆಗೆ ಪೋಷಕರನ್ನ ಕಡೆಗಣಿಸಿ ಆಹ್ವಾನ ನೀಡಿಲ್ಲ ಅಂತ ಪೋಷಕರ ಶಿಕ್ಷಣ ಇಲಾಖೆ ವಿರುದ್ಧ ಸಮಾಧಾನ ಹೊರ ಹಾಕುತ್ತಿದ್ದಾರೆ.

ಮೌಲ್ಯಾಂಕನ ಎಂದರೆ?

ಮಕ್ಕಳ ಚಟುವಟಿಕೆ, ಕಲಿಕಾ ಆಸಕ್ತಿ, ಸಾಮರ್ಥ್ಯ, ಮೌಖಿಕ ಪರೀಕ್ಷೆ, ಹಿಂದಿನ ಕಿರು ಪರೀಕ್ಷೆಗಳಲ್ಲಿ ಪಡೆದಿರುವ ಅಂಕ.

ಇವುಗಳನ್ನು ಆಧರಿಸಿ ಮೌಲ್ಯಾಂಕನ ಮಾಡಿ ಆ ಮೌಲ್ಯಮಾಪನದ ಆಧಾರ ಮೇಲೆ  ಮುಂದಿನ ತರಗತಿಗೆ ತೇರ್ಗಡೆ.

9ನೇ ತರಗತಿ ಮಕ್ಕಳಿಗೂ ಮೌಲ್ಯಾಂಕನ ಇಲ್ಲವೇ ಮಲ್ಟಿಪಲ್‌ ಚಾಯ್ಸ್ ಪರೀಕ್ಷೆ
ಖಾಸಗಿ ಶಾಲೆಗಳಲ್ಲಿ ಹೇಗೆ ಪರೀಕ್ಷೆ?

ಖಾಸಗಿ ಶಾಲೆಗಳಲ್ಲಿ 1ರಿಂದ 9ನೇ ತರಗತಿಗೆ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸುತ್ತಿವೆ.

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆಗಳು ಮುಗಿದಿದ್ದು, ಫಲಿತಾಂಶವಷ್ಟೇ ಬಾಕಿ.

ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ಮೂರ್ನಾಲ್ಕು ವಿಷಯಗಳ ಪರೀಕ್ಷೆ ನಡೆದಿದೆ.

ಇದೇ 10ರೊಳಗೆ ಉಳಿದ ಎರಡು ವಿಷಯಗಳ ಪರೀಕ್ಷೆಗಳು ಮುಗಿಯುವ ಸಾಧ್ಯತೆ.

ಸಭೆ ಬಳಿಕ ತೆಗೆದುಕೊಳ್ಳಬಹುದಾದ ನಿರ್ಧಾರಗಳು  • ಖಾಸಗಿ ಶಾಲೆಗಳಲ್ಲಿ 1ರಿಂದ 9ನೇ ತರಗತಿಗೆ ಆನ್‌ಲೈನ್‌ನಲ್ಲೇ ಪರೀಕ್ಷೆ

  • ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ಆಗಿಲ್ಲ

  • ಅಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ

  • ಹೀಗಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸ್‌ ಮಾಡಲು ಚಿಂತನೆ

  • 6ರಿಂದ 8ನೇ ತರಗತಿ ಮಕ್ಕಳ ಕಲಿಕಾ ಆಸಕ್ತಿ, ಚಟುವಟಿಕೆ ಆಧರಿಸಿ ತೇರ್ಗಡೆ

  • 9ನೇ ತರಗತಿ ವಿದ್ಯಾರ್ಥಿಗಳಿಗೆ  ಮರು ವರ್ಷ ಬೋರ್ಡ್ ಎಕ್ಸಾಂ ಇರೋ ಹಿನ್ನಲೆ

  • 9 ನೇ ತರಗತಿ ವಿದ್ಯಾರ್ಥಿಗಳಿಗೆ ಮಲ್ಟಿಪಲ್ ಚಾಯ್ಸ್ ಪರೀಕ್ಷೆಒಟ್ಟಿನಲ್ಲಿ ಕೊರೊನಾ ಸೋಂಕು ಹಿನ್ನೆಲೆ ಶಾಲೆಗಳೇನೊ ಬಂದ್ ಆಗಿವೆ. ಆದ್ರೆ ಕಳೆದ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗೆ ಸರ್ಕಾರ ಪ್ರೊಮೊಟ್  ಮಾಡುತ್ತಾ, ಇಲ್ವಾ ಎನ್ನೋದು ಗೊಂದಲಗಳಿಗೆ ಇಂದಿನ ಸಭೆಯಲ್ಲಿ ಉತ್ತರ ಸಿಗಲಿದೆ.
Published by:Latha CG
First published: